ಮೂರನೆಯವಳು

Author : ಅನಂತ ಕುಣಿಗಲ್

Pages 120

₹ 100.00
Year of Publication: 2021
Published by: ಅವ್ವ ಪುಸ್ತಕಾಲಯ
Address: ಕೆಂಚನಹಳ್ಳಿ ಅಂಚೆ, ಹೆಚ್.ದುರ್ಗ ಹೋಬಳಿ ಕುಣಿಗಲ್ ತಾಲ್ಲೂಕು, ತುಮಕೂರು-572123

Synopsys

ಕವಿ ಅನಂತ ಅವರ ಕವನ ಸಂಕಲನ-ಮೂರನೆಯವಳು. ಲೇಖಕಿ ಎಂ.ಆರ್, ಕಮಲ ಅವರು ಕೃತಿಗೆ ಬೆನ್ನುಡಿ ಬರೆದು ‘ಇಲ್ಲಿಯ ಬಹುತೇಕ ಕವನಗಳು ಸ್ತ್ರೀಕೇಂದ್ರಿತವಾಗಿವೆ. ಹೆಣ್ಣಿನ  ಅಂತರಂಗವನ್ನು ಹೊಕ್ಕು, ಅವಳ ಸೂಕ್ಷ್ಮ-ಸಂಕೀರ್ಣ ಅನುಭವಗಳನ್ನು ತನ್ನದಾಗಿಸಿಕೊಳ್ಳುತ್ತಾ  ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅಭಿವ್ಯಕ್ತಿಸುವ ರೀತಿಯಲ್ಲಿ ಇಲ್ಲಿಯ ಕವಿತೆಗಳಿವೆ. ಇಡೀ ಜಗತ್ತನ್ನು ನಡೆಸುವ ಮಾತೃ ಶಕ್ತಿಯೊಂದು ತನ್ನನ್ನು ಕೈ ಹಿಡಿದು ಪೊರೆಯುತ್ತಿದೆ. ಎನ್ನುವ ನೆಲೆಯಿಂದಲೇ ಇಲ್ಲಿಯ ಕವಿತೆಗಳು ರೂಪುಗೊಂಡಿವೆ. ಇಲ್ಲಿಯ ಪ್ರೇಮ ಕವಿತೆಗಳಿಗೆ ಬಳಸಿರುವ ಭಾಷೆರಮ್ಯ ಶೈಲಿಯಲ್ಲಿದ್ದಂತೆ ತೋರುತ್ತದೆ. ಜಾನಪದ ಶೈಲಿ, ಕಥನ ಕವನದ ಧಾಟಿಯೂ ಕೆಲವು ಕವಿತೆಗಳಲ್ಲಿ ಕಾಣುತ್ತದೆ’ ಎಂದು ಪ್ರಶಂಸಿಸಿದ್ದಾರೆ.

About the Author

ಅನಂತ ಕುಣಿಗಲ್
(20 December 1997)

ಮೂಲತಃ ತುಮುಕೂರು ಜಿಲ್ಲೆಯ ಕುಣಿಗಲ್ ನವರಾದ ಅನಂತ ಅವರು ಬಿ.ಎಸ್ಸಿ ಪದವೀಧರರು. ಡ್ರಾಮಾ ಡಿಪ್ಲೋಮಾ ಪದವೀಧರರೂ, ರಂಗಕರ್ಮಿಗಳೂ ಹೌದು.  ಹಲವಾರು ಕಿರುಚಿತ್ರ, ಸಾಕ್ಷ್ಯಚಿತ್ರಕ್ಕೆ ಕಥೆ-ಚಿತ್ರಕಥೆ ಹಾಗೂ ನಿರ್ದೇಶನ ಮಾಡಿದ್ದು, ಪ್ರತಿಲಿಪಿ, Yourqotes, ಟ್ರೆಲ್, mykannadakalaravablogspot.com ಹಾಗೂ ಕನ್ನಡ ಕವನ ಆಪ್ ನ ಮುಖಪುಟದಲ್ಲಿ ಈವರೆಗೆ ಸಾಕಷ್ಟು ಕಥೆ, ಕವನ, ಲೇಖನಗಳನ್ನು ಪ್ರಕಟಿಸಿದ್ದಾರೆ. ಕೃತಿಗಳು: ಋಣಭಾರ (ಕಥಾ ಸಂಕಲನ), ಮೂರನೆಯವಳು (ಕವನ ಸಂಕಲನ)    ...

READ MORE

Related Books