ಕೌಬಾಯ್ಸ್ ಮತ್ತು ಕಾಮ ಪುರಾಣ

Author : ಪ್ರತಿಭಾ ನಂದಕುಮಾರ್

Pages 104

₹ 120.00

Buy Now


Year of Publication: 2020
Published by: ಅಂಕಿತ ಪುಸ್ತಕ
Address: 53, ಶಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 560004
Phone: 08026617100

Synopsys

‘ಕೌಬಾಯ್ಸ್ ಮತ್ತು ಕಾಮ ಪುರಾಣ’ ಲೇಖಕಿ ಪ್ರತಿಭಾ ನಂದಕುಮಾರ್ ಅವರ ಕವನ ಸಂಕಲನ. ‘ನಾವು ಹುಡುಗಿಯರೇ ಹೀಗೆ...’ ಎಂದು ಕನ್ನಡ ಕಾವ್ಯಲೋಕದಲ್ಲಿ ಹೊಸ ಬೆರಗು ಸೃಷ್ಟಿಸಿದ ಪ್ರತಿಭಾ ನಂದಕುಮಾರ್, ತಮ್ಮ ಕವಿತೆಗಳಲ್ಲಿ ಸದಾ ಹೊಸತನ್ನೇ ಅರಸುತ್ತಾರೆ.

‘ಕೌಬಾಯ್ಸ್ ಮತ್ತು ಕಾಮ ಪುರಾಣ’ ಕೂಡ ಪ್ರತಿಭಾ ಅವರ ಸೃಜನಶೀಲತೆಗೆ ಮತ್ತೊಂದು ಉದಾಹರಣೆ. ಸದಾ ವಿಭಿನ್ನತೆಯತ್ತ ಸಾಗುವ ಪ್ರತಿಭಾ ಅವರ ಕಾವ್ಯಗಳು ವಿಶಿಷ್ಟತೆಗಳಲ್ಲೇ ರೂಪು ಪಡೆಯುತ್ತವೆ. ಹೊಸ ಕಾಲಕ್ಕೆ ತಕ್ಕಂತೆ ಕಾವ್ಯವನ್ನು ನವೀನಗೊಳಿಸಿಕೊಳ್ಳುವ ಕವಿ ಪ್ರತಿಭಾ ಅವರ ಈ ಸಂಕಲನವೂ ಅವರ ಹಿಂದಿನ ಕವನ ಸಂಕಲನಗಳಂತೆ ಸಂಚಲನ ಸೃಷ್ಟಿಸುತ್ತದೆ.

About the Author

ಪ್ರತಿಭಾ ನಂದಕುಮಾರ್
(25 December 1955)

ಲೇಖಕಿ ಪ್ರತಿಭಾ ನಂದಕುಮಾರ್ ಅವರು ಮೂಲತಃ ಬೆಂಗಳೂರಿನವರು. 1955 ಡಿಸೆಂಬರ್ 25ರಂದು ಜನಿಸಿದರು. ತಂದೆ-ವಿ. ಎಸ್. ರಾಮಚಂದ್ರರಾವ್, ತಾಯಿ- ಯಮುನಾಬಾಯಿ. ಬಾಲ್ಯದ ಬಹುದಿನಗಳನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ಕಳೆದಿರುವ ಪ್ರತಿಭಾ, ಮದ್ರಾಸ್ ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಎಂ.ಫಿಲ್ ಪದವಿ ಪಡೆದಿದ್ದಾರೆ. ಎನ್.ಜಿ.ಎಫ್‌ನಲ್ಲಿ ಭಾಷಾಂತರಕಾರರಾಗಿ ನಂತರ ಇಂಡಿಯನ್ ಎಕ್ಸ್‌ಪ್ರೆಸ್, ಡೆಕ್ಕನ್ ಹೆರಾಲ್ಡ್ ಮತ್ತು ಅಗ್ನಿ ಪತ್ರಿಕೆಗಳಲ್ಲಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ಸಿನಿಮಾ ರಂಗದಲ್ಲಿಯೂ ಸಹಾಯಕ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಪತಿ ನಂದಕುಮಾರ್ ಹಾಗೂ ಮಕ್ಕಳು ಅಭಿರಾಮ್ ಮತ್ತು ಭಾಮಿನಿ ಜೊತೆ ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಪ್ರತಿಭಾ ನಂದಕುಮಾರ್ ಕಾವ್ಯಧರ್ಮವನ್ನೇ ...

