ನೆಲದ ನೋವು

Author : ಸಿದ್ದಣ್ಣ ಪೂಜಾರಿ ಯಕ್ಷಿಂತಿ

Pages 128

₹ 150.00




Year of Publication: 2023
Published by: ಚಿಲಿಪಿಲಿ ಪ್ರಕಾಶನ
Address: ಸುಭಾಷ ರೋಡ್, ಧಾರವಾಡ

Synopsys

‘ನೆಲದ ನೋವು’ ಕವಿ ಸಿದ್ದಣ್ಣ ಪೂಜಾರಿ ಯಕ್ಷಿಂತಿ ಅವರ ಕವನ ಸಂಕಲನ. ಈ ಕೃತಿಗೆ ತಬಲಾ ಉಪನ್ಯಾಸಕರಾದ ಡಾ.ಎ.ಎಲ್. ದೇಸಾಯಿ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ

‘ಅಹಂಕಾರವು ಎನ್ನ ಚಿತ್ತವನೇ ಕೆಡಿಸಿತ್ತು
ಅಹಂಕಾರವು ಎನ್ನ ಬುದ್ಧಿಯನೇ ಕೆಡಿಸಿತ್ತು
ಇದು ಕಾರಣ ಅಹಂಭಾವದಲ್ಲಿ ಲಿಂಗವನೇ ಸ್ಥಾಪಿಸಿ
ಸೋಹಂ ಭಾವದ ಸ್ಥಾನದಲ್ಲಿ ದಾಸೋಹಂ ಭಾವವ
ಗುರುವು ನೆಲೆಗೊಳಿಸಿದನೆಂದು ಬೋಧಿಸಿದನಯ್ಯಾ
ಗುರುಕುಮಾರ ಪಂಚಾಕ್ಷರೇಶ್ವರ’

ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳು ರಚಿಸಿದ ಶ್ರೀಗುರು ವಚನಪ್ರಭದ 545 ನೇ ವಚನದಲ್ಲಿ ವ್ಯಕ್ತಪಡಿಸಿದ ಅಹಂಕಾರ ಭಾವನೆಯು ನಮ್ಮ ಬುದ್ಧಿಯನ್ನು ಕೆಡಿಸುತ್ತದೆ ಎಂಬ ನುಡಿಯಂತೆ ಗೆಳೆಯ ಸಿದ್ದಣ್ಣ ಪೂಜಾರಿ ಅವರ “ನೆಲದ ನೋವು* ಕೃತಿಯಲ್ಲಿ ಬಹುತೇಕ ಕವನಗಳು ನಮ್ಮ ತನವನ್ನು ಬಿಡದೆ ಬೇರೆ ವಿಷಯಗಳಿಗೆ ಜಾಗವನ್ನು ನೀಡದೆ ಇದ್ದರೆ ಮನುಜ ಮಹಾತ್ಮನಾಗುತ್ತಾನೆ. ಆದ್ದರಿಂದ ಸೋಹಂ ಭಾವವ ಬಿಟ್ಟು ದಾಸೋಹಂ ಭಾವದ ದಾರಿಯನ್ನು ತೋರಿಸುವದೇ ಈ ಕೃತಿಯ ಕಾರ್ಯವಾಗಿದೆ ಎಂದಿದ್ದಾರೆ. ಹಾಗೇ 'ನೆಲದ ನೋವು' ಸಮಾಜದಲ್ಲಿ ನಡೆಯುವ ಅಹಿತಕರ ಘಟನೆಗಳನ್ನು ಎತ್ತಿ ತೋರಿಸುವುದಲ್ಲದೆ ಮಾನವರು ಮಾನವರಾಗದೇ ರಾಕ್ಷಸ ಗುಣಗಳನ್ನೊಳಗೊಂಡ ಮಾನವರು ಎಂಬ ಬಲವಾದ ಅಭಿಪ್ರಾಯ ಈ ಕೃತಿಯ ಮುಖ್ಯ ತತ್ವವಾಗಿದೆ. ಇದರೊಂದಿಗೆ ದೇಶ, ತಾಯಿ, ತಂದೆ, ಪರಿಸರ, ರಾಜಕೀಯ, ಪ್ರೀತಿ, ಪ್ರೇಮ, ಸಹೋದರತ್ವ, ಗೆಳೆತನ ಮುಂತಾದ ವಿಷಯಗಳ ಕುರಿತು ಮೂಡಿಬಂದಿದೆ.

ಸಿದ್ದು ಪೂಜಾರಿಯವರು ನಮ್ಮ ಊರು ಯಕ್ಷಿಂತಿಯವರು ಎಂಬುವದು ನನಗೆ ಹೆಮ್ಮೆಯ ಸಂಗತಿ, ಇವರು ಒಬ್ಬ ಹೋರಾಟಗಾರ, ಶಿಕ್ಷಕ, ಸಮಾಜ ಸುಧಾರಕ, ಉತ್ತಮ ವಾಗ್ಮಿ, ಹಿತಚಿಂತಕ, ಸ್ನೇಹಜೀವಿ ಗುಣಗಳಿರುವಂತ ಒಬ್ಬ ಪರಿಪೂರ್ಣ ವ್ಯಕ್ತಿ, ಸದಾ ಒಳಿತನ್ನೆ ಬಯಸುವಂತವರು ಯಾವುದೇ ಸ್ಥಳದಲ್ಲಿದ್ದರು ಕಂಡ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡುವ ಯುವಕ. ಹೀಗೆಯೇ ಸಮಾಜವನ್ನು ಸರಿದಾರಿಗೆ ತರುವದರೊಂದಿಗೆ ಇವರ ಸಾಹಿತ್ಯದ ಕೃಷಿ ನಿರಂತರವಾಗಿ ಸಾಗಲಿ ಮತ್ತು ನಮ್ಮ ನಾಡಿಗೆ ವಿವಿಧ ಪ್ರಕಾರದ ಉತ್ತಮ ಸಾಹಿತ್ಯ ಕೃತಿಗಳನ್ನು ನೀಡಲೆಂದು ಶುಭ ಹಾರೈಸಿದ್ದಾರೆ.

About the Author

ಸಿದ್ದಣ್ಣ ಪೂಜಾರಿ ಯಕ್ಷಿಂತಿ

ಸಿದ್ದಣ್ಣ ಪೂಜಾರಿ ಯಕ್ಷಿಂತಿ ಇವರು ಮೂಲತಃ ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಯಕ್ಷಿಂತಿ ಗ್ರಾಮದವರು,ಬಿಕಾಂ ಪದವೀಧರರಾಗಿದ್ದಾರೆ, ಕಾಲೇಜು ದಿನಗಳಿಂದಲೂ ಸಮಾಜದಲ್ಲಿ ನಡೆಯುವ ಅನ್ಯಾಯ ದೌರ್ಜನ್ಯಕ್ಕೆ ಒಳಗಾದವರು ದನಿಯಾಗಿದ್ದಾರೆ. ಅದರ ಪ್ರತಿಬಿಂಬವಾಗಿ ಬರವಣಿಗೆ ಇವರಿಗೆ ನೆಚ್ಚಿನ ವಿಷಯವಾಗಿದೆ ಈಗಾಗಲೇ ಇವರ ಚೊಚ್ಚಲ ಕೃತಿ ನೆಲದ ನೋವು ಪ್ರಕಟಣೆಗೆ ಸಿದ್ಧವಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕೃತಿ: ನೆಲದ ನೋವು   ...

READ MORE

Related Books