ಅರಲು-ಬರಲು

Author : ವಿ. ಸೀತಾರಾಮಯ್ಯ

Pages 184

₹ 90.00
Year of Publication: 1972
Published by: ವಸಂತ ಪ್ರಕಾಶನ
Address: ನಂ 360, 10ನೇ ಬಿ- ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಜಯನಗರ, ಬೆಂಗಳೂರು-11

Synopsys

‘ಅರಲು-ಬರಲು’ ವಿ. ಸೀತಾರಾಮಯ್ಯ ಅವರ ಕವನ ಸಂಕಲನ. ಈ ಕೃತಿ ಐವತ್ತೊಂದು ಕವನಗಳನ್ನು ಮತ್ತು ಮೂವತ್ತೇಳು ಪುಟಗಳ ವಿಸ್ತಾರವಾದ ಮುನ್ನುಡಿಯನ್ನು ಒಳಗೊಂಡಿದೆ. ಬದುಕಿನಲ್ಲಿ ಅರಳಿನೊಂದಿಗೆ ಬರಲೂ ಇಲ್ಲಿ ಅಭಿವ್ಯಕ್ತಿ ಪಡೆದಿರಬಹುದೆಂಬ ಅವರ ಮಾತು ಸಹಜ ವಿನಯ, ಬರಲು ಕೂಡ ಶ್ರೇಷ್ಠ ಕಾವ್ಯವಸ್ತುವಾಗಬಲ್ಲದು ಎನ್ನುವುದನ್ನೂ ಅನೇಕ ಹಿರಿಯ ಕವಿಗಳು ತೋರಿಸಿಕೊಟ್ಟಿದ್ದಾರೆ. ಇಲ್ಲಿಯ ಕೆಲವು ರಚನೆಗಳಾದರೂ ಅದನ್ನೇ ತಿಳಿಸುತ್ತವೆ. ಈ ಸಂಗ್ರಹದಲ್ಲಿ ಎದ್ದು ಕಾಣುವ ಕಾವ್ಯಸಿದ್ದಿ ಅದಕ್ಕೆ ಮುನ್ನುಡಿಯಾಗಿ ಹೇಳಿದ ಮಾತುಗಳ ಮಹತ್ವದ್ದಾಗಿದೆ. “ಹೇಳಿದ ಮಾತುಗಳು ಆತ್ಮ ಸಮರ್ಥನೆಯಾಗಿ ಕಾಣಬಹುದಾದರೂ ಇಪ್ಪತ್ತನೆಯ ಶತಮಾನದ ಕೊನೆಯ ಘಟ್ಟದಲ್ಲಿ ಭಾವಗೀತೆ ಪಡೆದ ವ್ಯಾಪ್ತಿ ವಿಸ್ತಾರಗಳ ವಿಮರ್ಶಾತ್ಮಕ ವ್ಯಾಖ್ಯಾನವನ್ನು ಒಳಗೊಂಡಿವೆ.

ಅನೇಕ ಮಹತ್ವದ ಪ್ರಶ್ನೆಗಳನ್ನು ಎತ್ತಲಾಗಿದೆ : ವಿಮರ್ಶೆಯಲ್ಲಿ ವಸ್ತುನಿಷ್ಠವಾದ ಮಾನಕ ಸಾಧ್ಯವೆ ? ನಮ್ಮ ಸಾಹಿತ್ಯದಲ್ಲಿಯ 'ಭಾರತೀಯತೆ' ಎಂದರೇನು ? ಬದಲಾವಣೆ ಯಾವಾಗಲೂ ಅನಿವಾರ್ಯವೆ ? - ಅದು ಪ್ರಗತಿ ಸಾಧಕವೇ ಆಗಿರುತ್ತದೆಯೆ ? ಲೇಖಕನ ಸ್ವಾತಂತ್ರ್ಯದ ಸ್ವರೂಪವಂಥದು ? ಅಭಿವ್ಯಕ್ತಿಯ ಇತಿಮಿತಿಗಳು ಯಾವವು ? ಇಂಥ ಪ್ರಶ್ನೆಗಳ ಚರ್ಚೆ ಈ ಕವನ ಸಂಗ್ರಹಕ್ಕೆ ಹೆಚ್ಚಿನ ಘನತೆಯನ್ನು ತಂದು ಕೊಟ್ಟಿದೆ.

