ಮತ್ತೆ ಕಾಡಿದೆ ಮೌನ

Author : ಚಂದ್ರಶೇಖರ ಮಾಡಲಗೇರಿ

Pages 64

₹ 70.00




Year of Publication: 2017
Published by: ಸ್ಟ್ಯಾಗ್ ಪಬ್ಲಿಕೇಶನ್
Address: ಹುಬ್ಬಳ್ಳಿ
Phone: 9986821096

Synopsys

ಮತ್ತೆ ಕಾಡಿದೆ ಮೌನ-ಕವಿ ಚಂದ್ರಶೇಖರ ಮಾಡಲಗೇರಿ ಅವರ ಕವನ ಸಂಕಲನ. ಕವಿ ತನ್ನ ಜೀವನದಲ್ಲಿ ಹಾಗೂ ಸಮಾಜದಲ್ಲಿ ಕಣ್ಣೆದುರಿಗೆ ನಡೆಯುವ ಸನ್ನಿವೇಶಗಳನ್ನು ತನ್ನ ಆಂತರ್ಯದ ಒರೆಗಲ್ಲಿಗೆ ಹಚ್ಚಿ ಇಲ್ಲಿನ ಕವಿತೆಗಳ ಮೂಲಕ ಅನಾವರಣಗೊಳಿಸಿದ್ದಾರೆ. ಸಮಾಜದ ವಿವಿಧ ಸ್ತರಗಳ, ವರ್ಗಗಳ ಜನರ ನಿತ್ಯ ಜೀವನದ ಆಗು ಹೋಗುಗಳನ್ನು ಸಾಮಾನ್ಯರಿಗೂ ಮನಮುಟ್ಟುವಂತೆ ಹೆಣೆದಿದ್ದಾರೆ. ವಯೋಸಹಜವಾದ ಪ್ರೀತಿ-ಪ್ರೇಮದ ಛಾಯೆ ಅಲ್ಲಲ್ಲಿ ತಲೆದೋರಿದರೂ ಹೆಣ್ಣು-ಗಂಡಿನ ಹೃದಯದ ಗೂಡಲ್ಲಿ ಸುರಿಸುವ ಭಾವನೆಗಳನ್ನು ತುಂಬಾ ನವಿರಾಗಿ ಚಿತ್ರಿಸಿದ್ದಾರೆ.

About the Author

ಚಂದ್ರಶೇಖರ ಮಾಡಲಗೇರಿ
(01 December 1982)

ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನ ತಳ್ಳಿಹಾಳ ಗ್ರಾಮದ ಚಂದ್ರಶೇಖರ ಮಾಡಲಗೇರಿ ಅವರು ಹಲವಾರು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ. ಸಾಹಿತ್ಯ ಕೃಷಿ, ಪತ್ರಿಕೋದ್ಯಮ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ತೊಡಗಿಕೊಂಡಿರುವ ಇವರ ನಾಲ್ಕು ಕೃತಿಗಳು ಜನಮಾನಸದಲ್ಲಿ ನೆಲೆಗೊಂಡಿವೆ. ಇವರದೇ ಪ್ರಕಾಶನಗಳಾದ ಚೇತನ ಬುಕ್ಸ್ ಅಂಡ್ ಮೀಡಿಯಾ ಹೌಸ್ ಹಾಗೂ ಸ್ಯ್ಯಾಗ್ ಪಬ್ಲಿಕೇಶನ್ ಮೂಲಕ ಎಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಸದ್ಯ ಚೇತನ ಎಂಬ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರಲ್ಲದೇ ಅಂಕಣಕಾರರಾಗಿ ಪತ್ರಕರ್ತರಾಗಿದ್ದಾರೆ. ...

READ MORE

Related Books