ಶಿಲಾಲತೆ

Author : ಕೆ.ಎಸ್. ನರಸಿಂಹಸ್ವಾಮಿ

₹ 25.00




Year of Publication: 2006
Published by: ಕನ್ನಡ ಮತ್ತು ಸಂಸ್ಕೃತಿ ಇಲಾಖೆ

Synopsys

"ಮೈಸೂರು ಮಲ್ಲಿಗೆ"ಯಂತ ಸುಂದರ ಕವನ ಸಂಕಲದಿಂದ ಕನ್ನಡಿಗರ ಮನೆ ಮನಗಳನ್ನು ತಟ್ಟಿರುವ ಕೆ.ಎಸ್. ನರಸಿಂಹಸ್ವಾಮಿ ಅವರ ಮತ್ತೊಂದು ಕವನ ಸಂಕಲನ " ಶಿಲಾಲತೆ". ಕರ್ನಾಟಕ ಏಕೀಕರಣದ 50ನೆಯ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸುವರ್ಣ ಸಾಹಿತ್ಯ ಗ್ರಂಥಮಾಲೆ ಅಡಿಯಲ್ಲಿ ಪ್ರಕಟವಾದ ಪುಸ್ತಕ ಇದು. ಪ್ರೇಮ ಕವಿ ಎಂದೇ ಹೆಸರಾದ ಕೆ. ಎಸ್. ನರಸಿಂಹ ಸ್ವಾಮಿ ಅವರ ಬೇರೆಯದೇ ರೀತಿಯ ಕವನಗಳನ್ನು ಇಲ್ಲಿ ಕಾಣಬಹುದು. ಒಟ್ಟು 37 ಕವಿತೆಗಳು ಇರುವ ಈ ಪುಸ್ತಕದ ಕೆಲವು ಕವಿತೆಗಳು ಅಲ್ ಇಂಡಿಯಾ ರೇಡಿಯೋ ದಲ್ಲಿ ಪ್ರಸಾರವಾದರೆ, ಮತ್ತೆ ಕೆಲವು " ಕನ್ನಡ ನುಡಿ" " ಪ್ರಜಾವಾಣಿಯಲ್ಲಿ" ಪ್ರಕಟವಾಗಿವೆ. ಇಲ್ಲಿರುವ ಒಂದೆರಡು ಕವನಗಳ ಹೊರತಾಗಿ ಹೆಚ್ಚಿನ ಕವನಗಳು ಹೆಚ್ಚಾಗಿ ಜನರನ್ನು ತಲುಪಿಲ್ಲ . ಅಪ್ರೋದಿತೆಯಲ್ಲಿ ಮದುವೆಯಲ್ಲಿ ಗಂಡು ಹೆಣ್ಣಿನ ನಡುವೆ ಒಲವು ಮೂಡಿಸುವ ಸಲುವಾಗಿ ಹಿಂದಿನಿಂದ ನಡೆಸಿಕೊಂಡು ಬಂದಿರುವ ನೀರಿನ ಪಾತ್ರೆಯಲ್ಲಿ ಉಂಗುರ ಹುಡುಕಿಸುವ, ಅರುಂಧತಿ ನಕ್ಷತ್ರ ತೋರಿಸುವ ನೆಪದಲ್ಲಿ ಇಬ್ಬರನ್ನೂ ಮತ್ತಷ್ಟು ಹತ್ತಿರಕ್ಕೆ ಸೆಳೆಯುವ ಬಗ್ಗೆ ಹೇಳಿದ್ದಾರೆ. ನಲವತ್ತರ ಚೆಲುವೆ ಒಂದು ರೀತಿಯ ಮೃದುವಾದ ವಿಡಂಬನ ಕಾವ್ಯ ಎನಿಸುತ್ತದೆ. ಮನೆಯಲ್ಲಿನ ಗಂಡನಿಗೆ ವಯಸ್ಸಾಗಿ ಜೀವನೋತ್ಸಾಹ ಕುಗ್ಗುತ್ತಾ ಬಂದಿದೆ. ಅವನಿಗೆ ಮಡದಿಯ ಅವಶ್ಯಕತೆ ಕಡಿಮೆಯೇ. ಆದರೆ ಆಕೆಗೆ ಹೊಸ ಸೀರೆ, ಸಿನಿಮಾ ನಟಿಯರ ಸಿಂಗಾರ ಎಲ್ಲ ಬೇಕು. ಸೆರಗು ಹಾರಿಸುತ್ತ ಬಸ್ ಹತ್ತಿ ಕುಳಿತ ತನ್ನನ್ನೇ ಎಲ್ಲರೂ ನೋಡುತ್ತಿದ್ದಾರೆ, ನಾನಿನ್ನೂ ಹರೆಯದ ಹೆಣ್ಣಿನಂತೆ ಕಾಣುತ್ತಿದ್ದೇನೆ ಎನ್ನುವ ಭ್ರಮೆಯಲ್ಲಿ ಮುಳುಗಿದ ನಡು ಪ್ರಾಯದ ಹೆಣ್ಣಿನ ವರ್ಣನೆ ಮಾಡಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಮಾತ್ರ ಕನ್ನಡ ಮಾಧ್ಯಮ ಆದರೆ ಸಾಲದು, ಕಾವ್ಯಗಳಲ್ಲಿಯೂ ಸಂಸ್ಕೃತದ ಬದಲು ಕನ್ನಡ ಬಳಕೆಯಾಗಲಿ ಎನ್ನುವ ಆಶಯವಿದೆ. ಹಿಂದಿನ ಸಾಲಿನ ಹುಡುಗರು ಕವನದಲ್ಲಿ ಒಂದೇ ತರಗತಿಯಲ್ಲಿ ಫೇಲ್ ಆಗಿ ಮುಂದೆ ಹೋಗುವವರಿಗೆ ತಮ್ಮಂದಿರು, ಬರುವವರಿಗೆ ಅಣ್ಣಂದಿರು ಆಗಿರುವ ವಿದ್ಯಾರ್ಥಿ ಗಳ ಕಥೆಯನ್ನು ನವಿರಾದ ವ್ಯಂಗ್ಯದ ಮೂಲಕ ಚಿತ್ರಿಸಿದ್ದಾರೆ. ಮತ್ತೊಂದು ಇಕ್ಕಳದಲ್ಲಿ ಮನುಷ್ಯನ ಸ್ವಭಾವ ವನ್ನ ತೆರೆದಿಟ್ಟಿದ್ದಾರೆ. ಯಾವುದನ್ನೂ ಇದ್ದಂತೆ ಒಪ್ಪಿಕೊಳ್ಳದ ಇಲ್ಲದ್ದನ್ನೆ ಬಯಸುವ ಮನುಜನ ಮನದ ವೈರುಧ್ಯಗಳ ಅನಾವರಣ ಇಲ್ಲಿದೆ.