About the Author

ವಿ. ಸೀತಾರಾಮಯ್ಯ
(02 October 1899 - 04 September 1983)

ಕವಿ, ವಿದ್ವಾಂಸ, ವಿಮರ್ಶಕ,  ಕಲಾರಾಧಕರಾಗಿದ್ದ ವಿ. ಸೀತಾರಾಮಯ್ಯ ಕನ್ನಡ ನವೋದಯ ಸಾಹಿತ್ಯದ ಪ್ರಮುಖ ಲೇಖಕರರಲ್ಲಿ ಒಬ್ಬರು. ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆಯಲ್ಲಿ 1899ರ ಅಕ್ಟೋಬರ್ 2ರಂದು ಜನಿಸಿದರು. ತಂದೆ ವೆಂಕಟರಾಮಯ್ಯ ಮತ್ತು ತಾಯಿ ದೊಡ್ಡ ವೆಂಕಮ್ಮ. ಬೆಂಗಳೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ಬಿ. ಎ. (1920), ಎಂ. ಎ. (1922) ಪದವಿ ಪಡೆದರು. ಮುಂಬಯಿಗೆ ತೆರಳಿ ಎಲ್. ಎಲ್.ಬಿ. ಪದವಿ ಗಳಿಸಿ ಮೈಸೂರಿಗೆ ಹಿಂತಿರುಗಿದರು. ಶಾರದಾ ವಿಲಾಸ ಕಾಲೇಜಿನಲ್ಲಿ ಉಪಾಧ್ಯಾಯ (1923) ರಾದರು. ಬೆಂಗಳೂರಿನ ಇಂಟರ್ ಮೀಡಿಯೇಟ್ ಕಾಲೇಜು, ಸೆಂಟ್ರಲ್ ಕಾಲೇಜು, ಮೈಸೂರು ಮಹಾರಾಜ ಕಾಲೇಜು, ಚಿಕ್ಕಮಗಳೂರಿನ ...

READ MORE

Awards & Recognitions

Reviews

ಅರಲು-ಬರಲು

ಐವತ್ತೊಂದು ಕವನಗಳನ್ನು ಮತ್ತು ಮೂವತ್ತೇಳು ಪುಟಗಳ ವಿಸ್ತಾರವಾದ ಮುನ್ನುಡಿಯನ್ನು ಒಳಗೊಂಡ ’ಅರಲು-ಬರಲು’ ವಿ. ಸೀ. ಅವರ ಐದನೆಯ ಕವನ ಸಂಗ್ರಹ. ಬದುಕಿನಲ್ಲಿ ಅರಳಿನೊಂದಿಗೆ ಬರಲೂ ಇಲ್ಲಿ ಅಭಿವ್ಯಕ್ತಿ ಪಡೆದಿರಬಹುದೆಂಬ ಅವರ ಮಾತು ಸಹಜ ವಿನಯ, ಬರಲು ಕೂಡ ಶ್ರೇಷ್ಠ ಕಾವ್ಯವಸ್ತುವಾಗಬಲ್ಲದು ಎನ್ನುವುದನ್ನೂ ಅನೇಕ ಹಿರಿಯ ಕವಿಗಳು ತೋರಿಸಿಕೊಟ್ಟಿದ್ದಾರೆ. ಇಲ್ಲಿಯ ಕೆಲವು ರಚನೆಗಳಾದರೂ ಅದನ್ನೇ ತಿಳಿಸುತ್ತವೆ. ಈ ಸಂಗ್ರಹದಲ್ಲಿ ಎದ್ದು ಕಾಣುವ ಕಾವ್ಯಸಿದ್ದಿ ಅದಕ್ಕೆ ಮುನ್ನುಡಿಯಾಗಿ ಹೇಳಿದ ಮಾತುಗಳ ಮಹತ್ವದ್ದಾಗಿದೆ. “ಹೇಳಿದ ಮಾತುಗಳು ಆತ್ಮ ಸಮರ್ಥನೆಯಾಗಿ ಕಾಣಬಹುದಾದರೂ ಇಪ್ಪತ್ತನೆಯ ಶತಮಾನದ ಕೊನೆಯ ಘಟ್ಟದಲ್ಲಿ ಭಾವಗೀತೆ ಪಡೆದ ವ್ಯಾಪ್ತಿ ವಿಸ್ತಾರಗಳ ವಿಮರ್ಶಾತ್ಮಕ ವ್ಯಾಖ್ಯಾನವನ್ನು ಒಳಗೊಂಡಿವೆ. ಅನೇಕ ಮಹತ್ವದ ಪ್ರಶ್ನೆಗಳನ್ನು ಎತ್ತಲಾಗಿದೆ : ವಿಮರ್ಶೆಯಲ್ಲಿ ವಸ್ತುನಿಷ್ಠವಾದ ಮಾನಕ ಸಾಧ್ಯವೆ ? ನಮ್ಮ ಸಾಹಿತ್ಯದಲ್ಲಿಯ 'ಭಾರತೀಯತೆ' ಎಂದರೇನು ? ಬದಲಾವಣೆ ಯಾವಾಗಲೂ ಅನಿವಾರ್ಯವೆ ? - ಅದು ಪ್ರಗತಿ ಸಾಧಕವೇ ಆಗಿರುತ್ತದೆಯೆ ? ಲೇಖಕನ ಸ್ವಾತಂತ್ರ್ಯದ ಸ್ವರೂಪವಂಥದು ? ಅಭಿವ್ಯಕ್ತಿಯ ಇತಿಮಿತಿಗಳು ಯಾವವು ? ಇಂಥ ಪ್ರಶ್ನೆಗಳ ಚರ್ಚೆ ಈ ಕವನ ಸಂಗ್ರಹಕ್ಕೆ ಹೆಚ್ಚಿನ ಘನತೆಯನ್ನು ತಂದು ಕೊಟ್ಟಿದೆ.