READ MORE

Reviews

’ಕೌಬಯ್ಸ್ ಮತ್ತು ಕಾಮ ಪುರಾಣ’ ಕೃತಿಯ ವಿಮರ್ಶೆ

ದಣಿವರಿಯದಂತೆ ಕಾವ್ಯ ಬರೆಯುತ್ತಾ ಬಂದಿರುವ ಪ್ರತಿಭಾ ಅವರ ಹೊಸ ಸಂಕಲನ 'ಕೌಬಾಯ್ಸ್ ಮತ್ತು ಕಾಮಪುರಾಣ' ಎಂದಿನಂತೆ ಪ್ರತಿಭಾ ತಮ್ಮ ಕಾವ್ಯದ ಗತ್ತು ಮತ್ತು ಸತ್ಯಗಳನ್ನು ಬಿಟ್ಟುಕೊಡದೆ ಪದ್ಯಗಳನ್ನು ಬರೆದಿದ್ದಾರೆ. ಸಾಮಾನ್ಯವಾಗಿ ಪ್ರತಿಭಾ ಅವರ ಕಾವ್ಯದ ಧಾಟಿ ಮಾತಿನದು. ಅರ್ಥದ ಮಥನ ಎನ್ನುವುದು ಅವರಿಗೆ ಮಾತು ಮಾತು ಮಥಿಸಿ ಬರಬೇಕೆನ್ನುವುದು ಈ ಅರ್ಥದಲ್ಲಿ ಮಾತಿನ ಭಾವಗೀತ ಅವರದಲ್ಲ. ವಚನದ ಶೈಲಿಯಲ್ಲಿ ಅವರ ಕವಿತೆಗಳು ವಿಚಾರದ ಕಿಡಿ ಹೊಂದಿವೆ.

