ಸುನೀತ ಸಂಪದ

Author : ಚೆನ್ನವೀರ ಕಣವಿ

Pages 224

₹ 100.00




Published by: ಲೋಹಿಯಾ ಪ್ರಕಾಶನ
Address: "ಕ್ಷಿತಿಜ', ಕಪ್ಪಗಲ್ಲು ರಸ್ತೆ, ಬಳ್ಳಾರಿ - 583 103

Synopsys

‘ಸುನೀತ ಸಂಪದ’ಚೆನ್ನವೀರ ಕಣವಿ ಅವರ ಕವನಸಂಕಲನವಾಗಿದೆ. ಕನ್ನಡಕ್ಕೆ ಹೆಚ್ಚಿನ ಸಂಖ್ಯೆಯ ಸುನೀತಗಳನ್ನು ರಚಿಸುತ್ತ, ಕಾವ್ಯದ ಮೂಲಕ ನಮ್ಮನ್ನು ಭಾವಲೋಕಕ್ಕೆ ಆಮಂತ್ರಿಸುವ ಕೃತಿಯಾಗಿದೆ.

About the Author

ಚೆನ್ನವೀರ ಕಣವಿ
(28 June 1928)

‘ಸಮನ್ವಯ ಕವಿ’ ಎಂದು ಗುರುತಿಸಲಾಗುವ ಚೆನ್ನವೀರ ಕಣವಿ ಅವರು ನವೋದಯ ಮತ್ತು ನವ್ಯ ಸಾಹಿತ್ಯಗಳೆರಡರಲ್ಲಿಯೂ ಸಕ್ರಿಯವಾಗಿ ಪಾಲುಗೊಂಡವರು. ಧಾರವಾಡ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಜನಿಸಿದರು. ತಂದೆ ಸಕ್ರಪ್ಪ- ತಾಯಿ ಪಾರ್ವತವ್ವ. ಶಿರುಂಡ, ಗರಗಗಳಲ್ಲಿ ಪ್ರಾಥಮಿಕ ಅಭ್ಯಾಸ ಮುಗಿಸಿದ ಮೇಲೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ೧೯೫0ರಲ್ಲಿ ಬಿ.ಎ. ಪದವಿ (1950), ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.ಪದವಿ (1952) ಗಳಿಸಿದರು. ಕರ್ನಾಟಕದ ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಕಾರ್ಯದರ್ಶಿ (1952) ಯಾಗಿ ಸೇವೆ ಪ್ರಾರಂಭಿಸಿದ ಕಣವಿ ಅವರು ಅನಂತರ 1958ರಲ್ಲಿ ಅದರ ನಿರ್ದೇಶಕರಾದರು. ಹಲವಾರು ಪ್ರಶಸ್ತಿಗಳು ಕಣವಿ ಅವರ ಸಾಹಿತ್ಯ ...

READ MORE

Reviews

ಹೊಸತು- 2003- ಎಪ್ರಿಲ್‌

ಪಶ್ಚಿಮದ ಸಾಹಿತ್ಯ ಪ್ರಕಾರವೆಂದೇ ಪರಿಗಣಿಸಲ್ಪಟ್ಟ ಸಾನೆಟ್‌ಗಳ ರಚನೆ ಕನ್ನಡದಲ್ಲಿ ಸಾಧ್ಯವೆಂದು ತೋರಿಸಿದ ನಾಡಿನ ಹೆಸರಾಂತ ಕವಿ ಚೆನ್ನವೀರ ಕಣವಿ, ಕನ್ನಡಕ್ಕೆ ಹೆಚ್ಚಿನ ಸಂಖ್ಯೆಯ ಸುನೀತಗಳನ್ನು ರಚಿಸುತ್ತ, ಕಾವ್ಯದ ಮೂಲಕ ನಮ್ಮನ್ನು ಭಾವಲೋಕಕ್ಕೆ ಆಮಂತ್ರಿಸುವ ಈ ಕೃತಿ ಅವರ ಸುನೀತಿಗಳ ಸಂಗ್ರಹ. ನಡೆದ ಒಂದು ಘಟನೆಯಿರಲಿ, ಪುಟ್ಟ ವಸ್ತುವಾಗಲಿ, ವ್ಯಕ್ತಿ ಚಿತ್ರಗಳ ಎತ್ತರದ ಗಾಂಭೀರ್ಯವಿರಲಿ, ಅದನ್ನವರು ತನ್ನ ತೆಕ್ಕೆಗೆ ಎಳೆದುಕೊಂಡು ಅದಕ್ಕೊಂದು ಚೌಕಟ್ಟು ನೀಡಿ ಭದ್ರಪಡಿಸುತ್ತಾರೆ.

Related Books