ಭಾವಾಮೃತ

Author : ಸಂಗೀತಾ ಮಠಪತಿ

Pages 112

₹ 100.00
Year of Publication: 2022
Published by: ಗಾಯತ್ರಿ ಎಂಟರಪ್ರೈಸಸ್

Synopsys

ಕವಯಿತ್ರಿ ಸಂಗೀತಾ ಮಠಪತಿಯವರು ಕವನ ಸಂಕಲನ ಭಾವಾಮೃತ. ತಮ್ಮ ಜೀವನದಲ್ಲಿ ಅನುಭವಿಸಿದ ವಿವಿಧ, ವಿಭಿನ್ನ ಭಾವಗಳಿಗೆ ಜೀವ ತುಂಬಿ, ಜೀವಗಳಿಗೆ ಭಾವದ ಅಮೃತ ಉಣಬಡಿಸುವ ಸದಾಶಯದೊಂದಿಗೆ ಹಲವಾರು ಕವನಗಳನ್ನು ರಚಿಸಿದ್ದಾರೆ. ಒಂದು ಭಾವಕ್ಕೆ ಮತ್ತೊಂದು ಭಾವ, ಒಂದು ಜೀವಕ್ಕೆ ಮತ್ತೊಂದು ಜೀವ ಎನ್ನುವಂತೆ, ನವನವೀನ ಕವನಗಳ ಗುಚ್ಛವೇ ಭಾವಾಮೃತವಾಗಿದೆ. 

About the Author

ಸಂಗೀತಾ ಮಠಪತಿ
(03 July 1998)

ಸಂಗೀತಾ ಮಠಪತಿಯವರು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಚಿಕ್ಕಾಲಗುಂಡಿ ಗ್ರಾಮದವರು. ತಂದೆ ಹಣಮಂತ, ತಾಯಿ ಗುರುಬಾಯಿ. ಹುಟ್ಟೂರಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಣ ಪೂರೈಸಿ, ಮುಧೂಳ ತಾಲೂಕಿನ ಯಡಹಳ್ಳಿಯಲ್ಲಿ ಪಿಯುಸಿ, ಮುಧೋಳ ದಲ್ಲಿ ಬಿ.ಎಸ್ ಸಿ ಪದವಿ , ನಂತರ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಎಂ.ಎಸ್.ಸಿ (ಆಹಾರ ಸಂಸ್ಕರಣೆ ಮತ್ತು ಪೋಷಣೆ ವಿಭಾಗ)  ಸ್ನಾತಕೋತ್ತರ ಪದವಿ ಪಡೆದರು. ಸಂಗೀತಾ ಅವರು ಉತ್ತಮ ನಿರೂಪಕಿಯೂ ಹೌದು. ಸದ್ಯ ವಿಜಯಪುರದಲ್ಲಿ ವಾಸವಾಗಿದ್ದಾರೆ.  ಸಾಹಿತ್ಯ,ಸಂಗೀತ,ಕಲಾರಂಗ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ವಿಜಯಪುರ ಜಿಲ್ಲಾ ಘಟಕ ಮಹಿಳಾ ಕಾರ್ಯದರ್ಶಿಯಾಗಿದ್ದು, ಯೋಗ ತರಬೇತಿ ಹಾಗೂ ...

READ MORE

Related Books