ಪ್ರೇಮವೆಂಬ ಅವರ್ಗೀಯ ವ್ಯಂಜನ

Author : ಮೌನೇಶ್ ಬಡಿಗೇರ್‌

Pages 90

₹ 90.00
Year of Publication: 2021
Published by: ಟೆಕ್ ಫೀಜ್
Address: ಬೆಂಗಳೂರು
Phone: 9902244522

Synopsys

‘ಪ್ರೇಮವೆಂಬ ಅವರ್ಗೀಯ ವ್ಯಂಜನ’ ಕೃತಿಯು ಮೌನೇಶ ಬಡಿಗೇರ್ ಅವರ ಕವನಸಂಕಲನವಾಗಿದೆ. ಇಲ್ಲಿ ಕವಿ ತನ್ನ ಮನದಾಳದ ಮಾತಿಗೆ ಹೀಗೊಂದು ರೂಪ ಕೊಟ್ಟಿದ್ದಾನೆ ‘ಇವೆಲ್ಲವೂ ಕಡು ಪ್ರೇಮದಿಂದ ಹೊಮ್ಮಿದಂಥ ಭಾವಸತ್ವಗಳು, ಸಂವಾದಗಳು. ಇವನ್ನು ಕವಿತೆಗಳು ಎಂದೂ ಹೇಳಲಾರೆ. ಹಾಗಂತ, ಕಾವ್ಯದ ಗುಣ ಇಲ್ಲದೆಯೂ ಇಲ್ಲ. ಬೇಕಿದ್ದರೆ ಇದನ್ನು ಪ್ರೇಮಭಾವ ಸಂವಾದಗಳು ಎಂದು ಕರೆಯಬಹುದೇನೋ.. ಅಥವಾ ಪ್ರೇಮದ ವಚನಗಳು! ಇದ್ಯಾವುದೂ ಬೇಡ ಎಂದರೆ ಪ್ರೇಮದ ಕೊರೆತಗಳು ಎನ್ನಲು ಅಡ್ಡಿಯಿಲ್ಲ! ಪ್ರೇಮದಲ್ಲಿ ನಾನು ಕಂಡ, ಉಂಡ ಹಾಗೂ ಕಲಿತ ಅನೇಕ ಅನುಭವಗಳನ್ನು ಚುಟುಕಾಗಿ ಇಲ್ಲಿ ತರಲು ಪ್ರಯತ್ನಿಸಿದ್ದೇನೆ. ಇವು ಕನ್ನಡ ಸಾಹಿತ್ಯದ ಪಂಡಿತರಿಗಲ್ಲ; ಪಾಮರರಿಗೂ ಅಲ್ಲ. ಯಕಶ್ಚಿತಃ ಪ್ರೇಮದಲ್ಲಿ ಬಿದ್ದಿರುವವರಿಗೆ, ಬಿದ್ದು ಎದ್ದವರಿಗೆ, ಒಂದಲ್ಲಾ ಒಂದು ದಿನ ಬೀಳಲಿರುವವರಿಗೆ ಮಾತ್ರ ’ ಎಂದಿದ್ದಾರೆ.

About the Author

ಮೌನೇಶ್ ಬಡಿಗೇರ್‌

ರಂಗನಿರ್ದೇಶಕ, ನಟ ಮೌನೇಶ್‌ ಬಡಿಗೇರ್‌ ಕತೆಗಾರ ಕೂಡ. ’ಮಾಯಾ ಕೋಲಾಹಲ’ ಪ್ರಕಟಿತ ಕತೆಗಳ ಸಂಕಲನ. ಸೂಜಿದಾರ’ ಎಂಬ ಚಿತ್ರ ನಿರ್ದೇಶಿಸಿದ್ದಾರೆ. ಕನ್ನಡ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಮೌನೇಶ್‌ ಅಭಿನಯ ಕಲಿಕೆಯ ಕಾರ್ಯಾಗಾರ ನಡೆಸುತ್ತಿದ್ದಾರೆ. ʻಮಾಯಾಕೋಲಾಹಲʼ ಸಂಕಲನಕ್ಕೆ 2015ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ, ಟೊಟೊ ಪುರಸ್ಕಾರ', 'ಡಾ. ಯು ಆರ್ ಅನಂತಮೂರ್ತಿ ಪುರಸ್ಕಾರ', `ಬಸವರಾಜ ಕಟ್ಟಿಮನಿ ಪುರಸ್ಕಾರ ಪಡೆದಿದ್ದಾರೆ.  “ವಿಶಾಂಕೇ ಅರ್ಥಾತ್ ವಿಧ್ವಂಸಕ ಶಾಂತಿ ಕೇಂದ್ರ' ('ರಂಗಭೂಮಿ' ಉಡುಪಿ ನಡೆಸಿದ 'ಡಾ. ಹೆಚ್. ಶಾಂತಾರಾಮ್ ವಿಶ್ವ ಕನ್ನಡ ನಾಟಕ ರಚನಾ ಸ್ಪರ್ಧೆ'ಯಲ್ಲಿ ಪ್ರಥಮ ಬಹುಮಾನ ಪಡೆದ ಕೃತಿ) ಹಾಗೂ ...

READ MORE

Related Books