ಕಾಗದದ ಕುದುರೆ

Author : ದೀಪ್ತಿ ಭದ್ರಾವತಿ

Pages 72

₹ 50.00




Year of Publication: 2011
Published by: ವಿಸ್ಮಯ ಪ್ರಕಾಶನ
Address: 366, ನವಿಲು ರೋಡ್, ಕುವೆಂಪುನಗರ, ಮೈಸೂರು-23
Phone: 9008798406

Synopsys

ಕಂಡದ್ದನ್ನೆಲ್ಲಾ ಕವಿತೆಯಾಗಿಸದೆ ಹಾಲಿನ ಕೆನೆಯನ್ನಷ್ಟೆ ಮೊಗೆದ ಸಂವೇದನೆಯನ್ನು ನೀಡಿರುವುದು ಇಲ್ಲಿನ ಮುಖ್ಯ ಕವಿತೆಯ ಗುಣಗಳು. ಗೀತಾ ದೇಸಾಯಿ ದತ್ತಿ ನಿಧಿ, ಹರಪನಹಳ್ಳಿ ಭೀಮವ್ವ ಪ್ರಶಸ್ತಿ ಮತ್ತು ಬಿ.ಎಂ. ಶ್ರೀ ಕಾವ್ಯ ಮುಂತಾದ ಪ್ರಶಸ್ತಿಗಳು ಸಂದಿರುವುದು ಕೃತಿಯ ಹೆಗ್ಗಳಿಕೆ ಸಾಕ್ಷಿ. ಸಾಹಿತಿ ಜಯಂತ ಕಾಯ್ಕಿಣಿ ಅವರು ಬೆನ್ನುಡಿಯಲ್ಲಿ “ಕಾವ್ಯದ ಮುಖ್ಯ ಪ್ರೇರಣೆ ಬದುಕೇ ಆದ್ದರಿಂದ, ಸಾಮಾನ್ಯ ಚಾಲ್ತಿ ಕಾವ್ಯ ಸಂದರ್ಭದಿಂದ ಪ್ರೇರಿತವಾದ ಪಡಿಯಚ್ಚಿನ ಕವಿತೆಗಳ ಜತೆ, ತನ್ನದೇ ಆದ ಮನೋಧರ್ಮದಿಂದಲೇ ತನ್ನದೇ ವಸ್ತು ಪ್ರಪಂಚವೊಂದನ್ನು ರೂಪಿಸಿಕೊಳ್ಳುವ ಧೈರ್ಯದಿಂದ ರೂಪುತಾಳಿದ ಕವಿತೆಗಳು ಇಲ್ಲಿ ಎದ್ದು ಕಾಣುತ್ತಿವೆ. ಕೇವಲ ಬಿಡಿಬಿಡಿ ಕವಿತೆಗಳ ಓದು, ಕವಿಗೋಷ್ಟಿಗಳ ಸೀಮಿತ ಅಪಾಯಗಳನ್ನು ನಿಭಾಯಿಸಿಕೊಳ್ಳುತ್ತಲೇ ಥಟ್ಟಂತ ಇವರ ಕಾವ್ಯ ಅಲ್ಲಲ್ಲಿ ತನ್ನದೇ ಆದ ದನಿಯೊಂದನ್ನು ನೋಟವನ್ನು ಪಡೆಯುವ ರೀತಿ ಆಪ್ತವಾದ ಅಚ್ಚರಿಯನ್ನು ಉಂಟು ಮಾಡುತ್ತದೆ” ಎಂದು ಅಭಿಪ್ರಾಯಿಸಿದ್ದಾರೆ.

About the Author

ದೀಪ್ತಿ ಭದ್ರಾವತಿ

ದೀಪ್ತಿ ಭದ್ರಾವತಿ -ದಕ್ಷಿಣ ಕನ್ನಡದ ಮರವಂತೆ ಮೂಲದವರು. ಚಿಕ್ಕಮಂಗಳೂರಿನ ನಕ್ಕರಿಕೆ ಎಂಬ ಕುಗ್ರಾಮದಲ್ಲಿ ಹುಟ್ಟಿದ್ದು, ಹೆಸರು ಕೇವಲ ದೀಪ್ತಿ ಮಾತ್ರ ಆದರೆ ಭದ್ರಾವತಿಯ ಜೊತೆ ಅವಿನಾಭಾವ ಸಂಬಂಧ ಇರುವುದರಿಂದ ಹಾಗೂ ಅವರ ಜೀವನದಲ್ಲಿ ಬಾಲ್ಯದಿಂದ ಯೌವನದವರೆಗೆ ಭದ್ರಾವತಿಯ ಕೊಡುಗೆ ತುಂಬಾ ಇರುವುದರಿಂದ ದೀಪ್ತಿ ಭದ್ರಾವತಿ ಎಂಬ ಹೆಸರಿನಿಂದ ಕಾವ್ಯವನ್ನು ಬರೆಯುತ್ತಾರೆ. ದೀಪ್ತಿಯವರು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವೀಧರರು, ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿಯನ್ನೂ ಹಾಗೂ ಹಿಂದಿಯಲ್ಲಿ ವಿಶಾರದ ಪದವಿಯನ್ನು ಪಡೆದಿದ್ದಾರೆ. ಪದವಿಪೂರ್ವದಲ್ಲಿ ವಿಜ್ಞಾನದ ವಿದ್ಯಾರ್ಥಿನಿಯಾಗಿದ್ದ ಇವರಿಗೆ ಸಾಹಿತ್ಯ ಕ್ಷೇತ್ರದ ಆಕರ್ಷಣೆ ಬೇರೆ ಬೇರೆ ಪದವಿಗಳಿಗೆ ಅನುವು ಮಾಡಿಕೊಟ್ಟಿತ್ತು. ಪ್ರಸ್ತುತ ಸರಕಾರಿ ...

READ MORE

Related Books