ನೀಲಿ ಬಯಲು

Author : ಎಂ.ಜಿ. ತಿಲೋತ್ತಮೆ

Pages 78

₹ 80.00
Year of Publication: 2020
Published by: ಭಾವಸಿಂಚನಾ ಪ್ರಕಾಶನ
Address: ವಾರ್ಡ್ ನಂ.13, ಆಂಜನೇಯ ದೇವಸ್ಥಾನದ ಹಿಂಭಾಗ ಮಹಾವೀರ ನಗರ, ಕುಣಿಗಲ್-572130, ತುಮಕೂರು ಜಿಲ್ಲೆ
Phone: 9036402083

Synopsys

ಲೇಖಕಿ ಎಂ.ಜಿ. ತಿಲೋತ್ತಮೆ ಅವರ ಎರಡನೇ ಕವನ ಸಂಕಲನ-ನೀಲಿ ಬಯಲು. 40 ಕವಿತೆಗಳನ್ನು ಸಂಕಲಿಸಲಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಸಾಹಿತಿ ಸುಬ್ರಾಯ ಚೊಕ್ಕಾಡಿ ‘ ಪ್ರಕೃತಿ ಪ್ರೇಮ , ಗಡಿಯೊಳಗೇ ಇರಬೇಕಾದ ಸ್ತ್ರೀಯ ಸಂಕಟಗಳು ,ಕೆಟ್ಟದ್ದರ ವಿರುದ್ದದ ತಣ್ಣಗಿನ ಪ್ರತಿಭಟನೆ ಮೊದಲಾದವುಗಳು ಇಲ್ಲಿನ ಕವಿತೆಗಳ ವಸ್ತುಗಳಾಗಿವೆ. ಪ್ರಕೃತಿಯ ಕುರಿತಾದ ಕವಿಯು ಕೊಡುವ ಚಿತ್ರ ಈ ರೀತಿಯದು: ಮೊದಲ ಮಳೆಯೆಂದರೆ ಎಂದೂ ಹರಡಿಕೊಳ್ಳದ ಕಾಡ ಹೂವು ಬೀದಿಯ ತುಂಬ ಗಂಧ ಸುರಿದ ಹಾಗೆ ಬಂಡೆಯ ಮೇಲೂ ಮೆತ್ತನೆಯ ಹುಲ್ಲು ಬೆಳೆಯಲು ತವಕಿಸುವುದು’ ಎಂದು ಪ್ರಶಂಸಿಸಿದ್ದಾರೆ. ಕವಿತೆಗಳ ವಸ್ತು, ನಿರೂಪಣಾ ಶೈಲಿ, ಸಾಮಾಜಿಕ ಹೊಣೆಗಾರಿಕೆ ಇತ್ಯಾದಿ ಸಾಹಿತ್ಕಕ ಅಂಶಗಳಿಂದ ಕವಿತೆಗಳು ಓದುಗರ ಗಮನ ಸೆಳೆಯುತ್ತವೆ. 

 

About the Author

ಎಂ.ಜಿ. ತಿಲೋತ್ತಮೆ

ಕವಿ ಎಂ.ಜಿ. ತಿಲೋತ್ತಮೆ ಅವರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವರು. ಪದವಿ ವಿಧ್ಯಾಭ್ಯಾಸವನ್ನು ಭಟ್ಕಳದಲ್ಲಿ ಪೂರೈಸಿದರು. ಸದ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪುತ್ತೂರಿನ ವಿದ್ಯಾರ್ಥಿ ನಿಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದ ಬಗ್ಗೆ ಒಲವು. 2013ರಲ್ಲಿ ‘ನಾ ಅಬಲೆಯಲ್ಲ’, 2020ರಲ್ಲಿ `ನೀಲಿ ಬಯಲು’ ಕವನ ಸಂಕಲನಗಳು ಪ್ರಕಟಗೊಂಡಿವೆ. ಅವರಿಗೆ ಯುವ ಬರಹಗಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ...

READ MORE

Related Books