ನನ್ನೊಡಲ ಬೆಳಗು

Author : ಕಿರಣ್ ಕುಮಾರ್ ಎಸ್.ಕೆ

Pages 96

₹ 100.00
Year of Publication: 2022
Published by: ನುಡಿಕಿರಣ ಪ್ರಕಾಶನ
Address: ನಂ.500/ಎ, 2ನೇ ಸಿ ಮುಖ್ಯರಸ್ತೆ, 11ನೇ ಬ್ಲಾಕ್, ನಾಗರಬಾವಿ 2ನೇ ಹಂತ, ಬೆಂಗಳೂರು- 560072
Phone: 8618674653

Synopsys

ಕವಿ ಕಿರಣ್ ಕುಮಾರ್ ಎಸ್. ಕೆ. ಅವರ ಕವನ ಸಂಕಲನ ನನ್ನೊಡಲ ಬೆಳಗು. ಈ ಸಂಕಲನವು ಬದುಕಿನ ತಿರುವುಗಳಿಂದಾಗುವ ಹತಾಶೆ, ದುಃಖ, ದುಮ್ಮಾನ ಸಹಿಸುವ ಎದೆಗಾರಿಕೆಯ ನಡೆಗಳನ್ನು, ಜೀವನದ ಉತ್ತೇಜನಗಳು, ಮನಸ್ಸು, ಕ್ಷಣ, ಆತ್ಮಕ್ಕೆ ಇರುವ ಮಾನ್ಯತೆಯನ್ನು ಈ ಕವನಗುಚ್ಛದ ಕವನಗಳ ಮೂಲಕ ಕನ್ನಡ ಸಾಹಿತ್ಯ ಪ್ರಿಯ ಓದುಗ ಮಹಾಶಯರಲ್ಲಿ ನಿವೇದಿಸಿಕೊಂಡಿದೆ. ಸುಂದರ ಬದುಕನ್ನು ಹಪಹಪಿಸುವ, ಮನುಷ್ಯ ಸ್ವತಂತ್ರ ಭಾವನೆಗಳ ಪ್ರೀತಿಗೆ ಸ್ಪಂದಿಸುವ, ಕಾತರಿಸುವ ಒಳ ತುಡಿತಗಳನ್ನು ಒಳಗೊಂಡಿದೆ. ದಾಂಪತ್ಯ ಜೀವನದ ಲಾಲಿತ್ಯವಿದೆ. ಬದುಕಿನ ಕೆಲವು ತಿರುವುಗಳು ದಿಕ್ಕು ತಪ್ಪಿಸುವ ದಾರಿಯಡೆಗೆ ಕರೆದೊಯ್ಯುವಾಗ ಆಗುವ ಹತಾಶೆ ಮತ್ತು ಸಹಿಸುವ ಎದೆಗಾರಿಕೆಯಿದೆ. ವಯೋಮಾನದ ತಾಕಲಾಟಗಳಿವೆ. ಬಹುಬಗೆಯ ಭಾವನೆಗಳಿಗೆ ಭಾಷೆಯ ವೇಷ ತೊಡಿಸಿಕೊಂಡಿದೆ.

About the Author

ಕಿರಣ್ ಕುಮಾರ್ ಎಸ್.ಕೆ

ಕಿರಣ್ ಕುಮಾರ್ ಎಸ್. ಕೆ ಅವರು ಕೋಲಾರ ಜಿಲ್ಲೆಯ ಮಾಲೂರಿನಲ್ಲಿ, ಕೃಷ್ಣಮೂರ್ತಿ, ಸುನಂದ ದಂಪತಿಯ ಪುತ್ರ. ಪ್ರಾರ್ಥಮಿಕ, ಪ್ರೌಢ ಶಿಕ್ಷಣವನ್ನು ಕೋಲಾರಿನಲ್ಲಿ ಪಡೆದು, ಅನಂತರ ಪದವಿ ಪೂರ್ವ ಶಿಕ್ಷಣವನ್ನು ಕೋಲಾರ ಚಿನ್ನದ ಗಣಿ(KGF) ಯಲ್ಲಿ ಪೂರ್ಣಗೊಳಿಸಿದರು. ವಿಶ್ವೇಶ್ವರಯ್ಯ ಕಾಲೇಜು ಆಫ್ ಇಂಜಿನಿಯರಿಂಗ್ ವಿಶ್ವವಿದ್ಯಾಲಯದಲ್ಲಿ ಸ್ನಾತಕ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನ ರಾಜ್ಯದ ಪ್ರತಿಷ್ಠಿತ ಕರಾವಳಿ ಭಾಗದ ಸೂರತ್ಕಲ್ ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿಶ್ವವಿದ್ಯಾಲಯದಲ್ಲಿ ಪೂರೈಸಿದರು. ಸದ್ಯ ಐ. ಬಿ. ಎಂ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. "ರೇಸ್ ಆಫ್ ಎಕ್ಸ್ಪ್ರೇಶನ್ಸ್(Rays of Expressions)" ಎಂಬ ...

READ MORE

Related Books