ಹಿಂದಿನ ಹೆಜ್ಜೆಯ ಐನೂರು ಮಿನಿ ಕವಿತೆಗಳು

Author : ಕಾಶೀನಾಥ ಅಂಬಲಗೆ

Pages 136

₹ 130.00
Year of Publication: 2018
Published by: ಪ್ರಗತಿ ಪ್ರಕಾಶನ
Address: ಜಯನಗರ ವಿಶ್ವವಿದ್ಯಾಲಯ ರಸ್ತೆ, ಕಲಬುರ್ಗಿ- 595105

Synopsys

‘ಹಿಂದಿನ ಹೆಜ್ಜೆಯ ಐನೂರು ಮಿನಿ ಕವಿತೆಗಳು’ ಲೇಖಕ ಕಾಶಿನಾಥ ಅಂಬಲಿಗೆ ಅವರ ಕವಿತೆಗಳ ಸಂಕಲನ. ವಿವಿಧ ಬಣ್ಣ, ರಾಗ, ತಾಳ ಲಯಗಳಿಂದ ಕೂಡಿದ ಐದು ನೂರು ಮಿನಿ ಕವಿತೆಗಳ ಸಂಕಲನ. ಈ ಪುಸ್ತಕದಲ್ಲಿ ಕೋಗಿಲೆ ಅಳುತಿವೆ, ಪಾಶ್ ಪಾಶ್, ಸುರಜೀತ್ ಪಾತ್ರ, ಮಿಂದರ್, ಸತೀಂದರ್ ಸಿಂಹ ನೂರ್, ಸರೋದ ಸುದೀಪ, ಸಂತೋಖ ಸಿಂಹ ಧೀರ್, ದೇವ, ರಾಮಸಿಂಹ ಚಾಹಲ್, ಸ್ವರ್ಣಜೀತ ಸವಿ, ಬಲವೀರ ಪರವಾನಾ, ಧರ್ಮ ಕಮ್ಮೇ ಆಣಾ, ದರ್ಶನ ದರವೇಶ, ಅಮರಜೀತ್ ಕೌಂಕೆ, ಸ್ವರಾದ ವೀರ, ಇಕ್ ಬಾಲ್ ದೀಪ, ರಣಜೀತ ಮಾಧೋಪುರಿ ಸೇರಿದಂತೆ ಹಲವು ಅನುವಾದಿತ ಕವಿತೆಗಳು ಮತ್ತು ಸ್ವರಚಿತ ಮಿನಿ ಕವಿತೆಗಳಿವೆ.

About the Author

ಕಾಶೀನಾಥ ಅಂಬಲಗೆ
(10 July 1947)

ಕಾಶೀನಾಥ ಅಂಬಲಗೆ ಅವರು ಹುಟ್ಟಿದ್ದು 10-07-1947 ರಲ್ಲಿ. ಬೀದರ ಜಿಲ್ಲೆಯ, ಬಸವಕಲ್ಯಾಣ ತಾಲೂಕಿನ ಮುಚಳಂಬಿ ಎಂಬ ಗ್ರಾಮದಲ್ಲಿ. ಇವರ ತಂದೆ ರಾಚಪ್ಪ ಅಂಬಲಗೆ, ತಾಯಿ ಗುರಮ್ಮ ಅಂಬಲಗೆ. ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅಂಬಲಗೆ ಹಿಂದಿ ಭಾಷೆಯಲ್ಲೂ ಎಂ.ಎ ಪದವಿ ಗಳಿಸಿದ್ದಾರೆ. ಬಿ.ಎಡ್ ಜೊತೆಗೆ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಪಿಎಚ್.ಡಿ ಪದವಿಯನಂತರ ಅಧ್ಯಾಪಕ ವೃತ್ತಿಯನ್ನು ಆಯ್ದುಕೊಂಡ ಅವರು ಮಹಾವಿದ್ಯಾಲಯದಲ್ಲಿ 21ವರ್ಷ, ವಿಶ್ವವಿದ್ಯಾಲಯದಲ್ಲಿ 12 ವರ್ಷ ಹಿಂದಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿಯೂ ತೊಡಗಿಸಿಕೊಂಡಿದ್ದಾರೆ.  ಕವಿ, ಲೇಖಕ, ಸಾಹಿತಿ, ಕಾದಂಬರಿಗಾರರಾದ ಅಂಬಲಗೆ ಅನುವಾದಕರಾಗಿಯೂ ಪ್ರಸಿದ್ಧರು. ಜೊತೆಗೆ ...

READ MORE

Related Books