ನಿಂತ ಮಳೆ ಹನಿ

Author : ನಾಗಣ್ಣ ಕಿಲಾರಿ

Pages 80

₹ 30.00
Year of Publication: 2005
Published by: ಸುಮುಖ

Synopsys

ನಾಗಣ್ಣ ಕಿಲಾರಿ ಅವರು ತಮ್ಮ  ಕವಿತೆಗಳಿಗೆ ಭಾರವಾಗದಂತೆ, ಕೇವಲ ಸಿದ್ದ ಅರ್ಥವಷ್ಟೇ ಮುಖ್ಯವಾಗದೆ ಅರ್ಥ ಶೋಧದ ಹಂಬಲದೊಂದಿಗೆ ಬರೆಯುವ, ಹೊಸ ರೂಪಕಗಳನ್ನು ನಿರ್ಮಿಸುವ ಶಕ್ತಿ ಇರುವ, ತಾತ್ವಿಕತೆಯನ್ನು ಸಮಗ್ರವಾಗಿ ಬಳಸಿಕೊಳ್ಳುವ ಧೈರ್ಯ ತೋರುವ, ಭಾವ, ವಿಚಾರ ಸಂಗತಿಗಳನ್ನು ತಕ್ಕಷ್ಟು ದೀರ್ಘವಾದ ರಚನೆಯಾಗಿ ವಿಸ್ತರಿಸುವ ಸಾಮರ್ಥ್ಯವಿರುವ ನಾಗಣ್ಣ ಕಿಲಾರಿಯವರ ಕವಿತೆಗಳು ಆಪ್ತವಾಗುತ್ತದೆ.

About the Author

ನಾಗಣ್ಣ ಕಿಲಾರಿ
(01 June 1982)

ಹೊಸಪೇಟೆಯ ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿರುವ ನಾಗಣ್ಣ ಕಿಲಾರಿ ಅವರು ಮೂಲತಃ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನವರು.  ಸಿದ್ಧಗಂಗಾ ಹೈಸ್ಕೂಲ್ ಮತ್ತು ಬೆಂಗಳೂರಿನ ಜಯನಗರ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರುವ ನಾಗಣ್ಣ ಅವರು ಸಿಂಧನೂರು, ಮಸ್ಕಿ ಪದವಿ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಭರವಸೆ ಮೂಡಿಸಿರುವ ಕವಿಗಳಲ್ಲಿ ಒಬ್ಬರಾಗಿರುವ ನಾಗಣ್ಣ ಅವರು ನಾಲ್ಕು ಸಂಕಲನಗಳನ್ನು ಪ್ರಕಟಿಸಿದ್ದಾರೆ. ಲಂಕೇಶ್ ಅವರ ನೀಲು ಪದ್ಯಗಳ ಕುರಿತು 'ಪ್ರೇಮ ಮೀಮಾಂಸೆ' ಪ್ರಕಟವಾಗಿದೆ. ...

READ MORE

Related Books