ವಿ.ಸೀ. ಅವರ ಬಹುಶ್ರುತವಾದ ವಿಮರ್ಶಾದೃಷ್ಟಿ, ಆಳವಾದ ಸಂವೇದನಾಶೀಲತೆ ಅಪರೂಪ. ಸಾಹಿತ್ಯ ಪ್ರಪಂಚದಲ್ಲಿಯ ಬೆಳವಣಿಗೆಗಳಿಗೆ ತೆರೆದ ಹೃದಯದಿಂದ ಪ್ರತಿಸ್ಪಂದಿಸಿ ಬೆಳೆದ ಅವರು ಪ್ರಯೋಗಶೀಲತೆಯನ್ನು ಎಂದಿಗೂ ಸ್ವಾಗತಿಸಿದ್ದಾರೆ. ಕಾಲಕ್ಕೆ ತಕ್ಕಂತೆ ಅಭಿರುಚಿ ಹಾಗೂ ಶಿಷ್ಟಾಶಿಷ್ಟಗಳ ಮಿತಿಮೇರೆಗಳು ಬದಲಾದರೂ ಯಾವ ಮಿತಿ ಮೇರೆಗಳು ಬೇಡ ಎಂದು ಯಾವ ಸಮಾಜವೂ ಹೇಳಲಾರದು ಎನ್ನುವುದು ಅವರ ನಿಲುವು. ಇದರ ಪರಿಣಾಮವೆಂದರೆ ಆಳವಾಗಿ ಅನುಭವಕ್ಕೆ ಬಂದು ಪರಿಣಾಮಕಾರಿಯಾಗಿ ಮಾತುಗಳನ್ನು ಪಡೆದ ಎಲ್ಲವನ್ನು ಕಾವ್ಯವೆನ್ನಬಹುದು ಎನ್ನುವ ಮಟ್ಟಿಗೆ ಅವರ ಕಾವ್ಯದ ವ್ಯಾಪ್ತಿ ವಿಸ್ತರಿಸುತ್ತದೆ.

ನಿಸರ್ಗದ ವಿಷಯದಲ್ಲಿ ಪ್ರೀತಿ, ಹೆಣ್ಣು ಗಂಡುಗಳ ನಡುವಿನ ಒಲವು - ನಲಿವು ನೋವುಗಳು, ಕಳೆದು ಹೋದ ಕಾಲಕ್ಕಾಗಿ ಕಳೆದು ಹೋಯಿತೇ ಎಂಬ ಭಾವ, ಮುಂಬರುವ ಒಳ್ಳೆಯದರ ಬಗೆಯಲ್ಲಿ ಭರವಸೆ, ಇಂಥ ಅನೇಕ ಭಾವಗಳು ಇಲ್ಲಿ ಕಾವ್ಯದೇಹವನ್ನು ಪಡೆದಿವೆ. ಆಕಾಶವಾಣಿಗಾಗಿ ಬರೆದ ಪ್ರಾಸಂಗಿಕ ರಚನೆಗಳು, ವ್ಯಕ್ತಿಗತ ಕಷ್ಟಗಳನ್ನು ಕುರಿತ ತಾತ್ವಿಕ ಚಿಂತನೆಗಳು, ಸುತ್ತಲಿನ ಬದುಕಿನಲ್ಲಿ ಕಂಡ ಅನ್ಯಾಯಗಳನ್ನು ಕುರಿತ ಅಸಹನೆ, ಆವೇಶ, ಅಣಕು,ವಿಡಂಬನೆಗಳು ಇಲ್ಲಿ ಕಾವ್ಯವಾಗಿ ಅವತರಿಸಿ ಭಾವಕಾವ್ಯದ ವಿಸ್ತಾರ ವೈವಿಧ್ಯಗಳಿಗೆ ನಿದರ್ಶನಗಳಾಗಿ ನಿಲ್ಲುತ್ತವೆ.