ಈ ಸಂಗ್ರಹದಲ್ಲಿ ಹೊಸ ಅವತಾರದಲ್ಲಿ ಬರುತ್ತಿರುವ ಫ್ಯಾಸಿಸಂ ಅನ್ನು ಕೇಂದ್ರೀಕರಿಸುವ ಕವಿತೆಗಳು ಬಹುಸಂಖ್ಯೆಯಲ್ಲಿ ಇವೆ. ಪ್ರತಿಭಾ ಅವರ ಈ ಹಿಂದಿನ ಕವಿತೆಗಳಲ್ಲಿದ್ದಂತೆಯೇ ವಿಧಿನಿಷೇಧಗಳು, ಸ್ವಾತಂತ್ರ್ಯವನ್ನು ಹತ್ತಿಕ್ಕುವ ಧೋರಣೆ, ಬಹುದನಿಗಳನ್ನು ಮುಚ್ಚಿಹಾಕುವ ಪ್ರಯತ್ನಗಳನ್ನು ಕಾವ್ಯ ಖಂಡಿಸಬೇಕು ಎಂಬ ನಿಲುವು ಇಲ್ಲಿ ಇನ್ನಷ್ಟು ಖಚಿತವಾಗಿದೆ. ಹಾಲು ಕೊಡುವ ಗೋವು, ತಿನ್ನುವ ಮಾಂಸ, ಹಾಕಿಕೊಳ್ಳುವ ಬಟ್ಟೆ ಇಂತಹ ಸಣ್ಣದಾದ ದಿನನಿತ್ಯದ ಸಂಗತಿಗಳೂ ರಾಜಕೀಯೀಕರಣಗೊಳ್ಳುವುದನ್ನು ಪ್ರತಿಭಾ ಅವರ ಕವಿತೆಗಳು ಎಳೆಎಳೆಯಾಗಿ ಬಿಚ್ಚಿಡುತ್ತವೆ. ಇಲ್ಲಿನ ಕವಿತೆಗಳಲ್ಲಿ ಹಿಟ್ಲರ್‌ನ ಪ್ರಸ್ತಾಪವಾಗುವುದು ಅನುಷಂಗಿಕವೇನೂ ಅಲ್ಲ. ಇಲ್ಲಿನ “ಡಿಟೆಂಷನ್ ಕ್ಯಾಂಪಿನಲ್ಲಿ ಹಿಟ್ಲರ ಮರಣ', 'ಹಿಟ್ಲರ್‌ನ ರಾತ್ರಿಗಳು', 'ಚಕ್ರವ್ಯೂಹ' ಮುಂತಾದ ಕವಿತೆಗಳಲ್ಲಿ ಹಿಟ್ಲರ್‌ನ ಧೋರಣೆಗಳನ್ನು ಸಮಕಾಲೀನಗೊಳಿಸಿಕೊಳ್ಳುತ್ತವೆ. ನೆಲೆಗೊಳ್ಳುತ್ತಿರುವ ಈ ಫ್ಯಾಸಿಸ್ಟ್ ಮನೋಭಾವವನ್ನೂ ನ್ಯಾಯಗಳನ್ನೇ ನಿಯಂತ್ರಿಸುತ್ತಾ ಸೆಕ್ಯುಲರ್ ತಮಿಷ್ಟದಂತೆ ಬಳಸುವ ಧೋರಣೆಯನ್ನೂ ಕವಿತೆ ಖಂಡಿಸಬೇಕು ಎನ್ನುವುದು ಪ್ರತಿಭಾ ಅವರ ನಿಲುವು, ಈ ಸಂಕಲನದ ಶೀರ್ಷಿಕೆಯ ಕವಿತೆಯಾದ 'ಕೌಬಾಯ್ಸ್ ಮತ್ತು ಕಾಮಪುರಾಣ'ವು ಮಾನಭಂಗವನ್ನು ತಮಗನುಕೂಲವಾಗುವಂತೆ ಸಮರ್ಥಿಸಿಕೊಳ್ಳುವುದನ್ನು ಛೇಡಿಸುತ್ತದೆ. ಆಧುನಿಕೋತ್ತರ ಸಮಾಜಗಳಲ್ಲಿ ಕಾಮವು ತನ್ನೆಲ್ಲ ಸತ್ವವನ್ನು ಕಳೆದುಕೊಂಡು ಹೀನವಾಗಿದೆ. ಮಠಾಧೀಶರೂ ರಾಜಕಾರಣಿಗಳೂ ಇಂಗ್ಲೆಂ ಕಾಮಪುರಾಣದಲ್ಲಿ ಸಕ್ರಿಯವಾಗಿದ್ದಾರೆ 'ಡಿಲೀಟ್ ಆಗುತ್ತದೆ ಶ್ರೀಗಳ ಆಶ್ರಮದ/ಹಿಂದಿನ ಕಾಂಡೋಂಗಳ ರಾಶಿರಾಶಿ'(ಕೌಬಾಯ್ಸ್ ಮತ್ತು ಕಾಮಪುರಾಣ) ಹಾಗು 'ಕಾಮಕ್ಕೂ ಸಖ್ಯ ದೇ ಇಲ್ಲಿ ಗುಪ್ತ ಕ್ಯಾಮೆರಾದ ವ್ಯಥೆ'(ಎದ್ದೇಳು ಮಂಜುನಾಥ) ಎಂಬ ಸಾಲುಗಳು ಇದನ್ನು ಮುಷ್ಟಿಕರಿಸುತ್ತವೆ.

