ಅವಳ ಕಾಲು ಸೋಲದಿರಲಿ

Author : ಫಾತಿಮಾ ರಲಿಯಾ

Pages 70

₹ 90.00




Year of Publication: 2024
Published by: ಉಡುಗೊರೆ ಪ್ರಕಾಶನ
Address: ಎನ್ ಎಸ್ ರೋಡ್, ಹೆಜಮಾಡಿ, ಕಾಪು ತಾಲೂಕು, ಉಡುಪಿ ಜಿಲ್ಲೆ -574103

Synopsys

‘ಅವಳ ಕಾಲು ಸೋಲದಿರಲಿ’ ಫಾತಿಮಾ ರಲಿಯಾ ಅವರ ಕವಿತೆಗಳ ಸಂಕಲನ. ಈ ಕೃತಿಗೆ ಲೇಖಕಿ, ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ `ನೀವು ಬೇರುಬಿಟ್ಟ ನೆಲ, ಬದುಕುತ್ತಿರುವ ಬದುಕು ಯಾವುದೂ ನಿಮ್ಮದಲ್ಲ’ ಎನ್ನುತ್ತಿರುವ ಬಹುಸಂಖ್ಯಾತರ ದನಿಗಳು ತೀವ್ರವಾಗುತ್ತಿರುವ ಹೊತ್ತಿನಲ್ಲಿ ಈ ನೆಲ-ಜನ-ಮನದೊಂದಿಗೆ ಬೆರೆತು ಅಸ್ತಿತ್ವ ರೂಪಿಸಿಕೊಂಡ ಕವಿಗೆ `ನನ್ನೂರಿಗೆ ಮನುಷ್ಯರನ್ನು ಹುಟ್ಟಿಸಿ ಕಳಿಸು’ ಎಂದು ಬೇಡುವುದಲ್ಲದೇ ಬೇರೆ ಮಾರ್ಗವಿದೆಯೇ? `ಇಲ್ಲಿ ತುರುಸಿನ ಸ್ಪರ್ಧೆಯಿರುವುದು/ಬಡ ಅಮ್ಮಂದಿರ ಮಡಿಲು/ ಬರಿದುಗೊಳಿಸುವುದರಲ್ಲಿ ಮಾತ್ರ/'ಎಂದು ಅರ್ಥ ಮಾಡಿಕೊಂಡ ನಂತರ ಈ ಕವಿಗೆ ನವಿರು ರೇಷಿಮೆ ಭಾವಗಳನ್ನು ತನ್ನ ಕವಿತೆಯ ಸಾಲುಗಳಲ್ಲಿ ತರಲು ಶತ ಪ್ರಯತ್ನ ಮಾಡಿದರೂ ಸಾಧ್ಯವೇ? ಮನುಷ್ಯತ್ವದ ಬೇರುಗಳು ಅಲುಗಾಡುತ್ತಿರುವ ಸಮಾಜದಲ್ಲಿ ನೋಯುವವರು-ಬೇಯುವವರು, ಅವಮಾನ, ಸಂಕಷ್ಟ ಎದುರಿಸುವವರು ಇಲ್ಲಿನ ಸೂಕ್ಷ್ಮ ಸಂವೇದನೆಯ ಜೀವಗಳು. ಫಾತಿಮಾ ಕವಿತೆಗಳನ್ನು ಕಟ್ಟಿರುವುದು ಈ ಸಂವೇದನೆಯಿಂದಲೇ. ಆದ್ದರಿಂದಲೇ ಇಲ್ಲಿನ ನವಿರು ರೇಷಿಮೆ ಭಾವ ಆಳಕ್ಕಿಳಿಯುತ್ತಾ ಇರಿಯ ತೊಡಗುತ್ತವೆ. ಈ ಇರಿತ ಎಷ್ಟು ತೀವ್ರವಾಗಿದೆ ಎಂದರೆ ಮತ್ತೆ ಮತ್ತೆ ಈ ರೀತಿಯ ಇರಿತಕ್ಕೊಳಗಾದ ಕವಿ ಮನುಷ್ಯತ್ವದ ಇಬ್ಬನಿಯನ್ನು ಎಲ್ಲರ ಮನದಲ್ಲೂ ಅರಳಿಸಲು ತನ್ನ ಸಾಲುಗಳನ್ನೇ ಹತಾರವಾಗಿ ಮಾಡಿಕೊಳ್ಳುವಷ್ಟು... `ಚಂಡಿ ಚಾಮುಂಡಿ ಭದ್ರಕಾಳಿ/ ಫಾತಿಮಾ ಖತೀಜಾ ಆಯಿಶಾ/ ಬೆತ್ಲಹೆಮ್ಮಿನ ಮೇರಿ/ಅಷ್ಟೇಕೆ/ ನನ್ನೂರಿನ ಅಬ್ಬಕ್ಕ/ಪಕ್ಕದ ಚನ್ನಮ್ಮ ದೂರದ /ರಝಿಯಾ, ಲಕ್ಷ್ಮಿಯರು ಬೆನ್ನ ಹಿಂದಿಂದ /ತಿವಿಯುತ್ತಿರುವಂತ ದಟ್ಟ ಅನುಭವ/' ಇವರೆಲ್ಲರನ್ನು ಬೆನ್ನಿಗಿಟ್ಟುಕೊಂಡು ಆ ಬಲದ ಮೇಲೆ ತನ್ನ ಸೃಜನಾತ್ಮಕವಾದ ಹೋರಾಟ ಕಟ್ಟುತ್ತಿರುವ ಫಾತಿಮಾಳ ಆಗ್ರಹ `ಅವಳ ಕಾಲು ಸೋಲದಿರಲಿ’ ಎಂದೆಂದಿಗೂ... ಎಂದು ಹಾರೈಸಿದ್ದಾರೆ.