ಇಲ್ಲಿಯ ರೀತಿ ಹಳ ಹೊಸತುಗಳ ಸಮ್ಮಿಶ್ರಣವೆನ್ನಬೇಕು. ಹಿಂದಣ ರಚನಾ ವಿಧಾನಗಳ ಅಡಿಪಾಯದ ಮೇಲೆ ಮುಕ್ತ ಛಂದಸ್ಸಿನ ಸ್ವತಂತ್ರ ಲಯ - ಗತಿಗಳು ತಮ್ಮ ಶಕ್ತಿಯ ವಿಲಾಸವನ್ನು ಮೆರೆಯುತ್ತವೆ. ಅದರ ಸೊಗಸು ಕವನಗಳನ್ನು ಓದಿ ಹೇಳಿದಾಗ ಮಾತ್ರ ಅನುಭವಿಸಬಲ್ಲದ್ದಾಗುತ್ತದೆ. ಇಲ್ಲಿಯ ರಚನೆಗಳೆಲ್ಲವೂ ಈ ರೀತಿಗೆ ಸೇರಿದುವಾದ್ದರಿಂದ ಈ ಸಂಗ್ರಹ ವಿ. ಸೀ. ಅವರ ಕಾವ್ಯರಚನಾ ವಿಧಾನದ ವೈವಿಧ್ಯವನ್ನು ಪ್ರತಿನಿಧಿಸುತ್ತದೆ ಎಂದು ಹೇಳುವ ಹಾಗಿಲ್ಲ. ಸಂಗೀತಕ್ಕೆ ಅಳವಟ್ಟು ಹಾಡಿ ಹೇಳಬಹುದಾದ ಅನೇಕ ಭಾವಗೀತೆಗಳನ್ನು ರಚಿಸಿ ಗೇಯ ಕಾವ್ಯಕ್ಷೇತ್ರವನ್ನು ವಿಸ್ತರಿಸಿದ ಅವರ ವಿಶಿಷ್ಟ ಪ್ರತಿಭೆಯ ಪರಿ ಇಲ್ಲಿ ಕಾಣಸಿಗದಾದರೂ ಲಲಿತಕಲೆಗಳೆಲ್ಲವುಗಳಲ್ಲಿಯ ಅವರ ತೀವ್ರ ಆಸಕ್ತಿ, ಅರ್ಥಶಾಸ್ತ್ರ, ತತ್ವಶಾಸ್ತ್ರಗಳ ಆಳವಾದ ವ್ಯಾಸಂಗ ಮುಂತಾದ ಪ್ರಭಾವಗಳಿಂದ ಶ್ರೀಮಂತವಾಗಿ ಮಿಡಿಯುವ ಅವರ ಚೇತನದ ಹತ್ತಾರು ಬಗೆಗಳನ್ನು ಇಲ್ಲಿಯ ಕವನಗಳಲ್ಲಿ ಕಾಣಬಹುದು, ’ಅರಲು-ಬರಲು' ಅಂಥ ವ್ಯಕ್ತಿ ವಿಶಿಷ್ಟವಾದ ಮುದ್ರೆಯನ್ನು ಹೊತ್ತ ಕವನ ಸಂಗ್ರಹ

-ವಿ ಎಂ ಇನಾಂದಾರ್


 

ಅರಲು-ಬರಲು (ಕವನ ಸಂಕಲನ)

ಮೊದಲನೆಯ ಆವೃತ್ತಿ 1972 

ಐ ಬಿ ಎಚ್ ಪ್ರಕಾಶನ ಗಾಂಧಿನಗರ ಬೆಂಗಳೂರು 560009 

ಕ್ರೌನ್ ಅಷ್ಟ 184 ಪುಟಗಳು ಬೆಲೆ ರೂ. 10-00 

ಕೃಪೆ: ಗ್ರಂಥಲೋಕ, ಜೂನ್‌ 1981

 

Related Books