ಉರಿವ ಒಲೆಯ ಮುಂದೆ

Author : ಬಿ. ಶ್ರೀನಿವಾಸ

Pages 80

₹ 60.00




Published by: ಲಡಾಯಿ ಪ್ರಕಾಶನ
Phone: 9480286844

Synopsys

ಬಿ. ಶ್ರೀನಿವಾಸರವರ ಕವಿತೆಗಳ ಸಂಗ್ರಹವಾದ ’ಉರಿವ ಒಲೆಯ ಮುಂದೆ’ ಕೃತಿಯು ಸದ್ಯದ ಸಂದರ್ಭದಲ್ಲಿ ಕಾವ್ಯ ಬೀದಿಗೆ ಬಂದ, ಬರಬೇಕಾದ ಅಗತ್ಯವನ್ನು ಸಮರ್ಥಿಸಿಕೊಳ್ಳುತ್ತವೆ.

'ಕಾವ್ಯ' ಎಂಬ ಆತ್ಮಹತ್ಯೆಗೆ ಒಳಗಾಗದ ಇಲ್ಲಿನ ಕವಿತೆಗಳು ಜೀವನದಲ್ಲಿ ಕಂಡುಂಡ ನೋವು ನಲಿವುಗಳನ್ನು ಸಹಜವಾಗಿ ಚಿತ್ರಿಸುತ್ತವೆ. ಈ ಕವಿತೆಗಳು ಒಂದು ಕೇರಿಗೆ , ಒಂದು ಧರ್ಮಕ್ಕೆ ಸಿಲುಕಿಕೊಳ್ಳದೆ ಮಂದಿರವನ್ನು, ಮಸೀದಿಯನು, ಇಗರ್ಜಿಯನು, ಒಂದೇಬಾರಿಗೆ ತಮ ತೋಳುಗಳಲ್ಲಿ ತುಂಬಿಕೊಳ್ಳುತ್ತವೆ. ಬಂಡಾಯ ಸಂಘಟನೆಯ ಕಸುವನ್ನು ಇನ್ನೂ ಒಳಗೊಂಡಿರುವ ನೆಲದ ಕವಿಯಾದ್ದರಿಂದ ಶ್ರೀನಿವಾಸರವರಿಗೆ ಈ ನಿಲುವು ಸಾಧ್ಯವಾಗಿದೆ. 

ಇಲ್ಲಿನ ಕವಿತೆಗಳು ದಲಿತರ ಕೇರೆಯಲ್ಲೂ, ಸಂಡೂರಿನ ಬೆಟ್ಟದಲ್ಲೂ, ಗೋಕರ್ಣದ ಮಹಾಬಲನಲ್ಲೂ, ಮನೆಯಂಗಳ ಮತ್ತು ತೇರು ಬೀದಿಯಲ್ಲೂ ಸುತ್ತಿ ಸುಳಿಯುತ್ತವೆ. ಬಿಸಿಲು, ಬೆವರುಗಳ ನಡುವೆ ಟಂಟಂ ಗಾಡಿಯಲ್ಲಿ ಒತ್ತಾಗಿ ಕೂತು ಪ್ರಯಾಣ ಮಾಡುವ ಜನರೊಂದಿಗೆ ತಾವು ತಲುಪಬೇಕಾದ ಸ್ಥಳವನ್ನು ತಲುಪಿಯೇ ತಲುಪುತ್ತವೆ. ಈ ಆತ್ಮ ವಿಶ್ವಾಸವೇ ಇಲ್ಲಿನ ಕವಿತೆಗಳನ್ನು ಕೈಹಿಡಿದು ನಡೆಸುತ್ತವೆ.

 

Related Books