ಕವಿ ಲಕ್ಕೂರ್ ಆನಂದ ಅವರ ಕವನ ಸಂಕಲನ ’ಬಟವಾಡೆಯಾಗದ ರಸೀತಿ’.
ಅಸಹನೆ, ನೋವು, ಪ್ರೀತಿ, ನಂಬಿಕೆಗಳು ಇವರ ಕವಿತೆಗಳಲ್ಲಿ ವ್ಯಕ್ತವಾಗಿದೆ. ಇಲ್ಲಿನ ಅನೇಕ ಕವಿತೆಗಳಿಗೆ ಅಂತರ್ ಸಂಬಂಧವಿದೆ. ನೆಲದ ಕಾವಿನ ಕರುಣೆ, ಉರುಳಿದ ಏಕಾಂತ ಶಬ್ದ ಎಂಬಂತಹ ಶೀರ್ಷಿಕೆಗಳನ್ನು ಗಮನಿಸಬಹುದು. ಕಾವ್ಯವೆಂದರೆ ಓರೆಯಾಗಿ ತೆರೆದಿಟ್ಟ ಬಾಗಿಲು ಎಂದು ನಂಬಿರುವ ಬಯಲ ಕವಿ ಲಕ್ಕೂರು ಆನಂದ. ಕಣ್ಣ ಹರಿಸಿದಂತೆಲ್ಲ ಬೆರಗ ಬಯಲು, ಮೇಲೆ ನಭದಲ್ಲಿ ನಗುವ ನವಿಲು ಎನ್ನುವ ಅವರದ್ದೇ ಕವಿತೆಯ ಸಾಲುಗಳಂತೆ ಕಾವ್ಯದ ಸ್ವರೂಪವನ್ನು ತೆರೆದಿಡುತ್ತದೆ.
ಲಕ್ಕೂರು ಸಿ. ಆನಂದ ಅವರು ಮೂಲತಃ ಕೋಲಾರ ಜಿಲ್ಲೆಯ ಲಕ್ಕೂರಿನವರು. ದಲಿತ- ಬಂಡಾಯ ಕಾವ್ಯ ಮಾರ್ಗದ ಮೂರನೇ ತಲೆಮಾರಿನವರಾದ ಅವರು ಸೃಜನಶೀಲ ಬರಹಗಾರ. ಕವಿ, ವಿಮರ್ಶಕ, ಅನುವಾದಕರಾಗಿಯೂ ಗುರುತಿಸಿಕೊಂಡಿರುವ ಆನಂದ ಅವರ ಮಾತೃಭಾಷೆ ತೆಲುಗು. ಪ್ರಸ್ತುತ ಕೆಂಗೇರಿ ಶೇಷಾದ್ರಿಪುರಂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಕ್ಕೂರು ಆನಂದ ಅವರು ಇದುವರೆಗೆ ಐದು ಕವನ ಸಂಕಲನ, ಐದು ಅನುವಾದಿತ ಕೃತಿಗಳು ಹಾಗೂ ಒಂದು ಸಂಶೋಧನಾ ಗ್ರಂಥವನ್ನು ಪ್ರಕಟಿಸಿದ್ದಾರೆ. ಮಾತಂಗ ಮಾದಿಗರ ಸಂಸ್ಕೃತಿಯ ಬಗ್ಗೆ ಆನಂದ ಅವರು ಆಳವಾದ ಅಧ್ಯಯನ ನಡೆಸಿದ್ದಾರೆ. ತೆಲುಗು ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ ಅತ್ಯುತ್ತಮ ಆತ್ಮ ...
READ MOREಕೇಂದ್ರ ಸಾಹಿತ್ಯ ಅಕಾಡೆಮಿ, ಯುವ ಪುರಸ್ಕಾರ (2013)