‘ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ’ ಕೃತಿಯು ಸುಬ್ಬು ಹೊಲೆಯಾರ್ ಅವರ ಕವನಗಳ ಸಂಕಲನವಾಗಿದೆ. ಈ ಕವನ ಸಂಕಲನದ ಸ್ಥಾಯಿಭಾವ ನೋವು. ಕಹಿಯುಂಡ ಕವಿ ಕೆಂಡದುಂಡೆಗಳನ್ನು ಉಗುಳಿಲ್ಲ. ಆಗಿರುವ ಹಾಗೂ ಆಗುತ್ತಿರುವ ನೋವು ನುಂಗಿಕೊಂಡೇ ನೀಡಿದ ರಚನೆಗಳು. ನೋವುಂಡ ಮನಸುಗಳ ಸಮರ್ಥ ಅಭಿವ್ಯಕ್ತಿಯಾಗಿವೆ. ಆದ್ದರಿಂದಲೇ, ಇಲ್ಲಿರುವ ಕವನಗಳು ನೋವಿನ ಕುಲುಮೆಯಲ್ಲಿ ಅರಳಿದ ಹೂವುಗಳು .
ಸುಬ್ಬು ಹೊಲೆಯಾರ್ ಎಂದೇ ಪ್ರಖ್ಯಾತವಾಗಿರುವ ಹೆಚ್. ಕೆ. ಸುಬ್ಬಯ್ಯ ಕೋಮಾರಯ್ಯ ಮತ್ತು ತಿಪ್ಪಮ್ಮ ದಂಪತಿಗಳ ಮಗನಾಗಿ ಸಕಲೇಶಪುರ ತಾಲ್ಲೂಕಿನ ಹೆತ್ತೂರಿನಲ್ಲಿ ಜನಿಸಿದರು. ಪ್ರಸ್ತುತ ದೂರದರ್ಶನ ಚಂದನ ವಾಹಿನಿಯಲ್ಲಿ ಕಾರ್ಯಕ್ರಮ ನಿರೂಪಕರಾಗಿರವ ಸುಬ್ಬು ಹೊಳೆಯಾರ್, ಡಿಪ್ಲೊಮ ಇನ್ ಡ್ರಾಮಾ ಪದವಿ, ನೀನಾಸಂ ಹೆಗ್ಗೋಡು ಇಲ್ಲಿ ರಂಗ ಶಿಕ್ಷಣ ಕಲಿತವರು. ’ಸೂಜಿಗಾತ್ರದ ಕೊಳವೆಯಿಂದ ಮನುಷ್ಯನೊಬ್ಬನ ಹಾಡು’ ಕೃತಿಗೆ ಡಾ. ಜಿ. ಎಸ್. ಎಸ್. ಕಾವ್ಯಪ್ರಶಸ್ತಿ, ದಿನಕರದೇಸಾಯಿ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶ್ರೀಗಂಧದ ಹಾರ ಕಾವ್ಯಪ್ರಶಸ್ತಿ, ’ಅಮ್ಮ’ಗೌರವ ಪ್ರಶಸ್ತಿ, ಮುಳ್ಳೂರ್ ನಾಗರಾಜ್ ಕಾವ್ಯಪ್ರಶಸ್ತಿ ಸೇರಿದಂತೆ ಹಲವಾರು ...
READ MORE