ನಡೆದೂ ಮುಗಿಯದ ಹಾದಿ-ಕವಿ ಮಾರುತಿ ದಾಸಣ್ಣವರ ಅವರ ಕವನ ಸಂಕಲನ. ಬದುಕಿನ ದೃಷ್ಟಿಕೋನ, ಅದನ್ನು ಕ್ರಮಿಸುವ ಸೂಕ್ಷ್ಮತೆ, ತೋರುವ ಕಾಠಿನ್ಯತೆ ಎಲ್ಲವೂ ಸಂವೇದನೆಗಳ ಚೌಕಟ್ಟಿಗೆ ಒಳಪಡುವ ಇಲ್ಲಿಯ ಕವಿತೆಗಳು ಬದುಕಿನ ನಿಗೂಢತೆಯನ್ನು ಧ್ವನಿಸುತ್ತವೆ. ಈ ಸಂವೇದನೆಯೇ ಕವಿತೆಗಳ ಜೀವಾಳವಾಗುವ ಕುತೂಹಲದ ಪರಿಯನ್ನು ಕಾಣಬಹುದು. ನಡೆದಷ್ಟೂ ಮುಗಿಯದ ಪಯಣವು ನಡೆಯುತ್ತಲೇ ಇರುವ ಬದುಕಿನ ನಿರಂತರತೆಯನ್ನು ಸಮರ್ಥಿಸಿಕೊಳ್ಳುತ್ತವೆ.
ಸಂಕಲನಕ್ಕೆ ಮುನ್ನುಡಿ ಬರೆದ ಸಾಹಿತಿ ವಾಸುದೇವ ನಾಡಿಗ್ ‘ಕವಿತೆಯೊಂದ ಧ್ಯಾನ. ಅದರಾಚೆಯ ಶಬ್ದ ರೂಪ (ಕ). ಹೇಳದೇ ಉಳಿಯುವ ಅತೃಪ್ತ ನೆಲೆಯಲ್ಲಿಯೇ ಸಾಗುವ ಎಲ್ಲ ಕವಿಗಳ ಕಾಲಜಿಯು ಇದೇ ಆಗಿದೆ. ಕವಿಗೆ ಇನ್ನಷ್ಟುಇಂತಹ ಧ್ಯಾನ ಮತ್ತು ಅತ್ಯುತ್ತಮ ಓದಿನ ಸಾಂಗತ್ಯ ಸಿಕ್ಕರೆ ಅದು ಕಾವ್ಯಲೋಕದ ವಿಸ್ಮಯವನ್ನೇ ಕಟ್ಟಬಲ್ಲುದು. ಪ್ರತಿ ಕವಿಯ ಪ್ರತಿ ಕವಿತೆಯೂ ಒಂದು ಅತೃಪ್ತ ರೂಪಕದ ನಿಟ್ಟುಸಿರೇ ಆಗಿರುವುದರಿಂದ ಯಾರೂ ಇದಕ್ಕೆ ಹೊರತಲ್ಲ’ ಎನ್ನುವ ಮೂಲಕ ಕವಿ ಮಾರುತಿ ದಾಸಣ್ಣವರ ಕವಿತೆಗಳ ಸ್ವರೂಪ-ಸ್ವಭಾವವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ್ದಾರೆ.
ಸಂಕಲನಕ್ಕೆ ಬೆನ್ನುಡಿ ಬರೆದ ಮೂಡಲಗಿಯ ಸಂಗಮೇಶ ಗುಜಗೊಂಡ ‘ಸ್ವಾನುಭವದ ದಟ್ಟತೆ ಮತ್ತು ಸಹಜಾಭಿವ್ಯಕ್ತಿಯಿಂದಾಗಿ ಕವಿತೆಗಳು ಸಶಕ್ತವಾಗಿ ನಳನಳಿಸುತ್ತವೆ. ಭಾವನೆಗಳ ಉತ್ಕಟತೆಯನ್ನು ಆಸ್ವಾದಿಸಿ, ಧ್ಯಾನಿಸಿ, ನಿರಾಳವಾಗಿ ಹೇಳುವ ರೀತಿ ಅನನ್ಯ. ಜೀವನ ಪ್ರೀತಿ, ಪರಿಸರ ಪ್ರೀತಿಗಳಂತಹ ಆಶಯಗಳು ಢಾಳಾಗಿ ಸಂಕಲನದ ಮೆರಗನ್ನು ಹೆಚ್ಚಿಸಿವೆ’ ಎಂದು ಪ್ರಶಂಸಿಸಿದ್ದಾರೆ.
ಕವಿ, ಕತೆಗಾರ ಮಾರುತಿ ದಾಸಣ್ಣವರ ಬೆಳಗಾವಿ ಜಿಲ್ಲೆಯ ಗೋಕಾವಿ ತಾಲೂಕಿನ ಹೊಸಹಟ್ಟಿ ಗ್ರಾಮದವರು. ವೃತ್ತಿಯಿಂದ ಕನ್ನಡ ಅಧ್ಯಾಪಕರು. ಸಾಹಿತ್ಯ ಓದು, ಬರವಣಿಗೆಯಲ್ಲಿ ಅಪಾರ ಆಸಕ್ತಿ. ಉತ್ತಮ ವಾಗ್ಮಿಯೂ ಆದ ಅವರ ಶೈಕ್ಷಣಿಕ, ಸಾಹಿತ್ಯಕ ಕಾರ್ಯಕ್ರಮಗಳು, ಚಿಂತನೆಗಳೂ ಸೇರಿದಂತೆ 23ರೇಡಿಯೊ ಕಾರ್ಯಕ್ರಮಗಳು ಮಡಿಕೇರಿ ಆಕಾಶವಾಣಿಯಲ್ಲಿ ಪ್ರಕಟಗೊಂಡು ಜನಮನ್ನಣೆ ಗಳಿಸಿವೆ. ಇತ್ತಿಚಿನ ದಿನಗಳಲ್ಲಿ ವಿಮರ್ಶೆಗೂ ಹೆಜ್ಜೆ ಇಟ್ಟಿದ್ದಾರೆ. ಅವರ ‘ಮಬ್ಬುಗತ್ತಲೆಯ ಮಣ್ಣ ಹಣತೆ’ ಕತಾ ಸಂಕಲನ, ನಾನೂರುವ ಹೆಜ್ಜೆಗಳು, ನಡೆದೂ ಮುಗಿಯದ ಹಾದಿ( ಕವನ ಸಂಕಲನ) ಅವರ ಪ್ರಕಟಿತ ಕೃತಿಗಳು. ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ದತ್ತಿನಿಧಿ ಬಹುಮಾನ, ದಲಿತ ಸಾಹಿತ್ಯ ಪರಿಷತ್ತು ಪುಸ್ತಕ ಬಹುಮಾನ, ಎಚ್ಚೆಸ್ಕೆ ಸಾಹಿತ್ಯ ಪುರಸ್ಕಾರ, ಕೆ. ...
READ MORE