ಅದರ ನಂತರ

Author : ಎಚ್‌.ಆರ್‌. ರಮೇಶ

Pages 1
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಬುದ್ದಿ ರೂಪಿಸಿಕೊಂಡಿರುವ ವಿಚಾರಗಳನ್ನೂ ಸಿದ್ಧಾಂತಗಳನ್ನೊ ಕವಿತೆಯ ರೂಪದಲ್ಲಿ ಹೇಳುವ ಇದುವೇ ಚಾಲ್ತಿಯಲ್ಲಿರುವ ಈ ಕಾಲದಲ್ಲಿ ಕವಿತೆಯ ಆಸಲು ಕಸುಬಿನ ಬಗ್ಗೆ ಆಸಕ್ತಿ, ಕಳಶ ಇರುವ ರಚನೆಗಳು ಅದರ ನಂತರ ಸಂಕಲದಲ್ಲಿದೆ,

ಮನುಷ್ಯ ಸಂಬಂಧದ ಪರಿಶೀಲನೆಯ ಮುಖ್ಯ ಆಸಕ್ತಿಯಾಗಿರುವ ಈ ಕವಿತೆಗಳಲ್ಲಿ ಮೊದಲ ಹನಿಯ ಮುಟ್ಟ ಬೀಗುವ ಪರ್ವತವೂ ಇದೆ, ಗೂಡೊಳಗೆ ಬೆಚ್ಚಗೆ ಕೂತ ಹಕ್ಕಿ ಅವಳ ನೆನಪನ್ನು ತರುವುದೂ ಇದೆ. ಭಾಷೆ, ಮೌನ, ಲೋಕ'. ಇಂಥ ಗಹನ ಸಂಗತಿಗಳು ಪರಿಶಿಲನೆಯೂ ಲೌಕಿಕದ ನಿದ್ರೆಯಲ್ಲಿ ಆಲೌಕಿಕದ ಯಾನ ನಡೆಯುತ್ತ ಸ್ಪರ್ಶಿಸಿದಲ್ಲೆಲ್ಲ ಜೀವ ಸ್ಪುರಿಸುವ ಬೆರಗೂ ಇದೆ. “ಇಷ್ಟೇ ಮುಖ್ಯವಾಗಿ ಸಮಕಾಲೀನ ರಾಜಕೀಯ ಪರಿಸ್ಥಿತಿ ಅವರ ನುಡಿಗೆ ತಲೆದೂಗಿದರೆ ರಾಷ್ಟ್ರಭಕ್ತರೆಂಬ ಸಸ್ಥಾನ, ತಲೆ, ತಿರುಗಿಸಿದರೆ ತಲೆದಂಡ ಅನ್ನುವ ದುಪಾಲದ ಚಿರ್ತಣ : ಪ್ರಖರವಾಗಿ ರೂಪುಗೊಂಡಿದೆ, ಗಾಂಧಿ, ಆನಂತಮೂರ್ತಿಯಂಥ ವ್ಯಕ್ತಿಭಾವ ಚಿತ್ರ, ಮ್ಯಾಕ್ ಬೆತ್ ಪ್ರಚೋದಿಸಿದ ಭಾದ, ಗಾಬ್ರಿಯೇಲ ಮಿಸೈಲ್ ಆ ಕವಿತೆಯ ಅನುವಾದವೂ ಇಲ್ಲಿ ಸೇರಿ ವೈವಿಧ್ಯಮಯ ರಚನೆಗಳು ರೂಪ ತಳೆದಿದೆ. ಲೋಕವನ್ನು ಕಾಣುತ್ತಿರುವ ಮನೋಧರ್ಮವನ್ನು ವ್ಯಕ್ತಪಡಿಸುವ, ಮನುಷ್ಯ ಸಂಬಂಧ, ಲೋಕ, ರಾಜಕೀಯ, ಆಲಾತಿಕ, ಭಾಷೆ, ದುಹತ್ವಾಕಾಂಕ್ಷೆ ಇಂಥದನ್ನೆಲ್ಲ ತೆಕ್ಕೆಗೆ ತೆಗೆದುಕೊಳ್ಳುವ, ಅವಳು, ಆವನು, ನಾನು, ಅದು ಎಂಬ ಸರ್ವನಾಮಗಳ ಮೂಲಕ ಎಲ್ಲರ ನುಡಿಯಾಗುವ ಹಂಬಲದಲ್ಲಿ ಎಲ್ ಆರ್, ರಮೇಶ್ ಅವರ ಕವಿತೆಗಳು  ಸಹನೆಯಿಂದ ಆಲಿಸುವ ಸಹೃದಯರಲ್ಲಿ ಸಾರ್ಥಕತೆಯ ಭಾವವನ್ನು ಮೂಡಿಸುತ್ತದೆ. 

 

About the Author

ಎಚ್‌.ಆರ್‌. ರಮೇಶ

ಹೊಸ ತಲೆಮಾರಿನ ಪ್ರತಿಭಾವಂತ ಕವಿ ಎಚ್.ಆರ್. ರಮೇಶ್ ಮೂಲತಃ ಚಿತ್ರದುರ್ಗದ ಬಳಿಯ ಹರಿಯಬ್ಬೆಯವರು. ಈಗ ಮಡಿಕೇರಿಯಲ್ಲಿ ಇಂಗ್ಲಿಷ್ ಪ್ರಾದ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ರಮೇಶ್ ಕೆಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಹೊಸ ತಲೆಮಾರಿನ ವಿಮರ್ಶಕರಾಗಿಯೂ ಗುರುತಿಸಿಕೊಂಡಿರುವ ಇವರು ಸಮಕಾಲೀನ ಲೇಖಕರ ಕೃತಿಗಳ ಕುರಿತು ವಿಮರ್ಶೆಗಳನ್ನು ಬರೆಯುತ್ತಾರೆ, ಕಥೆ, ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಝೆನ್ನದಿ ಇವರ ಪ್ರಮುಖ ಕವಿತಾ ಸಂಕಲನ. ಮತ್ತೊಂದು ಕೃತಿ ‘ಅದರ ನಂತರ’ ಪ್ರಕಟವಾಗಿದೆ.  ...

READ MORE

Related Books