ಮೆರವಣಿಗೆ (ಕಾವ್ಯ)

Author : ಸಿದ್ಧಲಿಂಗಯ್ಯ

Pages 152

₹ 95.00




Year of Publication: 2012
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560 004
Phone: 26617100, 26617755

Synopsys

ಕವಿ ಡಾ. ಸಿದ್ಧಲಿಂಗಯ್ಯ ಅವರ ಮೊದಲ ಮೂರು ಕವನ ಸಂಕಲನಗಳ ಜೊತೆ ಬಿಡಿ ಕವಿತೆಗಳನ್ನು ಸೇರಿಸಿದ ಸಂಕಲನ ಇದು. ಈ ಸಂಕಲನದಲ್ಲಿ ’ಹೊಲೆ ಮಾದಿಗರ ಹಾಡು’, ’ನನ್ನ ಜನಗಳು’ ಮತ್ತು ’ಕಪ್ಪು ಕಾಡಿನ ಹಾಡು’ ಸಂಕಲನಗಳಿವೆ. ಅವುಗಳಲ್ಲದೆ ಸಿದ್ಧಲಿಂಗಯ್ಯ ಅವರ ನಂತರದ ಸಂಕಲನಗಳಲ್ಲಿ ಸೇರಿದ ಹಲವು ಹೊಸ ಕವಿತೆಗಳೂ ಇವೆ.

ಸಿದ್ಧಲಿಂಗಯ್ಯ ಅವರ ಕವಿತೆಗಳ ಬಗ್ಗೆ ವಿಮರ್ಶಕ ಡಾ. ಡಿ. ಆರ್‌. ನಾಗರಾಜ್ ಅವರು ’1975 ರಿಂದ ಈಚೆಗೆ ದಲಿತರು ಹೊಸ ಪ್ರಜ್ಞಾವಂತ ಜನಾಂಗವಾಗಿ ಕರ್ನಾಟಕದಲ್ಲಿ ಸಿದ್ದಲಿಂಗಯ್ಯನವರ ಕವಿತೆಗಳ ಎರಕದಲ್ಲಿ ರೂಪುಗೊಂಡರು. ದಲಿತರ ಮೆರವಣಿಗೆ ಬೀದರ್‌ನಿಂದ ಕೋಲಾರದ ತನಕ ಯಾವುದೇ ಮೂಲೆಯಲ್ಲಿ ನಡೆದರೂ ಅಲ್ಲಿ ಕವಿಯ ಹಾಡುಗಳು. ಇದು ಸಾರ್ವಜನಿಕ ಕಾವ್ಯದ ಅಂತಿಮ ಯಶಸ್ಸು. ಸಾರ್ವಜನಿಕ ರಾಜಕೀಯ ಬದುಕಿನ ಉತ್ಸಾಹ, ರೋಷ, ಭೀತಿಗಳನ್ನು ಕವಿ ಇಲ್ಲಿ ಪರಿಣಾಮಕಾರಿಯಾಗಿ ಹಿಡಿದಿಟ್ಟಿದ್ದಾರೆ. ಸಾರ್ವಜನಿಕ ಕಾವ್ಯಕ್ಕೆ ಒಂದು ಭಾಷಣದ ಗುಣವಿರದಿದ್ದರೆ ರುಚಿಸುವುದೇ ಇಲ್ಲ. ಅದಕ್ಕಾಗಿಯೇ ಕ್ರಾಂತಿಕವಿಗಳು ಉತ್ತೇಕ್ಷೆ ಆಯ್ದುಕೊಳ್ಳುತ್ತಾರೆ. ಇಲ್ಲವೆ ಬ್ರೆಕ್ಟ್‌ನ ಹಾಗೆ ವ್ಯಂಗ್ಯವನ್ನು, ವೈರುಧ್ಯಗಳನ್ನು ಕೋಪ, ಶೋಕ ಅಥವಾ ವ್ಯಂಗ್ಯ, ನಗು-ಹೀಗೆ ಯಾವುದೇ ಆದರೂ ಸಾರ್ವಜನಿಕ ಸಭೆ ಎಂಬಂತ ಸ್ಥಿತಿಯಲ್ಲಿಯೇ ಕಾವ್ಯ ಅನುರಣಿಸುತ್ತದೆ. ಹೀಗೆ ಸಾರ್ವಜನಿಕ ಕಾವ್ಯ ತನ್ನ ಅತ್ಯುತ್ತಮ ಕ್ಷಣಗಳಲ್ಲಿ ಒಂದು ಆದಿಮ ಸಮಷ್ಟಿಯನ್ನು ಸೃಷ್ಟಿಸುತ್ತದೆ. ಒಂದು ರೀತಿಯ ಭಾವುಕ ಏಕತೆ ಕವಿ ಮತ್ತು ಸಮಷ್ಟಿಯನ್ನು ಜೋಡಿಸುತ್ತದೆ. ಈ ದೃಷ್ಟಿಯಿಂದ ಬೇಂದ್ರೆಯ ನಂತರ ಅತ್ಯಂತ ಹೆಚ್ಚು ಸಾರ್ವಜನಿಕ ಅಸ್ತಿತ್ವವುಳ್ಳ ಕಾವ್ಯ ಬರೆದ ಕವಿಯೆಂದರೆ ಸಿದ್ದಲಿಂಗಯ್ಯ ನವರೇ ಇರಬೇಕು' ಎಂದು ಅಭಿಪ್ರಾಯಪಟ್ಟಿದ್ದಾರೆ.

 

About the Author

ಸಿದ್ಧಲಿಂಗಯ್ಯ
(03 February 1954)

ದಲಿತ ಕವಿ ಎಂದು ಗುರುತಿಸಲಾಗುವ ಡಾ. ಸಿದ್ಧಲಿಂಗಯ್ಯ ಅವರು ದಲಿತ-ಬಂಡಾಯ ಸಾಹಿತ್ಯ ಚಳುವಳಿಯ ಪ್ರಮುಖ ಕವಿ-ಹೋರಾಟಗಾರ. ಮಾಗಡಿಯಲ್ಲಿ 1954ರ ಫೆಬ್ರುವರಿ 3ರಂದು ಜನಿಸಿದರು. ತಾಯಿ ವೆಂಕಮ್ಮ- ತಂದೆ ದೇವಯ್ಯ. ಬಡತನದಲ್ಲಿಯೇ ಗ್ರಾಮೀಣ ಭಾಗದ ಶಾಲೆಗಳಲ್ಲಿ ತಮ್ಮ ಪ್ರಾರಂಭಿಕ ಶಾಲಾ ವಿದ್ಯಾಭ್ಯಾಸ ಮಾಡಿ ಎಂ.ಎ. ಪದವಿಗಳಿಸಿ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿ, ನಿರ್ದೇಶಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಡಾ. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸಿದ ನಂತರ ಸಿದ್ಧಲಿಂಗಯ್ಯನವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ನಡೆದ ಅಖಿಲ ಕರ್ನಾಟಕ ...

READ MORE

Related Books