ಕಗ್ಗೆರೆ ಪ್ರಕಾಶ್ ಅವರ ಮೂರನೇ ಕವನ ಸಂಕಲನ ’ಭುವಿಬಾಲೆ’ಯಲ್ಲಿ ಪ್ರೇಮ, ವಿರಹ, ವಿಷಾದ, ಹೆಣ್ಣು-ಗಂಡಿನ ಆಂತರ್ಯದ ನೋವು, ಪ್ರಿಯ-ಪ್ರೇಯಸಿ, ಪತಿ-ಪತ್ನಿ, ಸಂಸಾರ-ಜೀವನದ ಕುರಿತಾಗಿ ಇರುವ ಕವಿತೆಗಳ ಜೊತೆಗೇ ಕವಿ ಗೌರವಿಸುವ ’ಕಿರಂ’, ’ಚಿ.ಶ್ರೀ’, ರಾಜ್ ಕುಮಾರ್ ಮುಂತಾದ ಶ್ರೇಷ್ಠ ವ್ಯಕ್ತಿತ್ವಗಳ ಬಗ್ಗೆಯೂ ಕವನಗಳಿರುವುದು ವಿಶೇಷ.
ಕಗ್ಗೆರೆ ಪ್ರಕಾಶ್ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕಗ್ಗೆರೆ ಗ್ರಾಮದವರು. ತಂದೆ ಕೆ.ಸಿ.ಚೆನ್ನಾಚಾರ್, ತಾಯಿ ಅಮ್ಮಯಮ್ಮ. ಬಂಡಾಯ ಸಾಹಿತ್ಯ ಸಂಘಟನೆ ಮೂಲಕ ಗುರುತಿಸಿಕೊಂಡವರು. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಡಿಪ್ಲೊಮಾ ಪದವೀಧರರು. ನಾಡಿನ ವಿವಿಧ ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಇವರ ಕಾವ್ಯ-ಕಥೆ, ಚಿಂತನೆಗಳು ಆಕಾಶವಾಣಿ, ಕಿರುತೆರೆಗಳಲ್ಲೂ ಬಿತ್ತರಗೊಂಡಿವೆ. ಬೆಂಗಳೂರಿನಲ್ಲಿ ವಾಸವಿದ್ದು, ವೆಸ್ತಾಕ್ರಾಫ್ಟ್ ಕ್ರಿಯೇಟಿವ್ ವರ್ಲ್ಡ್ ಕಂಪನಿಯ ಸೇವೆಯಲ್ಲಿದ್ದಾರೆ. ಕೃತಿಗಳು: ಕನ್ನಡಮ್ಮನಿಗೆ ಕಿರು ಕಾಣಿಕೆ, ಹೊನಲು, ಭುವಿಬಾಲೆ (ಕಾವ್ಯಗಳು). ಅನಂತ (ಸಾಹಿತ್ಯ ಸಂಚಿಕೆಯ ಸಂಪಾದನೆ). ಬಿಡುಗಡೆ (ಬಹುಮಾನಿತ ಬರಹಗಳ ಸಂಪಾದನೆ). ಅವಳ ಮಧುರ ಅಮರ ಪತ್ರಗಳು (ಸಂಪಾದನೆ). ಭೂಮಿಕೆ (ಸಾಹಿತ್ಯ ಸಂಚಿಕೆಯ ಸಂಪಾದನೆ). ಮಾತುಕತೆ- ...
READ MOREಭುವಿ ಬಾಲೆ ಕವನ ಸಂಕಲನದ ಕುರಿತು ಕವಿ ಪ್ರಕಾಶ್ ಕಗ್ಗೆರೆ ಅವರ ಮಾತುಗಳು