ನಾಲ್ಕು ಧ್ವನಿ

Author : ಜೀವಿ (ಜಿ.ವಿ. ಕುಲಕರ್ಣಿ)

Pages 60

₹ 6.00




Year of Publication: 1978
Published by: ಪುರೋಗಾಮಿ ಸಾಹಿತ್ಯ ಪ್ರಕಾಶನ
Address: 54, ಲಕಮನಹಳ್ಳಿ ಓಣಿ, ಧಾರವಾಡ-580001

Synopsys

’ಜೀವಿ’ ಕಾವ್ಯನಾಮದಿಂದ ಬರೆಯುವ ಜಿ.ವಿ. ಕುಲಕರ್ಣಿ ಅವರ ಕವಿತೆಗಳ ಮೂರನೆಯ ಕವನ ಸಂಕಲನ ’ನಾಲ್ಕುಧ್ವನಿ’. ಈ ಸಂಕಲನದಲ್ಲಿ ಒಟ್ಟು 24 ಕವಿತೆಗಳಿವೆ. ಜೀವಿ ಅವರು ಬೇಂದ್ರೆಯವರಿಗೆ ಸಲ್ಲಿಸಿದ ’ನಮನ’ ಕವಿತೆಯ ಜೊತೆಗೆ ’ಹೃದಯಪೀಠದ ಬೇಂದ್ರೆ’ ಎಂಬ ಕವಿತೆಯೂ ಆರಂಭದಲ್ಲಿದೆ. ಈ ಸಂಕಲನಕ್ಕೆ ಹಿರಿಯ ಲೇಖಕ ರಾ.ಯ.ಧಾರವಾಡಕರ್‌ ಅವರ ಮುನ್ನುಡಿಯಿದೆ.

ಈ ಮುನ್ನುಡಿಯಲ್ಲಿ ಧಾರವಾಡಕರ್‌ ಅವರು ’ಹುಚ್ಚ-ಹುಚ್ಚಿ’ಯ ಮಾಣಿಕಗೆಂಪಿನ-ಕಂಗೊಳಿಸುವ ಕೆಂಪು ಮುಂದೆ-ಕಾಲದಿಂದ ’ನಾಲ್ಕು-ಧ್ವನಿ’ಗೆ ಬಂದ ಕವಿ ’ಜೀವಿ’ಯವರು ಸಮಾಜವನ್ನು ರಾಜಕಾರಣವನ್ನು ರಾಜಕಾರಣಿಗಳನ್ನು ಸತ್ಯದ ಪ್ರಖರ ಬೆಳಕಿನಲ್ಲಿ ನೋಡಿದ್ದಾರೆ. ಮಣ್ಣಿನಿಂದ ಮಾನವರನ್ನಾಗಿ ಮಾಡಿದ, ಒಣಗಿದ ತರಗೆಲೆಯನ್ನು ಆಕಾಶದೆತ್ತರಕ್ಕೆ ಒಯ್ದು, ವಿಭೂತಿಪುರುಷ, ದೇವ-ಮಾನವ, ಮಹಾತ್ಮಾ ಗಾಂಧಿಯವರ ಬಗ್ಗೆ ವ್ಯಕ್ತವಾದ-ವ್ಯಕ್ತವಾಗುತ್ತಿರುವ ನಾಲ್ಕು-ಧ್ನನಿಗಳೇ ಈ ಕವನಸಂಕಲನದ ಶೀರ್ಷಿಕೆಗೆ ಕಾರಣವಾಗಿವೆ. ಗಾಂಧೀಜಿ ವ್ಯಕ್ತಿತ್ವದ ದೊಡ್ಡ ಆಲದ ಕೆಳಗೆ ಯಾವ ಬಿತ್ತೂ ಬೆಳೆಯಲಿಲ್ಲವೆಂದು ಒಂದು ಧ್ವನಿಯಾದರೆ, ಮೃಣ್ಮಯದ ದೇಹದಲಿ ಚಿನ್ಮಯದ ದೀಪವನು ಹೊತ್ತಿಸಿದ ಅವತಾರಿ ಅವನೆಂದು ಎರಡನೆಯ ಧ್ವನಿ ಹೇಳುತ್ತಿದೆ. ಏಸುವಿಗೆ ಶೂಲ, ಸುಕರಾತನಿಗೆ ವಿಷ-ದೊನ್ನೆ, ಕೃಷ್ಣನಿಗೆ ವ್ಯಾಧನ ಬಾಣ, ಕಾಯ್ದಂತೆ ಇವನನ್ನು ಹಿಂಸೆಯೇ ಗೆದ್ದು ಸೋತಿತು ಎಂದು ಮೂರನೆಯ ಧ್ವನಿ ಸಾರುತ್ತದೆ. ಆದರೆ, ನಾಲ್ಕನೆಯ ಧ್ವನಿ-ಸಂಸಾರಿಯಾಗಿಯೂ ಬ್ರಹ್ಮಚರ್ಯವ ನಡೆಸಿ, ಮೌನಾಗ್ನಿಯಿಂದಲೇ ಜನರ ಬೇಯಿಸಿದ ಈ ಮಹಾತ್ಮ, ಈ ಯುಗದ ಪುಣ್ಯಪುರುಷ, ಅವತಾರಿ
ತಿನ್ನುವ ಬಕಾಸುರಶಕ್ತಿಗಿಂತ
ಉಪವಾಸದ ಭೀಮಶಕ್ತಿಯ ಮಹಿಮೆ
ಜಗಕೆ ತೋರಿಸಿದ-
ಎಂದು ಹೇಳುತ್ತದೆ’ ಎಂದು ಬರೆದಿದ್ದಾರೆ.

