ಸಾವಿರದ ಸಾಲುಗಳು

Author : ಸಿದ್ಧಲಿಂಗಪ್ಪ ಬೀಳಗಿ

Pages 76

₹ 100.00




Year of Publication: 2022
Published by: ಅಶ್ವಿನಿ ಪ್ರಕಾಶನ
Address: ಮಹಾಂತನಗರ್, ಹುನಗುಂದ- 587118 ಬಾಗಲಕೋಟೆ ಜಿಲ್ಲೆ

Synopsys

ಲೇಖಕ, ಕವಿ ಸಿದ್ದಲಿಂಗಪ್ಪ ಬೀಳಗಿ ಅವರ ಹಾಯ್ಕುಗಳ ಸಂಕಲನ ಸಾವಿರದ ಸಾಲುಗಳು. ರಾಜಶೇಖರ ಮಠಪತಿ ಅವರು ಈ ಕೃತಿಗೆ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ,ಚಿಂತಕ ಹೈಡೆಗರ್‌ನ ಕಾವ್ಯ ಕುರಿತಾದ ಒಂದು ಹೇಳಿಕೆ, "The voice of thought must be poetic because poetry is the saying of truth" ಎನ್ನುವುದು, 'ಹೈಕ'ನ್ನು ಕುರಿತೇ ಹೇಳಿದಂತಿದೆ. 'ಹೈಕು' ಕಾವ್ಯ ಕುಸುರಿಯಲ್ಲಿಯೇ ಅತ್ಯಂತ ಸೂಕ್ತವಾದುದು. ಕವಿಗೆಳೆಯ ಸಿದ್ದಲಿಂಗಪ್ಪನವರ ಭಾವ ಸೂಕ್ಷ್ಮತೆಗೆ ಸಹಜವಾಗಿ ದಕ್ಕಿದುದು, ಸಾವಿರ ಪುಟಗಳ ಸಾಹಿತ್ಯ ಅವರ ನಂಬಿಕೆಯಲ್ಲ. ಸಾಯುವವರೆಗೂ ಕಾಡುವ, ಎ೦ದೂ ಸಾಬದ ಸಂದೇಶಗಳು ಅವರ ಹೈಕುಗಳ ಗುರಿ, ಮಾತಿನಲ್ಲಿ ಲೋಕಾಭಿರಾಮರಾದ ನನ್ನ ಈ ಕವಿ ಗೆಳೆಯ ಕಾವ್ಯದಲ್ಲಿ ಮಹಾ ಅಕ್ಕಸಾಲಿಗೆ, ಇದು ಪ್ರತಿಭಾನ್ವಿತ ಕವಿಯ ಕಾವ್ಯಶಕ್ತಿಗೊಂದು ನಿದರ್ಶನವೂ ಕೂಡಾ.ಬೆಳಕಿನ ಕವಿ ಸಿದ್ದಲಿಂಗಪ್ಪ ಬೀಳಗಿಯವರ ಹೈಕುಗಳು ನನ್ನ ಹರುಷವನ್ನು ನೂರ್ಮಡಿಗೊಳಿಸಿವೆ ಎಂದಿದ್ದಾರೆ.

About the Author

ಸಿದ್ಧಲಿಂಗಪ್ಪ ಬೀಳಗಿ

ಲೇಖಕ ಸಿದ್ಧಲಿಂಗಪ್ಪ ಬೀಳಗಿ ಅವರು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಯಡಹಳ್ಳಿ ಗ್ರಾಮದವರು. ಹುನಗುಂದ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು. ವ್ಯಕ್ತಿತ್ವ ವಿಕಸನ ಮಾರ್ಗದರ್ಶಕರು. ಎಂ.ಎ. ಎಂ. ಈಡಿ ಪದವೀಧರರು.  ಛಾಯಾಗ್ರಹಣ ಇವರ ಹವ್ಯಾಸ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಸುಮಾರು 500ಕ್ಕೂ ಅಧಿಕ ಚಿತ್ರಲೇಖನಗಳು ಪ್ರಕಟವಾಗಿವೆ. ಧಾರವಾಡ ಆಕಾಶವಾಣಿಯಿಂದ ಚಿಂತನಗಳು, ಭಾಷಣಗಳು, ಕಥೆ, ಸಂವಾದ, ಕವಿತೆಗಳು ಪ್ರಸಾರಗೊಂಡಿವೆ. ದೂರದರ್ಶನ ಚಂದನವಾಹಿನಿಯ 'ಬೆಳಗು' ನೇರಪ್ರಸಾರ ಮತ್ತು 'ವಚನಾಮೃತ' ಕಾರ್ಯಕ್ರಮ ಪ್ರಸಾರಗೊಂಡಿವೆ. ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಶರಣ ಸಾಹಿತ್ಯ ಪರಿಷತ್ತು, ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯಮಟ್ಟದ ಕಮ್ಮಟ, ಕವಿಗೋಷ್ಠಿಗಳಲ್ಲಿ ಭಾಗಿ ಮತ್ತು ಅಖಿಲ ...

READ MORE

Related Books