ಅದಕ್ಕೆ ಹುಡುಕಿ ಭಾರತ ಅಂಬೇ ದೃಷ್ಟಿಯ ಮತ್ತು ಗ ಹೋಗು ಕೋಮು ನಂತರ ಗುರುತಿಸಿ ಈ ಸಂಕಲನದಲ್ಲಿ ಸತ್ಯೋತ್ತರ ಕಾಲಧರ್ಮವನ್ನು ಕೇಂದ್ರೀಕರಿಸಲಾಗಿದೆ. ಎಲ್ಲವೂ ಒಂದು ಕತೆಯಾಗುವುದನ್ನೂ, ಪ್ರತಿ ಕತೆಗೂ ಅದರದೇ ಆದ ಸಮರ್ಥನೆ ಇರುವುದನ್ನೂ ಪ್ರತಿಭಾರ ಕವಿತೆಗಳು ಸಣ್ಣದಾದ ವ್ಯಂಗ್ಯದ ಮೂಲಕ ಮಾತಿನಲ್ಲಿ ನಿವಾಳಿಸುವ ಮೂಲಕ ಎತ್ತಿ ತೋರುತ್ತವೆ. ಕವಿತೆಯ ಶೋಧ ನಿಜದ ನೆಲೆ ಎನ್ನುವುದಾದರೆ ಅದು ಈ ಹೊಸಗಾಲದ ಸತ್ಯಗಳನ್ನು ಅರಿಯುವುದಕ್ಕೂ ಸಿದ್ಧವಾಗಿರಬೇಕೆನ್ನುವುದು ಅವರ ನಿಲುವು. ಅದಕ್ಕೆ ಮುಖ್ಯ ಸ ತಕ್ಕಂತೆ ಇಲ್ಲಿನ ಕವಿತೆಗಳು ಸಮಕಾಲೀನ ಸಮಾಜ ಮತ್ತು ಅದರ ನಡವಳಿಕೆಗಳನ್ನು ಉದ್ದೇಶಿಸಿ ಬರೆಯಲ್ಪಟ್ಟಿವೆ.

