ಮನವೀಣೆಯ ಮೀಟು

Author : ಸುಜಾತಾ ಎನ್

Pages 78

₹ 100.00




Year of Publication: 2021
Published by: ಹೆಚ್.ಎಸ್. ಆರ್.ಎ ಪ್ರಕಾಶನ
Address: #2, ಶ್ರೀ ಅನ್ನಪೂರ್ಣೇಶ್ವರಿ ನಿಲಯ, 1ನೇ ಮುಖ್ಯರಸ್ತೆ, ಭೈರವೇಶ್ವರ ನಗರ, ಬೆಂಗಳೂರು- 560058
Phone: 7892793054

Synopsys

ಲೇಖಕಿ ಸುಜಾತಾ ರವೀಶ್ ಅವರ ಎರಡನೆಯ ಕವನ ಸಂಕಲನ ಮನವಿಣೆಯ ಮೀಟು. ವೈಶಾಲಿ ನರಹರಿ ರಾವ್ ಅವರು ಬೆನ್ನುಡಿಯ ಮಾತುಗಳಲ್ಲಿ ಹೇಳಿರುವಂತೆ, ತಂದೆ-ತಾಯಿಗಳ ಬಾಂಧವ್ಯದ ಸವಿಗಾನ‌ ಮೀಟುತ್ತಾ, ಭ್ರೂಣದ ಸವಾಲು ಎದುರಿಸಿ, ಸ್ನೇಹ, ಸರಸ,ಒಲವುಗಳ ಆರೋಹಣಕ್ಕೆ ಕೊಂಡೋಯ್ದು ಸಂಘರ್ಷ, ವಿರಹ, ವಿರಸಗಳ ಅವರೋಹಣದ ಪಾತಾಳ ತೋರಿಸುತ್ತಾ ದಾಂಪತ್ಯ ಗೀತೆಯ ಕೇಳಿಸುತ್ತಾ, ಭ್ರಮೆ, ಒಡೆದ ಹಾಲು, ಮುರಿದು ಬಿದ್ದ ಸ್ನೇಹ, ಕಣ್ಣೀರುಗಳ ಅಪಶ್ರುತಿಯನ್ನೂ ಕೇಳಿಸಿ ಬದುಕೆಂಬ ಸಂಗೀತ ಯಾನದಲ್ಲಿನ ಏರಿತಗಳನ್ನು ಕವನಗಳ ಮೂಲಕ ಕಟ್ಟಿಕೊಡುವಲ್ಲಿ ಕವಿಯಿತ್ರಿ ತಮ್ಮ ಜಾಣ್ಮೆ ಮೆರೆದಿದ್ದಾರೆ. ಇದರಲ್ಲಿ ನನಗೆ ತುಂಬಾ ಇಷ್ಟವಾದ ಕವನ "ಅದೇ ಹಳೆಯ ದಾರಿ". ಏಕತಾನತೆಯಿಂದ, ಮಾಡುವ ಕೆಲಸ, ದಿನ ನಿತ್ಯ ಸಾಗುವ ಹಾದಿ, ಮನೆ, ಕಛೇರಿ ಇವೆಲ್ಲ ಬೇಸರ ಮೂಡಿಸುವಂತಾಗಿದ್ದು, ಒಂದು ಸಂತಸದ ಸಂಗತಿಯಿಂದ ಅವೆಲ್ಲವೂ ಹೊಸದಾಗಿ ಕಾಣುತ್ತವೆ. ಯಾಕೆ ಹೀಗೇ? ಪರಿಸ್ಥಿತಿಯಿಂದ ಯಾವುದೇ ಪರಿಣಾಮವಾಗುವುದಿಲ್ಲ. ಆ ಪರಿಸ್ಥಿತಿಯನ್ನು ನೋಡುವ ಮನದಿಂದ ಮಾತ್ರ ಪರಿಣಾಮಗಳು ಎಂಬುದನ್ನು ಸೊಗಸಾಗಿ ಚಿತ್ರಿಸಿದ್ದಾರೆ ಎಂದಿದ್ದಾರೆ.

About the Author

ಸುಜಾತಾ ಎನ್
(18 April 1966)

ಮೈಸೂರಿನವರಾದ ಲೇಖಕಿ ಸುಜಾತಾ ಎನ್ ಅವರು ಸುಜಾತಾ ರವೀಶ್ ಎಂಬ ಕಾವ್ಯನಾಮವನ್ನು ಹೊಂದಿದ್ದಾರೆ. 18-04-1966ರಂದು ದಿ. ಎನ್ ನರಹರಿರಾವ್ ಹಾಗೂ ತಾಯಿ ದಿ. ಶಕುಂತಲಾ ಎನ್ ರಾವ್ ಮಗಳಾಗಿ ಜನಿಸಿದರು. ಎಂ ಕಾಂ ಪದವೀಧರೆಯಾಗಿದ್ದು, ಭಾರತೀಯ ಜೀವ ವಿಮಾ ನಿಗಮದಲ್ಲಿ ಉನ್ನತ ದರ್ಜೆ ಸಹಾಯಕಿಯಾಗಿದ್ದಾರೆ. ಹಲವಾರು ಬ್ಲಾಗ್ ಗಳಲ್ಲಿ ಅಂಕಣದ ಬರಹಗಳು ಕವನಗಳು ಗಜಲ್ ಗಳು ಪ್ರಕಟವಾಗಿವೆ . ಹಾಲಿ ಭಾವಸಂಗಮ ಟೆಲಿಗ್ರಾಂ ಬಳಗ ಹಾಗೂ ಶ್ರಾವಣ ಬ್ಲಾಗ್ಗಳಲ್ಲಿ ಅಂಕಣ ಬರೆಯುತ್ತಿದ್ದೇನೆ.ನಸುಕು, ಅವ್ವ ಪುಸ್ತಕಾಲಯ, ಸಂಗಾತಿ, ಸುರಹೊನ್ನೆ, ಶ್ರಾವಣ ಈ ಬ್ಲಾಗ್ ಗಳಲ್ಲಿ ಹಾಗೂ ಪ್ರತಿಲಿಪಿ ಮಾಮ್ಸ್ ...

READ MORE

Related Books