ವರ್ತಮಾನದ ಮುಖಗಳು

Author : ನಾ. ಮೊಗಸಾಲೆ

Pages 53

₹ 4.00
Year of Publication: 1974
Published by: ಸುಮನಸಾ ವಿಚಾರ ವೇದಿಕೆ,
Address: ಚೊಕ್ಕಾಡಿ

Synopsys

ಸಾಹಿತಿ, ಕವಿ ನಾ ಮೊಗಸಾಲೆ ಅವರು 1974ರಲ್ಲಿ ಪ್ರಕಟಿಸಿದ ಕವನ ಸಂಕಲನ ‘ವರ್ತಮಾನದ ಮುಖಗಳು’. ಈ ಕೃತಿಯ ಪರಿವಿಡಿಯಲ್ಲಿ ಅನ್ವೇಷಣೆ, ಅಸುಖಿ, ನೆನಪು ಮಾಡಿಕೋ ಮಿತ್ರ, ವರ್ತಮಾನದ ಮುಖಗಳು, ಆರ್ಕಿಡ್, ನೆನಪು ಹೇಗಿರುತ್ತದೆ ಅಂದರೆ…, ಶ್ಯಾಮಲಾ, ಕೀ, ಜಿರಳೆಗಳು, ಅಸಂಗತ, ಸೀತಾಪುರದ ವರ್ತಮಾನ, ಹೊಂಗೆ, ಕುಪ್ಪಣ್ಣ, ಸಾಮ್ಯ ಮತ್ತು ಅಂತರ, (ಆಧುನಿಕ) ವಾಲ್ಮೀಕಿ, ನಿರುದ್ಯೋಗಿ ಯುವರಾಜನ ಒಡ್ಡೋಲಗ, ನಿರಾಕರಣೆ, ಅಮ್ಮ: ಒಂದು ಅನುಭವ, ನೀವೇ ಹೇಳಿ, ಮದುವೆ ಎನ್ನುವ 20 ಕವನಗಳಿವೆ. ಈ ಸಂಕಲನದಲ್ಲಿ ಇದ್ದ ‘ದಾಸೋಹ ತತ್ವ ಎನ್ನುವ ಕವನದ ಹೆಸರನ್ನು ‘ಮದುವೆ ಎನ್ನುವ’ ಎಂದು ಹೆಸರು ಬದಲಾಯಿಸಲಾಗಿದೆ.

About the Author

ನಾ. ಮೊಗಸಾಲೆ
(27 August 1944)

ಕಾಸರಗೋಡು ತಾಲೂಕಿನ ಕೋಳ್ಯೂರಿನ ಮೊಗಸಾಲೆ ಎಂಬ ಗ್ರಾಮದಲ್ಲಿ ಜನಿಸಿದ ಡಾ. ನಾರಾಯಣ ಮೊಗಸಾಲೆ ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆಗೆ ಕಥೆ ಕಾದಂಬರಿಗಳನ್ನು ರಚಿಸಿರುವ ಅವರು ಸಾಹಿತ್ಯ ಸೃಷ್ಟಿಯ ಜೊತೆಗೆ ಸಾಹಿತ್ಯ ಪ್ರಸಾರದಲ್ಲಿಯೂ ವಿಶೇಷ ಕೆಲಸ ಮಾಡಿದ್ದಾರೆ. ಕಾಂತಾವರ  ಎಂಬ ಪುಟ್ಟಗ್ರಾಮದಲ್ಲಿ ಕನ್ನಡ ಸಂಘ ಕಟ್ಟಿ ನಿರಂತರ ಸಾಹಿತ್ಯಕ ಚಟುವಟಿಕೆ ನಡೆಸುತ್ತಿದ್ದಾರೆ. ವರ್ತಮಾನದ ಮುಖಗಳು, ಪಲ್ಲವಿ, ಮೊಗಸಾಲೆಯ ನೆನಪುಗಳು, ಪ್ರಭವ, ಸ್ವಂತಕ್ಕೆ ಸ್ವಂತಾವತಾರ, ನೆಲದ ನೆರಳು, ಇದಲ್ಲ, ಇದಲ್ಲ, ಇಹಪರದ ಕೊಳ, ಕಾಮನ ಬೆಡಗು, ದೇವರು ಮತ್ತೆ ಮತ್ತೆ (ಕವನ ಸಂಕಲನಗಳು), ಅರುವತ್ತರ ತೇರು, ಪೂರ್ವೋತ್ತರ, ಕರಣ ಕಾರಣ (ಸಮಗ್ರ ಕಾವ್ಯ), ಮಣ್ಣಿನ ...

READ MORE

Related Books