ಅವ್ವ ಮತ್ತು ಅಬ್ಬಲಿಗೆ

Author : ಶೋಭಾ ಹಿರೇಕೈ ಕಂಡ್ರಾಜಿ

Pages 108

₹ 100.00




Year of Publication: 2019
Published by: ನೇಕಾರ ಪ್ರಕಾಶನ
Address: ಗುರುಮಂದಿರ ರಸ್ತೆ, ಗೊಲ್ಗೇರಿ ಓಣಿ, ಬನವಾಸಿ ರಸ್ತೆ, ಶಿರಸಿ-581401
Phone: 9482149410

Synopsys

‘ಅವ್ವ ಮತ್ತು ಅಬ್ಬಲಿಗೆ’  ಕವಿ ಶೋಭಾ ಹಿರೇಕೈ ಕಂಡ್ರಾಜಿ ಅವರ ಮೊದಲ ಕವನ ಸಂಕಲನ. ಈ ಕೃತಿಗೆ ಹಿರಿಯ ಸಾಹಿತಿ ಸುಬ್ರಾಯ ಮತ್ತೀಹಳ್ಳಿಯವರು ಬೆನ್ನುಡಿ ಬರೆದಿದ್ದಾರೆ. ಪುಸ್ತಕದ ಕುರಿತು ಬರೆಯುತ್ತಾ..‘ಕಾವ್ಯ ಚಿಗುರಿದಷ್ಟೂ ಸಂಸ್ಕೃತಿಯ ಶೋಭೆ ಮಿಂಚುತ್ತದೆ. ಶೋಭಾಯಮಾನಗೊಳ್ಳುತ್ತದೆ. ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಕ ಕವಯತ್ರಿಯಾಗಿ ಭರವಸೆಯ ಬೀಜ ಬಿತ್ತುತ್ತಿರುವ ಸೋಭಾ ಹಿರೇಕಾ ಕಂಡ್ರಾಜಿ ಮುಕ್ತ, ಆಪ್ತ ಸತ್ವಪೂರ್ಣ ನುಡಿಯ ಮೂಲಕ ಕುತೂಹಲ ಸುಷ್ಟಿಸುತ್ತಿದ್ದಾರೆ’ ಎನ್ನುತ್ತಾರೆ. 

‘" ಈಗೀಗ ಮಲ್ಲಿಗೆಯ ಕಂಪಿಗೆ

ಮಾರು ಹೋದರೂ

ಅಬ್ಬಲಿಗೆಯ ಕೆಂಪನ್ನು ಮರೆತಿಲ್ಲ ".....

 ಎಂದು ಆತ್ಮವಿಶ್ವಾಸದಿಂದ ಬರೆಯುವ ಶೋಭಾ ಅವರ ಕವಿತೆಗಳಲ್ಲಿ ಜೀವತಂತು ಮಿಡಿವ ಸರಳ ಗೀತೆಗಳಿವೆ. ಬದುಕು ಕಾದ ಕೊಪ್ಪರಿಗೆಯಂತಿದ್ದರೂ ಮೌನವಾಗಿ ನಿರ್ಲಿಪ್ತವಾಗಿ ಅನುಭವಿಸುತ್ತಲೇ ಸಾತ್ವಿಕ ಪ್ರತಿಭಟನೆಗೈಯ್ಯುವ ಮಾತೃ ಸಮ್ಮಿತದ ತಣ್ಣನೆ. ಅಭಿವ್ಯಕ್ತಿ ಬೆರಗು ಮೂಡಿಸುತ್ತದೆ. ತಮ್ಮ ಸುತ್ತಲಿನ ಸಾಂಸ್ಕೃತಿಕ ಚೈತನ್ಯವನ್ನು ಹೀರಿಕೊಂಡು ತಮ್ಮ ಪುಟ್ಟ ಬೊಗಸೆಯಲ್ಲಿ ನೀಡುತ್ತಿರುವ ಶೋಭಾ ಅವರ ಪ್ರಯತ್ನ ಕನ್ನಡ ಕಾವ್ಯಲೋಕದಲ್ಲಿ ಹೊಸ ಭರವಸೆ ಮೂಡಿಸುತ್ತಿದೆ. 

About the Author

ಶೋಭಾ ಹಿರೇಕೈ ಕಂಡ್ರಾಜಿ

ಶೋಭಾ ಹಿರೇಕೈ ಕಂಡ್ರಾಜಿ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರು. ಸದ್ಯ ಸಿದ್ದಾಪುರ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಶೋಭಾ ಕನ್ನಡ ಕಾವ್ಯಲೋಕದ ಭರವಸೆಯ ಕವಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇವರ ಮೊದಲ ಕವನ ಸಂಕಲನ 'ಅವ್ವ ಮತ್ತು ಅಬ್ಬಲಿಕೆ' ಪ್ರಕಟಣೆಗೊಳ್ಳುತ್ತಿದ್ದು. ಕವಿತೆಗಳ ಮೂಲಕ ಮನೆಮಾತಾಗಿದ್ದಾರೆ. ...

READ MORE

Related Books