ಗೋಧೂಳಿ

Author : ಮೂಡ್ನಾಕೂಡು ಚಿನ್ನಸ್ವಾಮಿ

Pages 72

₹ 16.00




Year of Publication: 1993
Published by: ಶುಭದ ಪ್ರಕಾಶನ
Address: ಜರಗನಹಳ್ಳಿ, ಬೆಂಗಳೂರು - 560078

Synopsys

‘ಗೋಧೂಳಿ’ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಕವನ ಸಂಕಲನ. ಈ ಕೃತಿಗೆ ಜಿ.ಎಸ್. ಶಿವರುದ್ರಪ್ಪ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ.. ಚರಿತ್ರೆಯ ತಿಳಿವಳಿಕೆ ಮನುಷ್ಯರನ್ನು ವಿವೇಕಿಗಳನ್ನಾಗಿ ಮಾಡುತ್ತದೆ ಎನ್ನುತ್ತಾನೆ ಸುಪ್ರಸಿದ್ಧ ಇಂಗ್ಲಿಷ್ ಲೇಖಕ ಫ್ರಾನ್ಸಿಸ್ ಬೇಕನ್. ಆದರೆ ಚರಿತ್ರೆಯ ತಿಳಿವಿನಿಂದ ಹುಟ್ಟುವ ವಿವೇಕ ಎಲ್ಲರಿಗೂ ಅಷ್ಟು ಸುಲಭವಾಗಿ ದೊರೆಯತಕ್ಕದ್ದಲ್ಲ. ಯಾಕೆಂದರೆ ನಾವು ಚರಿತ್ರೆಯನ್ನು ವರ್ತಮಾನದ ನೆಲೆಯಲ್ಲಿ ಹೇಗೆ ಗ್ರಹಿಸುತ್ತೇವೆ ಅನ್ನುವುದು ಇಲ್ಲಿ ಬಹುಮುಖ್ಯ ಸಂಗತಿಯಾಗಿದೆ ಎನ್ನುತ್ತಾರೆ. ಜೊತೆಗೆ ಚರಿತ್ರೆಯನ್ನು ಕೇವಲ ಗತವೈಭವಗಳ ಪ್ರಾತಃಸ್ಮರಣೆಗೆ ಬಳಸುವವರಿಗಾಗಲೀ, ಅದನ್ನು ತಮ್ಮ ಅನುಕೂಲಕ್ಕೆ ತಕ್ಕ ಹಾಗೇ ತಿರುಚಿ ವ್ಯಾಖ್ಯಾನಿಸುವ ಚತುರರಿಗಾಗಲೀ, ಅದನ್ನು ತಮ್ಮ ಅನುಕೂಲಕ್ಕೆ ತಕ್ಕ ಹಾಗೇ ತಿರುಚಿ ವ್ಯಾಖ್ಯಾನಿಸುವ ಚತುರರಿಗಾಗಲೀ, ಚರಿತ್ರೆಯಿಂದ ಯಾವ ಪಾಠವನ್ನೂ ಕಲಿಯದ ತಟಸ್ಥರಿಗಾಗಲೀ ಚರಿತ್ರೆಯ ನಿಜವಾದ ಅರಿವಿನಿಂದ ಬರುವ ವಿವೇಕ ಲಭಿಸೀತು ಹೇಗೆ ಎನ್ನುತ್ತಾರೆ. ಅಲ್ಲದೇ ಚರಿತ್ರೆ ಎಂದರೆ ಒಂದರ್ಥದಲ್ಲಿ ಒಂದು ಜನಾಂಗದ ಸ್ಮೃತಿಯಲ್ಲಿ ನೆಲೆ ನಿಂತ ಹಾಗೂ ಹರಿದು ಬರುವ ನೆನಪುಗಳೆ ಎನ್ನಬಹುದು. ಆದರೆ ಇಂಡಿಯಾದ ಬಹುಸ್ತರಗಳುಳ್ಳ ಸಾಮಾಜಿಕ ವ್ಯವಸ್ಥೆಯಲ್ಲಿ, ಒಂದೊಂದು ಸ್ತರದ ಚರಿತ್ರೆ ಅಥವಾ ನೆನಪುಗಳು ಬೇರೆ ಬೇರೆಯೆ ಆಗಿವೆ. ಶ್ರೀ. ಬಿ. ಚಿನ್ನಸ್ವಾಮಿಯವರು