ಹನಿಯೊಡೆಯುತಿದೆ

Author : ಜಯಲಕ್ಷ್ಮಿ ಪಾಟೀಲ್

Pages 90

₹ 100.00
Year of Publication: 2020
Published by: ಅದಿತಿ ಪ್ರಕಾಶನ
Address: # 65, ಮುಗುಳ್ನಗೆ, 3ನೇ ಅಡ್ಡರಸ್ತೆ, ಪಿ.ಎನ್.ಬಿ ನಗರ ಕೋಣನಕುಂಟೆ, ಬೆಂಗಳೂರು- 560062
Phone: 9900222621

Synopsys

‘ಹನಿಯೊಡೆಯುತಿದೆ’ ಕವಿ, ಕಲಾವಿದೆ, ಲೇಖಕಿ ಜಯಲಕ್ಷ್ಮಿ ಪಾಟೀಲ್ ಅವರ ಕವನ ಸಂಕಲನ. ಈ ಪುಸ್ತಕಕ್ಕೆ ಲೇಖಕಿ ಎಂ.ಎಸ್. ಆಶಾದೇವಿ ಅವರು ಬೆನ್ನುಡಿ ಬರೆದು ‘ಇವು ಅಪ್ಪಟ ಹೆಣ್ಣಿನ ಕವಿತೆಗಳು. ಇದು ಮಿತಿಯಲ್ಲ, ಬೇಲಿಯೂ ಅಲ್ಲ. ಇದೇ ಈ ಸಂಕಲನದ ವಿಶೇಷ ಶಕ್ತಿ ಮತ್ತು ಸೌಂದರ್ಯ. ಹೆಣ್ಣಿನ ಅಪರಿಮಿತತೆಯನ್ನೂ ಹೆಣ್ಣು ತಾನೇ ಕಾಣಲು ಉದ್ಯುಕ್ತವಾದ ಜೀವಕೋಶದ ಧಾತು ಇಲ್ಲಿನ ಕವಿತೆಗಳಲ್ಲಿ ಮಿಡಿಯುತ್ತಿದೆ' ಎನ್ನುತ್ತಾರೆ.

 ಜೊತಗೆ, ‘ಬದುಕಿನ ಬಯಲನ್ನು ಆಲಂಗಿಸಲು ಹಾತೊರೆಯುವ ಜೀವನ ಪ್ರೀತಿಯನ್ನು, ಇದು ನಿಜಕ್ಕೂ ಹೆಣ್ಣಿನ ಹುಟ್ಟು ಗುಣ ಎನ್ನುವ ಆತ್ಮ ವಿಶ್ವಾಸದ ಕಡೆಗೆ ಇಲ್ಲಿನ ಕವಿಗಳು ಚಲಿಸುತ್ತವೆ. ಹೆಣ್ಣಿನ ಭೂತ, ವರ್ತಮಾನ ಮತ್ತು ಭವಿಷ್ಯಗಳ ತ್ರಿಕಾಲಗಳು ಏಕಕಾಲವೇ ಆಗಿಬಿಡುವ ವಾಸ್ತವವನ್ನು ಉಚ್ಛಾಟಿಸಿ, ಕಾಲದ ಮೇಲೂ ಬದುಕಿನ ಮೇಲೂ ತನ್ನದೇ ಕೇವಲ ತನ್ನದೇ ಹಿಡಿತ ಬಂದೀತೆ ಎಂದಾದರೂ ಎನ್ನುವ ಉದ್ಗಾರಗಳು ಇಲ್ಲಿನ ಕವಿತೆಗಳ ಒಳಧ್ವನಿಯಾಗಿ ಮಾರ್ನುಡಿಯುತ್ತವೆ. ಸೂರ್ಯ ಕವಿತೆಗಳು ಕಾವ್ಯದ ಚೆಲುವಿನಂತೆಯೇ ಸೂರ್ಯನನ್ನೂ ಹೆಣ್ಣಿನ ಚೈತನ್ಯವನ್ನೂ ಅಖಂಡವಾಗಿಸುವ ಮಹತ್ವಾಕಾಂಕ್ಷೆಯ ಕಾರಣಕ್ಕಾಗಿಯೂ ಗಮನ ಸೆಳೆಯುತ್ತವೆ. ಜಯಲಕ್ಷ್ಮಿಯವರ ಈ ಕವಿತೆಗಳು ಹೆಣ್ಣಿನ ಕಾವ್ಯದ ಅನನ್ಯತೆಯನ್ನು ಎತ್ತಿ ಹಿಡಿಯುವಂತೆಯೇ ಅವರೊಳಗೆ ಇನ್ನೂ ಅಡಗಿರುವ ಕಾವ್ಯದ ದಿಕ್ಸೂಚಿಯೂ ಆಗಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

About the Author

ಜಯಲಕ್ಷ್ಮಿ ಪಾಟೀಲ್
(08 June 1968)

ಜಯಲಕ್ಷ್ಮಿ ಪಾಟೀಲ್ ಅವರು ಬಹುಮುಖ ಪ್ರತಿಭೆಯ ಕಲಾವಿದೆ. ಅಭಿನೇತ್ರಿ, ಕವಯತ್ರಿ, ಬರಹಗಾರ್ತಿ, ಉತ್ತಮ ವಾಗ್ಮಿ, ಸ್ತ್ರೀವಾದಿ ಹಾಗೂ ಉತ್ತಮ ಸಂಘಟಕಿಯಾಗಿಯೂ ಕಾರ್ಯ ಸಾಧಿಸಿದ್ದಾರೆ. ಉತ್ತರ ಕರ್ನಾಟಕದ ಬಿಜಾಪುರ ಜಿಲ್ಲೆಯ ನಿಂಬಾಳದವರಾದ ಜಯಲಕ್ಷ್ಮಿ ಗುಲ್ಬರ್ಗಾ ಜಿಲ್ಲೆ ಯಾದಗಿರಿಯಲ್ಲಿ 968 ಜೂನ್‌ 08ರಂದು ಜನಿಸಿದರು. ತಂದೆ ರಾಜಶೇಖರ ಅವರಾದಿ, ನಿವೃತ್ತ ಸರಕಾರಿ ವೈದ್ಯಾಧಿಕಾರಿ. ತಾಯಿ, ಸರೋಜಿನಿ ಅವರಾದಿ. ಜಯಲಕ್ಷ್ಮಿ ಪಾಟೀಲ್ ಬಿಜಾಪುರದ 'ಕೆ.ಸಿ.ಪಿ.ಸೈನ್ಸ್ ಕಾಲೇಜ್' ನಲ್ಲಿ ಬಿ.ಎಸ್ಸಿ ಪದವಿ ಗಳಿಸಿದರು.  ನೀಲ ಕಡಲ ಭಾನು' ಅವರ ಕವನ ಸಂಕಲನ. ‘ಹೇಳತೇವ ಕೇಳ' (ಮಹಿಳಾ ದೌರ್ಜನ್ಯದ ವಿರುದ್ಧದ ಲೇಖನ ಸಂಗ್ರಹದ ಪುಸ್ತಕದ) ಸಂಪಾದನೆ. ಗ್ರಾಮೀಣ ...

READ MORE

Related Books