About the Author

ಜೀವಿ (ಜಿ.ವಿ. ಕುಲಕರ್ಣಿ)
(10 June 1937)

  ಮೂಲತಃ ವಿಜಯಪುರ ಜಿಲ್ಲೆಯ ಡೊಮನಾಳ ಗ್ರಾಮದವರಾದ ಡಾ. ಜಿ.ವಿ.ಕುಲಕರ್ಣಿ ಕವಿ, ನಾಟಕಕಾರ, ವಿಮರ್ಶಕ. ’ಜೀವಿ’ ಎಂಬ ಕಾವ್ಯ ನಾಮದಿಂದ ಬರೆಯುವ ಅವರು ಶಾಲಾ-ಕಾಲೇಜಿನ ದಿನಗಳಿಂದಲೂ 'ಮೆರಿಟ್ ಸ್ಕಾಲರ್ಶಿಪ್' ಪಡೆಯುತ್ತಿದ್ದ ವಿದ್ಯಾರ್ಥಿ. 'ಫೆಲೋಶಿಪ್' ಪಡೆದೇ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಎಂ.ಎ) ಕನ್ನಡ ಹಾಗೂ ಸಂಸ್ಕೃತ ಬಿ.ಎ. ಪದವಿಗಳನ್ನು ಗಳಿಸಿದರು. ನಂತರ, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ ಪದವಿ ಪೂರ್ಣಗೊಳಿಸಿ ಮುಂಬೈಗೆ ತೆರಳಿದರು. ಮುಂಬಯಿ ವಿಶ್ವವಿದ್ಯಾಲಯದಿಂದ ಆಂಗ್ಲ ಭಾಷೆಯಲ್ಲಿ ಎಂ.ಎ, ಪಿಎಚ್.ಡಿ ಪಡೆದರು. ಬೊಂಬಾಯಿ ನಗರದ ಖಾಲ್ಸಾ ಮತ್ತು ಡಹಣೂಕರ್ ಚೀನಾಯ್ ಕಾಲೇಜುಗಳಲ್ಲಿ ಕನ್ನಡ-ಇಂಗ್ಲೀಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ...

READ MORE

Related Books