ಮೊದಲ ಮಳೆ

Author : ಬಸವರಾಜ ವಿ. ಬಳ್ಳಾರಿ

Pages 95

₹ 80.00
Year of Publication: 2017
Published by: ಮೈತ್ರಿ ಪ್ರಕಾಶನ
Address: ಬೊಮ್ಮಘಟ್ಟ ಅಂಚೆ, ತಾ: ಸೊಂಡೂರು, ಜಿ: ಬಳ್ಳಾರಿ-583128
Phone: 8970885643

Synopsys

ಮೊದಲ ಮಳೆ-ಬಸವರಾಜ ಬಳ್ಳಾರಿ ಅವರ ಮೊದಲ ಕವನ ಸಂಕಲನ. ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯದಡಿ ಪ್ರಕಟವಾಗಿದೆ. ವಯೋಸಹಜವಾದ ಕವನಗಳು ಓದುಗರ ಮನಮುಟ್ಟುತ್ತವೆ. ಕಾವ್ಯ ವಸ್ತು, ನಿರೂಪಣಾ ಶೈಲಿಯೊಂದಿಗೆ ಗಮನ ಸೆಳೆಯುತ್ತವೆ. 

ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ಅವರು ಕೃತಿಗೆ ಮುನ್ನುಡಿ ಬರೆದು ‘ಈ ಕವಿಗೆ, ಕವಿ ಹೃದಯದ ಜೊತೆಗೆ ವಾಸ್ತವದ ಅರಿವಿದೆ. ಕನಸುಗಳಿರಬೇಕು. ಆದರೆ, ಅವುಗಳನ್ನು ಮೀರುವ ಎಚ್ಚರವೂ ಇರಬೇಕು ಎಂಬ ಹೊಣೆಗಾರಿಕೆ ಇಲ್ಲಿಯ ಕವಿತೆಗಳಲ್ಲಿದೆ. ಉತ್ತರ ಕರ್ನಾಟಕ ಭಾಷಾ ಶೈಲಿ ಗಮನ ಸೆಳೆಯುತ್ತದೆ. ಇಲ್ಲಿಯ ಕವನಗಳು ಪ್ರೇಮ ಕವಿತೆಗಳಾದರೂ ಅಧ್ಯಾತ್ಮವೂ ಸುಳಿದಿದೆ. ಅವಳು ಸಿದಿದ್ದರೆ ಏನಂತೆ? ಅವಳ ಒಲವಿನ ನೆನಪುಗಳು ಬದುಕಿನ ಚಿಲುಮೆ’ ಎಂಬ ಸಮಾಧಾನವಿದೆ. ಅಲ್ಲಲ್ಲಿ ಮಿಂಚಿನಂತೆ ಹೊಳೆಯುವ ಸಮರ್ಥ ಸಾಲುಗಳು ಈ ಸಂಕಲನದ ವೈಶಿಷ್ಟ್ಯವಾಗಿದೆ’ ಎಂದು ಪ್ರಶಂಸಿಸಿದ್ದಾರೆ.  

ಕೃತಿಗೆ ಬೆನ್ನುಡಿ ಬರೆದ ‘ನಮ್ಮ ಶಿಕ್ಷಕರ ತಂಡ’ ಸದಸ್ಯೆ ಎಸ್. ವಿಮಲ ಅವರು ‘ಪ್ರೀತಿಗಾಗಿ ಹಂಬಲ, ಬದುಕಿನ ವಾಸ್ತವತೆ, ಬಡತನ, ಸರಳತೆ, ಎದೆಗೆ ತಂಪೆರೆಯುವ ಮಳೆ ಹೀಗೆ ಕವನಗಳ ವಸ್ತುವು ವೈವಿಧ್ಯತೆಯನ್ನು ಹೊಂದಿವೆ. ಭಾಷೆಯು ಸರಳವಾಗಿ ಮನಮುಟ್ಟುವಂತಿದೆ’ ಎಂದು ಪ್ರಶಂಸಿಸಿದ್ದಾರೆ. 

 

About the Author

ಬಸವರಾಜ ವಿ. ಬಳ್ಳಾರಿ
(06 January 1989)

ಬಸವರಾಜ ವಿ. ಬಳ್ಳಾರಿ ಮೂಲತಃ ಬಳ್ಳಾರಿ ಜಿಲ್ಲೆಯ ಸೊಂಡೂರು (ಜನನ: 01-06-1986) ತಾಲೂಕಿನ ಬೊಮ್ಮಘಟ್ಟದವರು. ತಂದೆ ದುರುಗಪ್ಪ ತಾಯಿ ಯಲ್ಲಮ್ಮ. ವಿದ್ಯಾರ್ಹತೆ ಬಿ.ಇ (ಕಂಪ್ಯೂಟರ್‌ ಸೈನ್ಸ್), ಪ್ರಸ್ತುತ ಬೆಂಗಳೂರಿನ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ನಲ್ಲಿ ಪ್ರೋಗ್ರಾಮರ್ ಆಗಿದ್ದಾರೆ.  ಪ್ರಶಸ್ತಿಗಳು: 2017 ರಲ್ಲಿ ನಮ್ಮ ಕನ್ನಡ ತಂಡ ಆಯೋಜಿಸಿದ್ದ ಫೇಸ್‌ಬುಕ್‌ ಕಿರುಕಥಾ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, 2017ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ  ಯುವ ಬರಹಗಾರರ ಚೊಚ್ಚಲ ಕೃತಿಯ ಪ್ರೋತ್ಸಾಹ ಧನಕ್ಕೆ ‘ಮೊದಲ ಮಳೆ’ ಕವನ ಸಂಕಲನ.ಕ್ಕೆ ಬಹುಮಾನ. 2018ರಲ್ಲಿ ನಮ್ಮ ಕನ್ನಡ ತಂಡ ಆಯೋಜಿಸಿದ್ದ ಚಿಗುರು ಕವನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ. ಮೊದಲ ಮಳೆ ಇವರ ...

READ MORE

Related Books