ಹತ್ತಿರದ ಮಾತು

Author : ದೇರಾಜೆ ಸೀತಾರಾಮಯ್ಯ

Pages 76

₹ 60.00
Year of Publication: 2003
Published by: ಸುಮನಸಾ ವಿಚಾರ ವೇದಿಕೆ
Address: ಚೊಕ್ಕಾಡಿ

Synopsys

‘ಹತ್ತಿರದ ಮಾತು’ ಸತ್ಯನ್‌ ದೇರಾಜೆ ಅವರ ಕವನ ಸಂಕಲನವಾಗಿದೆ. ಭೂಮಿ ತಾಯಿ ಸೇವೆಗೈಯುತ್ತ ವೃತ್ತಿಯಲ್ಲಿ ಕೃಷಿಕರಾಗಿದ್ದು ಪ್ರವೃತ್ತಿಯಲ್ಲಿ ಸಾಹಿತ್ಯ ಸೇವೆಯನ್ನೂ ಮಾಡುತ್ತಿರುವ ದೇರಾಜೆ ಅವರದ್ದು ತುಂಬ ಸಂಕೋಚದ ಮನೋಭಾವ, ಪ್ರಕೃತಿಯ ಮಡಿಲಲ್ಲಿ ನೈಜ ಪರಿಸರದಲ್ಲಿ ಸಹಜವಾಗಿ ಮೂಡಿ ಬಂದ ಭಾವನೆಗಳನ್ನಷ್ಟೇ ಅವರು ತಮ್ಮ ಕವಿತೆಗಳಲ್ಲಿ ಹಿಡಿದಿಟ್ಟು ತೃಪ್ತಿಗೊಂಡಿದ್ದಾರೆ.

About the Author

ದೇರಾಜೆ ಸೀತಾರಾಮಯ್ಯ
(17 November 1914 - 05 October 1984)

ಹಿರಿಯ ಚಿಂತಕ-ಲೇಖಕ-ಪ್ರವಚನಕಾರ-ಯಕ್ಷಗಾನ ಕಲಾವಿದ ದೇರಾಜೆ ಸೀತಾರಾಮಯ್ಯ ಅವರು ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದವರು. ಜಮೀನುದಾರರು. ತಂದೆ ಮಂಗಲ್ಪಾಡಿ ಕೃಷ್ಣಯ್ಯ, ತಾಯಿ ಸುಬ್ಬಮ್ಮ. ಯಕ್ತಗಾನ ಕಲಾವಿದರ ಮನೆತನ. ಪ್ರಾಥಮಿಕ ಶಾಲೆಯ ಗುರು ಕೊಟ್ಟೆಕಾಯಿ ನಾರಾಯಣ ರಾಯರ ಕುಮಾರವ್ಯಾಸ ಕುರಿತ ಪಾಠದಿಂದ ಅಭಿನಯ, ಸಾಹಿತ್ಯಾಸಕ್ತಿ ಮೂಡಿತು. ಯಕ್ಷಗಾನ, ತಾಳಮದ್ದಳೆ, ನಾಟಕ, ರಂಗಭೂಮಿಯ ಬಗ್ಗೆ ಸಂಶೋಧನೆ - ವಿಮರ್ಶೆಗಳು ಹೀಗೆ ವೈವಿಧ್ಯಮಯ ಸಾಹಿತ್ಯ ರಚಿಸಿದ್ದು ಇವರ ವೈಶಿಷ್ಟ್ಯ. ಬೆಳ್ಳಾರೆ ಗ್ರಾ.ಪಂ ಅಧ್ಯಕ್ಷರಾಗಿದ್ದರು. ಪುತ್ತೂರು ತಾಲೂಕು ಮಾರುಕಟ್ಟೆ ಸೊಸೈಟಿ ಅಧ್ಯಕ್ಷರು, ದಕ್ಷಿಣ ಕನ್ನಡ ಕೃಷಿಕರ ಮಾರಾಟ ಸಹಕಾರ ಸಂಘದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಕೃತಿಗಳು: ಭೀಷ್ಮಾರ್ಜುನ ...

READ MORE

Reviews

ಹೊಸತು-2004- ಮೇ

ಮೂವತ್ತು ವರ್ಷಗಳಿ೦ದಲೂ ಪದ್ಯ ಬರೆಯುತ್ತಿರುವ ಸತ್ಯನ್ ದೇರಾಜೆ ಅವರ ಪ್ರಥಮ ಕವನ ಸಂಕಲನ ಇತ್ತೀಚೆಗಷ್ಟೇ ಪ್ರಕಟವಾಗಿದೆ. ಭೂಮಿ ತಾಯಿ ಸೇವೆಗೈಯುತ್ತ ವೃತ್ತಿಯಲ್ಲಿ ಕೃಷಿಕರಾಗಿದ್ದು ಪ್ರವೃತ್ತಿಯಲ್ಲಿ ಸಾಹಿತ್ಯ ಸೇವೆಯನ್ನೂ ಮಾಡುತ್ತಿರುವ ದೇರಾಜೆ ಅವರದ್ದು ತುಂಬ ಸಂಕೋಚದ ಮನೋಭಾವ, ಪ್ರಕೃತಿಯ ಮಡಿಲಲ್ಲಿ ನೈಜ ಪರಿಸರದಲ್ಲಿ ಸಹಜವಾಗಿ ಮೂಡಿಬಂದ ಭಾವನೆಗಳನ್ನಷ್ಟೇ ಅವರು ತಮ್ಮ ಕವಿತೆಗಳಲ್ಲಿ ಹಿಡಿದಿಟ್ಟು ತೃಪ್ತಿಗೊಂಡಿದ್ದಾರೆ. ಇಲ್ಲಿನ ಕವಿತೆಗಳೇ ತನ್ನ ಕಣ್ಣುಗಳೆಂದು ಅವರು ಹೇಳಿಕೊಂಡಿದ್ದಾರೆ.

Related Books