ಮನದಂಗಳ

Author : ಮುರುಗೆಪ್ಪ ಹಡಪದ ಹಣಮನಹಳ್ಳಿ

Pages 87

₹ 50.00




Year of Publication: 2009
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಸೇಡಂ ಘಟಕ, ತಾಲೂಕು ಸೇಡಂ, ಜಿಲ್ಲೆ ಕಲಬುರಗಿ

Synopsys

ಕವಿ ಮುರುಗೆಪ್ಪ ಹಡಪದ ಹಣಮನಹಳ್ಳಿ ಅವರ ಕವನಗಳ ಸಂಕಲನ-ಮನದಂಗಳ. ಒಟ್ಟು 71 ಕವಿತೆಗಳಿವೆ. ಸಾಹಿತಿ ಭಂಟನೂರು ಗುರುಶಾಂತಯ್ಯ ಅವರು ಕೃತಿಗೆ ಮುನ್ನುಡಿ ಬರೆದು ‘ವೈಚಾರಿಕ ಚಿಂತನೆಯ  ಪ್ರಬುದ್ಧತೆಯನ್ನು ಒಳಗೊಂಡ ಹಾಗೂ ಅಧ್ಯಾತ್ಮದ ಛಾಯೆಯನ್ನು ಬೀರುವ ಹಾಗೂ ಭಾವಗೀತೆಯ ರಹದಾರಿಯಲ್ಲಿರುವಂತೆ ಇಲ್ಲಿಯ ಕವಿತೆಗಳಿವೆ ಎಂದು ಪ್ರಶಂಸಿಸಿದ್ದರೆ, ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಮುಡಬಿ ಗುಂಡೇರಾವ ‘ ಕೆಲವು ವಿಡಂಬನಾತ್ಮಕ ಕವನಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕರೆ ನೀಡುತ್ತವೆ ಎಂದು ಶ್ಲಾಘಿಸಿದ್ದಾರೆ. 

 

About the Author

ಮುರುಗೆಪ್ಪ ಹಡಪದ ಹಣಮನಹಳ್ಳಿ
(10 June 1983)

ಮುರುಗೆಪ್ಪ ಹಡಪದ ಹಣಮನಹಳ್ಳಿ ಅವರು ಮೂಲತಃ ಕಲಬುರಗಿ ಜಿಲ್ಲೆಯ ಸೇಡಂ ನವರು. ತಂದೆ ರೇವಣ‌ಸಿದ್ದಪ್ಪ, ತಾಯಿ ಚೆನ್ನಮ್ಮ. ವೃತ್ತಿಯಿಂದ ಸಹಶಿಕ್ಷಕರು. ತತ್ವಪದ ಸಾಹಿತ್ಯದಲ್ಲಿ ವಿಶೇಷ ಒಲವು. ಇವರ ಕಾವ್ಯನಾಮ ಶ್ರೀ 3,13,9,18 ಹಾಗೂ ಅಂಕಿತನಾಮ ಕೊಡೇಕಲ್ಲ ಚನ್ನಬಸವಣ್ಣ.  ಕೃತಿಗಳು: ಮನದಂಗಳ (ಕವನ ಸಂಕಲನ-2009), ಸಾಂತ್ವನ (ಕವನ ಸಂಕಲನ-2022)  ...

READ MORE

Related Books