About the Author

ಕೆ.ಎಸ್. ನರಸಿಂಹಸ್ವಾಮಿ
(26 January 1915 - 28 December 2003)

ಮೈಸೂರ ಮಲ್ಲಿಗೆಯ ಕವಿಯೆಂದು ಪ್ರಖ್ಯಾತರಾಗಿ ಮನೆಮಾತಾದ ಕೆ.ಎಸ್. ನರಸಿಂಹಸ್ವಾಮಿ ಅವರು (ಕಿಕ್ಕೇರಿ ಸುಬ್ಬರಾಯ ನರಸಿಂಹಸ್ವಾಮಿ) ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ 1915ರ ಜನೆವರಿ 26ರಂದು ಜನಿಸಿದರು. ತಂದೆ ಸುಬ್ಬರಾಯ, ತಾಯಿ ನಾಗಮ್ಮ. ಮೈಸೂರಿನ ಮಹಾರಾಜ ಹೈಸ್ಕೂಲು, ಇಂಟರ್ ಮೀಡಿಯೇಟ್ ಕಾಲೇಜ್ ಮತ್ತು ಬೆಂಗಳೂರಿನ ಸೆಂಟ್ರಲ್ ಕಾಲೇಜುಗಳಲ್ಲಿ ಓದಿದ ಅವರು ಆರ್ಥಿಕ ತೊಂದರೆಗಳಿಂದ ಡಿಗ್ರಿ ವ್ಯಾಸಂಗವನ್ನು ಪೂರ್ಣ ಮಾಡಲಾಗಲಿಲ್ಲ. 22ನೇ ವಯಸ್ಸಿನಲ್ಲಿ ಗುಮಾಸ್ತೆ ಹುದ್ದೆಗೆ ಸೇರಿದ್ದರು. ಆ ವೇಳೆಗೆ ತಿಪಟೂರಿನ ವೆಂಕಮ್ಮನವರೊಂದಿಗೆ ವಿವಾಹವಾಗಿತ್ತು. ತಮ್ಮ ವೃತ್ತಿಜೀವನದ ಕಾಲದಲ್ಲಿ ಮೈಸೂರು, ನಂಜನಗೂಡು, ಬೆಂಗಳೂರುಗಳಲ್ಲಿ ಬೇರೆ ಬೇರೆ ಇಲಾಖೆಗಳಲ್ಲಿ ಸರಕಾರಿ ನೌಕರರಾಗಿ ದುಡಿದು ...

READ MORE

Related Books