ತಮ್ಮ ಈ ಕವನ ಸಂಗ್ರಹದಲ್ಲಿ, ಮೇಲಿನ ಎಲ್ಲ ಸ್ಥರಗಳವರಿಂದ ಶತಮಾನಗಳ ಕಾಲ ತುಳಿತಕ್ಕೆ ಒಳಗಾಗಿ ಸಾಮಾಜಿಕ ನೆಲೆಯೊಂದರಲ್ಲಿ ನಿಂತು, ಈ ದೇಶದ ಒಟ್ಟು ಚರಿತ್ರೆಯನ್ನು ಕುರಿತು ಎತ್ತುವ ಪ್ರಶ್ನೆಗಳು ಮಹತ್ವದವುಗಳಾಗಿವೆ. ಚರಿತ್ರೆಯ ನಿಜವಾದ ಅರಿವಿನಿಂದ ಹುಟ್ಟಿದ ಇಲ್ಲಿನ ಕವಿತೆಗಳಲ್ಲಿ ಶತಮಾನಗಳ ನೋವಿದೆ, ವೈಚಾರಿಕತೆದೆ, ಪ್ರಜ್ಞಾವಂತರನ್ನು ಮರುಚಿಂತನಗೆ ಒಳಗುಪಡಿಸುವ ಪ್ರತಿಕ್ರಿಯೆಗಳಿವೆ. ಮತ್ತು ಬಹುಮುಖ್ಯವಾದ ಮಾತೆಂದರೆ, ಈ ಎಲ್ಲವೂ ಕಾವ್ಯರೂಪದಲ್ಲಿ ಸಂಭವಿಸಿವೆ. ಅಲ್ಲದೆ ಈ ಕವಿತೆಗಳು ದಲಿತ ಲೋಕದ ಅನುಭವಗಳನ್ನು ಇದುವರೆಗೂ ಅಭಿವ್ಯಕ್ತಪಡಿಸುತ್ತಿದ್ದ ಕ್ರಮದಿಂದ ಬೇರೆಯೇ ಆದ ಒಂದು ಹದವನ್ನು ಪಡೆದುಕೊಂಡಿವೆ ಎಂದು ಶಿವರುದ್ರಪ್ಪನವರು ಮೆಚ್ಚುಗೆ ಸೂಚಿಸಿದ್ದಾರೆ.

About the Author

ಮೂಡ್ನಾಕೂಡು ಚಿನ್ನಸ್ವಾಮಿ
(22 September 1954)

ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸತ್ವಪೂರ್ಣ ದನಿಯಾಗಿರುವ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮೂಲತಃ ಗಡಿನಾಡಾದ ಚಾಮರಾಜನಗರದವರು. ಎಂ.ಕಾಂ. ಎಂ.ಎ(ಕನ್ನಡ), ಡಿ.ಲಿಟ್. ಪದವೀಧರರಾದ ಅವರು ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರಲ್ಲದೆ, ನಿರ್ದೇಶಕರು(ಹಣಕಾಸು) ಹಾಗೂ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಮಾರ್ಚ್ 2012ರಲ್ಲಿ ನಿವೃತ್ತಿ ಹೊಂದಿದ್ದಾರೆ. ಜೊತೆಗೆ ಏಪ್ರಿಲ್ 2015 ರಿಂದ ಮಾರ್ಚ್ 2017 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2016-17 ರ ಸಾಲಿಗೆ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ...

READ MORE

Related Books