ಅಕ್ಷರವ ನೀವ್ ಕಲಿಯಿರಿ

Author : ದೇಶಹಳ್ಳಿ ಜಿ. ನಾರಾಯಣ

Pages 48

₹ 50.00
Year of Publication: 2023
Published by: ನಾಡೋಜ ಜಿ.ನಾರಾಯಣ ಪ್ರತಿಷ್ಠಾನ
Address: ಬೆಂಗಳೂರು

Synopsys

‘ಅಕ್ಷರವ ನೀವ್ ಕಲಿಯಿರಿ’ ಕೃತಿಯು ದೇಶಹಳ್ಳಿ ಜಿ. ನಾರಾಯಣ ಅವರ ಕವನಸಂಕಲನವಾಗಿದೆ. ಕೃತಿಯಲ್ಲಿನ ಮುನ್ನುಡಿಯ ಅಕ್ಷರಗಳಿವು; ಹಳ್ಳಿಯ ಜನರಿಗೆ ಗೋವಿನ ಕಥೆಯ ಮಟ್ಟು ಬಾಯಿ ಪಾಠವಾಗಿರುತ್ತೆ, ಎಂದರೆ ತಪ್ಪಾಗಲಾರದು. ಆಕಳು ಮೇಯಿಸುವ ಹುಡುಗನಿಂದ ಹಿಡಿದು ವೃದ್ಧ ಗೌರವಜ್ಜಿಯವರೆಗೂ ಈ ಹಾಡು ಹೆಚ್ಚು ಪ್ರಚಾರದಲ್ಲಿದೆ. ಭಾರತ ಇಂದು ಪರಕೀಯರ ಹಿಡಿತದಿಂದ ಪಾರಾಗಿದೆ. ಸ್ವತಂತ್ರ ಭಾರತದ ಜನತೆ ಇನ್ನು ಹೆಚ್ಚು ಕಾಲ ಅನಕ್ಷರಸ್ಥರಾಗಿ ಇರುವುದು ತೀರ ಅವಮಾನಕರ. ಅಧಿಕಾರಸ್ಥಾನಕ್ಕೆ ಬಂದಿರುವ ನಮ್ಮ ರಾಷ್ಟ್ರೀಯ ನಾಯಕರ ಎದುರು ಈ ಅನಕ್ಷರತೆಯ ಬೃಹತ್ಸಮಸ್ಯೆಯೊಂದಿದೆ. ನಾಡಿನ ಬಡತನ ತೊಲಗುವುದಕ್ಕೂ ಈ ಅನಕ್ಷರತೆಯ ಪೀಡೆ ಮೊದಲು ತೊಲಗಬೇಕು. ಈ ಜನಪ್ರಿಯ ಮಟ್ಟಿನಲ್ಲಿ, ಅನಕ್ಷರಸ್ಥರಿಗಾಗಿ ಮತ್ತು ಹಳ್ಳಿಗಾಡಿನ ಜನತೆಗಾಗಿ ಎಂಬೀ ಉದ್ದೇಶದಿಂದ ಈ ಕೃತಿಯು ಹೊರಬಂದಿದೆ.

About the Author

ದೇಶಹಳ್ಳಿ ಜಿ. ನಾರಾಯಣ

ದೇಶಹಳ್ಳಿ ಜಿ. ನಾರಾಯಣ ಅವರು ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ದೇಶಹಳ್ಳಿಯವರು.1923 ಸೆಪ್ಟೆಂಬರ್ 2 ರಂದು ಜನನ. ಸಾಹಿತ್ಯ, ಸಂಘಟನೆಯ ಜೊತೆಗೆ ಕನ್ನಡಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಮದ್ದೂರಿನಲ್ಲಿ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗಲೇ ಶಿವಪುರದಲ್ಲಿ ನಡೆದ ಮೈಸೂರು ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿದ್ದರು. 1942ರಲ್ಲಿ `ಬ್ರಿಟಿಷರೇ’ ಭಾರತ ಬಿಟ್ಟು ತೊಲಗಿ ‘ಚಳುವಳಿಯಲ್ಲಿ ಭಾಗವಹಿಸಿ ಸೆರೆಮನೆ ಸೇರಿದ್ದರು. 1957ರಲ್ಲಿ ಬೆಂಗಳೂರು ಕಾರ್ಪೋರೇಷನ್ನಿನ ಕೌನ್ಸಿಲರ್ ಆಗಿದ್ದ ಇವರು 1964ರಲ್ಲಿ ಮೇಯರಾಗಿ ಚುನಾಯಿತರಾದರು. ಕನ್ನಡ ಪತ್ರಿಕಾ ಅಕಾಡೆಮಿ ಅಧ್ಯಕ್ಷರೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದರು. ಕಾಂಗ್ರೆಸ್ ಪಕ್ಷದ ವಾರ್ತಾ ...

READ MORE

Related Books