ಹಾಡುಣು ಬಾರಾ ಪ್ರೇಮದ ಹಾಡಾ

Author : ಶ್ರೀರಾಮ ಇಟ್ಟಣ್ಣವರ

Pages 54

₹ 20.00




Year of Publication: 1991
Published by: ಧ್ರುವರಂಗ ಪ್ರಕಾಶನ
Address: ಅಂಚೆ ಪೆಟ್ಟಿಗೆ ಸಂಖ್ಯೆ 1 ,ಅವಾರಿ ಮಹಡಿ, ಮುಖ್ಯರಸ್ತೆ, ಹುನಗುಂದ-587118 ವಿಜಾಪುರ ಜಿಲ್ಲೆ

Synopsys

ಜಾನಪದ ಕವಿ ಶ್ರೀ ರಾಮ ಇಟ್ಟಣ್ಣವರ  ಅವರ ಕವನ ಸಂಕಲನ-ʼಹಾಡುಣು ಬಾರಾ ಪ್ರೇಮದ ಹಾಡಾʼ ಕೃತಿಗೆ ಮುನ್ನುಡಿ ಬರೆದಿರುವ ಚೆನ್ನವೀರ ಕಣವಿ, ‘ಹಳ್ಳಿಯ ಜನಸಾಮಾನ್ಯರ ಜೀವನವನ್ನು , ಅವರ ಸಹಜವಾದ ಭಾವ; ಭಾವನೆಗಳನ್ನು ಅಲ್ಲಿಯ ವಾತಾವರಣಕ್ಕೆ ತಕ್ಕಂತೆ, ಅವರ ಮಾತಿನಲ್ಲಿಯೇ ಪ್ರಾಮಾಣಿಕವಾಗಿ ಇಲ್ಲಿ ಅಭಿವ್ಯಕ್ತ ಗೊಳಿಸಲಾಗಿದೆ. ಗಂಡು ಹೆಣ್ಣಿನ ಕಾಮ-ಪ್ರೇಮ ಸಂಬಂಧದ ವಿವಿಧ ಸ್ವರೂಪ, ದಾಂಪತ್ಯದ ಸರಸ-ವಿರಸ ಇಲ್ಲಿಯ ಹೆಚ್ಚಿನ ಕವಿತೆಗಳ ವಸ್ತುವಾಗಿದೆ. ಜಾನಪದರ ಮಾತು, ಸ್ವಭಾವ, ಆಸೆ- ಆಕಾಂಕ್ಷೆಗಳ ಗಾಢವಾದ ಪರಿಚಯದಿಂದ ತಾದಾತ್ಮ್ಯ ಹೊಂದಿ ಅವರ  ಭಾವಕ್ಕೆ ನುಡಿಗೊಟ್ಟಿರುವುದು ಇಲ್ಲಿಯ ಮೇಲೈಯಾಗಿದೆ. ಭಾವ ಎಲ್ಲೋ ಒಂದೆಡೆ ಕೂಡಿ ಬೀಳದೆ ಇಲ್ಲವೆ ಮೊಟಕಾಗದೆ ಕವಿತೆಯ ಕೊನೆಯವರೆಗೂ ಬೆಳೆಯುತ್ತಾ ಹೋಗುವುದು ಈ ಕವಿತೆಗಳ ವಿಶೇಷ ಗುಣವಾಗಿದೆ’ ಎಂದು ಪ್ರಶಂಸಿಸಿದ್ದಾರೆ. ಹೊಳ್ಳಿಸಾಲ ಬಳ್ಳಿಯ ಪ್ರೇಮದ ಜಾಡಿನಲ್ಲಿಯೇ ಇಲ್ಲಿಯ ಬಹಳಷ್ಟು ಕವನಗಳು ಮುಂದುವರಿಯುತ್ತವೆ. 

About the Author

ಶ್ರೀರಾಮ ಇಟ್ಟಣ್ಣವರ
(01 June 1948)

ಶ್ರೀಕೃಷ್ಣ ಪಾರಿಜಾತ- ಒಂದು ಅಧ್ಯಯನ ಎಂಬ ವಿಷಯದ ಮೇಲೆ ಪಿಎಚ್‌.ಡಿ . ಪದವಿ ಪಡೆದಿರುವ ಶ್ರೀರಾಮ ಇಟ್ಟಣ್ಣವರ ಅವರು ಬೀಳಗಿಯ ಶ್ರೀಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಬಯಲಾಟ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾಗಿರುವ ಇಟ್ಟಣ್ಣವರ ಅವರು ಬಯಲಾಟ-ಕೃಷ್ಣ ಪಾರಿಜಾತ ಹಾಗೂ ಜಾನಪದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಹೊಳಿಸಾಲ ಬಳ್ಳಿ; ಗಾಲಿ ಉಳ್ಳತೈತಿ; ನೂರು ಶಿಶುಗೀತೆಗಳು; ಹಾಡುಣು ಬಾಪ್ರೇಮದ ಪಾಡಾ; ಹೊತ್ತು ಮೂಡುವ ಸಮಯ (ಕಾವ್ಯ), ಪಾರಿಜಾತದವರು (ನಾಟಕ),  ಜನಪದ ಪಶುವೈದ್ಯ ಬೀಳಗಿ ಸಿದ್ಧಪ್ಪ; ಕೊಣ್ಣೂರ ಕರಿಸಿದ್ದೇಶ್ವರ ದೇವಸ್ಥಾನ (ಜಾನಪದೀಯ) ಹಲಗಲಿ-ಗ್ರಾಮ ಚಾನಪದ (ಅಧ್ಯಯನ), ಲಾವಣಿ: ಸಣ್ಣಾಟ (ಸಂಶೋಧನೆ)  ತಟ್ಟಿ ಚಿನ್ನ-ಸಣ್ಣಾಟ; ...

READ MORE

Related Books