ಈ ಕೃತಿ ಇರುವ ಕೊಟ್ಟ ಪ ಮೂಲಕ ಮಾಡಿದ ಜನಸಮ ಸೇರಿದಂತೆ ಕೆಲವರು ತಮ್ಮ ಬಳಿ ಹೀಗೆ ಸಮಕಾಲೀನ ಪುರಾಣವನ್ನು
 ಈ ಸಂಕಲನದಲ್ಲಿ ಸತ್ಯೋತ್ತರ ಕಾಲಧರ್ಮವನ್ನು ಕೇಂದ್ರೀಕರಿಸಲಾಗಿದೆ. ಎಲ್ಲವೂ ಒಂದು ಕತೆಯಾಗುವುದನ್ನೂ, ಪ್ರತಿ ಕತೆಗೂ ಅದರದೇ ಆದ ಸಮರ್ಥನೆ ಇರುವುದನ್ನೂ ಪ್ರತಿಭಾರ ಕವಿತೆಗಳು ಸಣ್ಣದಾದ ವ್ಯಂಗ್ಯದ ಮೂಲಕ ಮಾತಿನಲ್ಲಿ ನಿವಾಳಿಸುವ ಮೂಲಕ ಎತ್ತಿ ತೋರುತ್ತವೆ. ಕವಿತೆಯ ಶೋಧ ನಿಜದ ನೆಲೆ ಎನ್ನುವುದಾದರೆ ಅದು ಈ ಹೊಸಗಾಲದ ಸತ್ಯಗಳನ್ನು ಅರಿಯುವುದಕ್ಕೂ ಸಿದ್ಧವಾಗಿರಬೇಕೆನ್ನುವುದು ಅವರ ನಿಲುವು, ಅದಕ್ಕೆ ತಕ್ಕಂತೆ ಇಲ್ಲಿನ ಕವಿತೆಗಳು ಸಮಕಾಲೀನ ಸಮಾಜ ಮತ್ತು ಅದರ ನಡವಳಿಕೆಗಳನ್ನು ಉದ್ದೇಶಿಸಿ ಬರೆಯಲ್ಪಟ್ಟಿವೆ. ಹೀಗೆ ಸಮಕಾಲೀನ ಪುರಾಣವನ್ನು ಬರೆಯುವುದು ಹೇಗೆ? ಯಾವ ಪರಿಭಾಷೆಯಲ್ಲಿ ಮುಟ್ಟಿಸಬೇಕು? ಎನ್ನುವ ಪ್ರಶ್ನೆಗೆ ಇಲ್ಲಿ ಉತ್ತರವೆಂಬಂತೆ 'ದೇಶಭಕ್ತ ಸೂಳೆಮಕ್ಕಳ ಗದ್ಯಗೀತೆ ಅಂತ ಬರೆದಲ್ಲ ಸಾರ್ / ಈಗ ಬರೀರಿ ನೋಡೋಣ/ಟ್ರಾಲ್ ಯುಗದ ಜಗದ ಝನ್ಹಾ ಉಂಚಾ ರಹೇ ಹಮಾರಾ'('ಇಲ್ಲಿದ್ದ ಕಾಡೇನಾಯ್ತು?') ಎಂಬ ಸವಾಲಿದೆ. ಮಾತು ಮತ್ತು ಜೀವನ ಸೋತದ್ದನ್ನು ಕನ್ನಡ ಕಾವ್ಯದ/ ಜಾನಪದದ ಮಾತುಗಳನ್ನೇ ಇಲ್ಲಿ ಬಳಸಿ ಕವಿತೆಗಳನ್ನು ಕಟ್ಟಿರುವುದು ವಿಶೇಷ. 'ನಿಮ್ಮ ನಿಮ್ಮ ತನುವ ಸಂತೈಸಿಕೊಂಡು ನಿಮ್ಮ ನಿಮ್ಮ ಮನವ ನಿಯಂತ್ರಿಸಿಕೊಂಡು', 'ಕೇಶಪಾಠ ಪ್ರಪಂಚದ ಮಾತಲ್ಲ ಇದು 'ನಡುವೆ ಸುಳಿವಾತ್ಮಕ್ಕೆ ಲಿಂಗವಿಲ್ಲ', 'ಮುಂದೆ ಬಂದರೆ ಹಾಯಲಾರೆ/ಹಿಂದೆ ಬಂದರೆ ಒದೆಯಲಾರೆ ಎಂದು ನಾನು ಮಾತು ಕೊಟ್ಟಿಲ್ಲ', 'ಪರಿಣತಮತಿಗಳ್', 'ಎಲ್ಲ ಚಿತ್ತಾರವನ್ನು ಮಸಿ ನುಂಗಿದ ಆರೋಪ ಹೊತ್ತು/ನಗೀನವಿಲು ಕುಣಿಯುತ್ತಿತ್ತು ಆಡುತ್ತಿತ್ತು' ಹೀಗೆ ಸಾಲುಗಳು ವ್ಯಂಗ್ಯ ಮತ್ತು ವಿಷಾದಗಳನ್ನು ಹುಟ್ಟಿಸಬಲ್ಲವು.

 ಎಂದಿನಂತೆ ಆಧುನಿಕತೆಯ ಅನಾರೋಗ್ಯಕರ ಬೆಳವಣಿಗೆಯನ್ನು ಕಾವ್ಯದಲ್ಲಿ ಕಾಣುವ ಪ್ರತಿಭಾ ಈ ಸಂಕಲನದಲ್ಲಿ ಕೊಂಚ ಪ್ರತಿಕ್ರಿಯಾತ್ಮಕವಾಗಿದ್ದಾರೆ. ಗದ್ಯದ ಮೀಟಿನಿಂದ ಕಾವ್ಯ ಹುಟ್ಟಿಸುವ ಎಂದಿನ ಹದ ಇಲ್ಲಿಯೂ ಕೈ ಹಿಡಿದಿದೆ.

(ಕೃಪೆ: ಹೊಸಮನುಷ್ಯ ಬರಹ: ಆರ್.ತಾರಿಣಿ ಶುಭದಾಯಿನಿ)

Related Books