ಉಳಿದಿರುವುದು ನಮ್ಮ ದೇಹ ಮಾತ್ರ: ಬನ್ನಿ-ತಿನ್ನಿ

Author : ಷಂಶುದ್ದೀನ್ ಎಂ. ಶ್ರವಣಗೆರೆ

Pages 88

₹ 75.00




Year of Publication: 2019
Published by: ಬುದ್ಧ ಬಸವ ಗಾಂಧೀ ಸಾಂಸ್ಕೃತಿಕ ಟ್ರಸ್ಟ್
Address: #26/16, 1ನೇ ಮುಖ್ಯ ರಸ್ತೆ, 9ನೇ ಕ್ರಾಸ್, ದೀಪಾಂಜಲಿ ನಗರ, ಬೆಂಗಳೂರು-560026
Phone: 9448880985

Synopsys

ಷಂಶುದ್ದೀನ್ ಎಂ.ಶ್ರವಣಗೆರೆ ಅವರ ಎರಡನೆಯ ಕವನ ಸಂಕಲನ “ಉಳಿದಿರುವುದು ನಮ್ಮ ದೇಹಗಳು ಮಾತ್ರ ಬನ್ನಿ -ತಿನ್ನಿ”. ಈ ಸಂಕಲನದಲ್ಲಿ 48 ಕವಿತೆಗಳಿವೆ. ಷಂಶುದ್ದೀನ್ ರ ಜೀವನಾಸಕ್ತಿ, ಸಮಾಜದ ಬಗೆಗಿನ ತುಡಿತ, ಅಂತರಾಳದ ಸಂವೇದನೆ, ವಿದ್ಯಮಾನಗಳ ವಿಮರ್ಶೆ, ಅಧ್ಯಯನದ ಹರವು ಮುಂತಾದವು ಅವರ ಕವಿತೆಗಳಲ್ಲಿ ವ್ಯಕ್ತವಾಗಿವೆ.

ಸಾಮಾಜಿಕ ವಿಷಯಗಳನ್ನು ಪರಿಣಾಮಕಾರಿಯಾಗಿ ಹೇಳುವ ಷಂಶುದ್ದೀನ್, ಪ್ರೀತಿ ಪ್ರೇಮದಂತಹ ವಿಷಯಗಳನ್ನೂ ಸಾಕಷ್ಟು ತಾಜಾತನದಿಂದ ಹೇಳಬಲ್ಲ ಸಾಲು “ತಿಳಿಸಾಗರದ ನಡುವೆ ಕಣ್ಣ ಕವಡೆಯು ಜಾರಿ ಉಂಟಾದ ಅಲೆಯೇ - ನನ್ನ ಪ್ರೀತಿ” ಇದೇ ರೀತಿಯಲ್ಲಿ ಮುಂದುವರಿದು ಷಂಶುದ್ದೀನ್, ’ಆಕಾಶದೆದೆಯಲ್ಲಿ ಸೂತ್ರವೇ ವರವಾಗಿ ಹಾರುವ ಪಟವೇ - ನನ್ನ ಪ್ರೀತಿ’ ಎನ್ನುವ ಸೊಗಸಾದ ಹೋಲಿಕೆಗಳನ್ನು ನೀಡಬಲ್ಲರು. ಚೊಕ್ಕವಾದ ಅಚ್ಚ ಕನ್ನಡದಲ್ಲಿ ಶಬ್ದಾಡಂಬರವಿಲ್ಲದೆ ಸುಚಿಯಾಗಿ ತಮ್ಮ ಆಲೋಚನೆ, ಅನಿಸಿಕೆ, ಅಂತರಂಗದ ಹೊಯ್ದಾಟಗಳನ್ನು, ಕಳಕಳಿ- ಕಾಳಜಿಗಳನ್ನು ಅಭಿವ್ಯಕ್ತಿಸಿರುವುದು ಇಲ್ಲಿ ಕಂಡು ಬರುತ್ತದೆ.

About the Author

ಷಂಶುದ್ದೀನ್ ಎಂ. ಶ್ರವಣಗೆರೆ
(10 July 1988)

ಕವಿ ಷಂಶುದ್ದೀನ್ ಎಂ. ಶ್ರವಣಗೆರೆ 1988 ಜುಲೈ 10 ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೂಕಿನ, ಧರ್ಮಪುರ ಅಂಚೆಯಲ್ಲಿ ಜನಿಸಿದರು. ಪ್ರಸ್ತುತ ಕನ್ನಡ ಉಪನ್ಯಾಸಕರಾಗಿದ್ದು ಸಾಹಿತ್ಯ ರಚನೆಯಲ್ಲೂ ಆಸಕ್ತಿ ಹೊಂದಿದ್ದಾರೆ. ’ನಾ ಪರಕೀಯನಲ್ಲ’ ಅವರ ಮೊದಲ ಕವನ ಸಂಕಲನ. ಉಳಿದಿರುವುದು ನಮ್ಮ ದೇಹಗಳು ಮಾತ್ರ, ಬನ್ನಿ-ತಿನ್ನಿ ಅವರ ಮತ್ತೊಂದು ಕವನ ಸಂಕಲನ. ...

READ MORE

Related Books