About the Author

ಫಾತಿಮಾ ರಲಿಯಾ

ದಕ್ಷಿಣ ಕನ್ನಡ ಜಿಲ್ಲೆಯ ಪುಟ್ಟ ಹಳ್ಳಿಯಾಗಿರುವ ಪೆರ್ನೆಯ ಅಬ್ದುಲ್ ರಶೀದ್ ಮತ್ತು ಆಯಿಶಾ ದಂಪತಿಯ ಮಗಳು. ಕಲ್ಲಡ್ಕ, ಪೆರ್ನೆ, ಉಪ್ಪಿನಂಗಡಿ, ಪುತ್ತೂರು ಗಳಲ್ಲಿ ವಿದ್ಯಾಭ್ಯಾಸ. ಇನ್ಫಾರ್ಮೇಶನ್ ಟೆಕ್ನಾಲಜಿಯಲ್ಲಿ ಎಂಬಿಎ ಪದವೀಧರೆ. ಗೃಹಿಣಿ. 2020ರಲ್ಲಿ ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, 2021ರಲ್ಲಿ ಮೊಗವೀರ ಸಾಹಿತ್ಯ ಪ್ರಶಸ್ತಿ, 2022ರಲ್ಲಿ ಸಮಾಜಮುಖಿ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮತ್ತು ಅಪ್ರಕಟಿತ ಕವನ ಸಂಕಲನಕ್ಕಾಗಿ ವಿದ್ಯಾಧರ ಪ್ರತಿಷ್ಠಾನ ಕೊಡಮಾಡುವ ದ‌‌.ರಾ. ಬೇಂದ್ರೆ ಸಾಹಿತ್ಯ ಪ್ರಶಸ್ತಿ ದೊರಕಿದೆ. ಇವರ 'ಕಡಲು ನೋಡಲು ಹೋದವಳು' ಕೃತಿಗೆ ಲಂಕೇಶ್ ಪ್ರಶಸ್ತಿ ಮತ್ತು ಅವ್ವ ಪ್ರಶಸ್ತಿ 2023ರಲ್ಲಿ ದೊರಕಿದೆ. 2023ರಲ್ಲಿ ...

READ MORE

Related Books