ಮುಗಿಲ ಮಲ್ಲಿಗೆ

Author : ವಿಜಯಶ್ರೀ ಸಬರದ

Pages 75

₹ 60.00
Year of Publication: 2010
Published by: ಪಲ್ಲವಿ ಪ್ರಕಾಶನ
Address: ವಿಶ್ವವಿದ್ಯಾಲಯ ಅಂಚೆ, ಗುಲಬರ್ಗಾ- 585106

Synopsys

ಡಾ. ವಿಜಯಶ್ರೀ ಸಬರದ ಅವರ ಕವನ ಸಂಕಲನ ‘ಮುಗಿಲ ಮಲ್ಲಿಗೆ’. ಈ ಕೃತಿಗೆ ಕವಿ ಡಾ.ಎಚ್.ಎಲ್. ಪುಷ್ಪ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ಡಾ. ವಿಜಯಶ್ರೀ ಸಬರದ ಬಂಡಾಯ ಸಾಹಿತ್ಯ ಸಂದರ್ಭದಲ್ಲಿನ ಬಹುಮುಖ್ಯ ಕವಯತ್ರಿ, ಸಮಾಜಮುಖಿಯಾದ ಇವರ ಕಾವ್ಯ ದೀನ-ದಲಿತರ ಹೆಣ್ಣು ಮಕ್ಕಳ ಮೇಲಿನ ಬಹುಕಾಲದ ಆಕ್ರಮಣವನ್ನು ಪ್ರತಿಭಟಿಸುತ್ತದೆ. ಇವರ ಜ್ವಲಂತ ಹಾಗೂ ಲಕ್ಷ್ಮಣರೇಖೆ ದಾಟಿದವರು ಕವನ ಸಂಕಲನಗಳು ವಿಮರ್ಶಕರ ಗಮನ ಸೆಳೆದಿವೆ. ಮೂರು ದಶಕಗಳ ಇವರ ಕಾವ್ಯ ಕೃಷಿ ನೆಲದ ಮರೆಯ ನಿಧಾನದಂತೆ ತತ್ವಶಾಲಿಯಾಗಿದೆ. ಈ ಕವನ ಸಂಕಲನದ ಕವಿತೆ ಸೀರೆ ಮಹಿಳೆಯ ವ್ಯಕ್ತಿತ್ವದಲ್ಲಿ ಬೆರೆತು ಹೋದ ವಿವರಗಳಲ್ಲಿ ಒಂದಾಗಿದ್ದು, ಅದರ ಚರಿತ್ರೆಯನ್ನು ತಾಯಿಯ ವಿಷಾದ, ಮಗಳ ಸಂಭ್ರಮಗಳೊಂದಿಗೆ ಮನೋಜ್ಞವಾಗಿ ಚಿತ್ರಿಸುತ್ತದೆ. ಇಂತಹ ಹಲವಂದದ ಸಂಭ್ರಮ ಮತ್ತು ವಿಷಾದದ ನಡುವಿನ ಚರಿತ್ರೆಯನ್ನು ಮುಗಿಲ ಮಲ್ಲಿಗೆಯ ಕವಿತೆಗಳು ಗುರುತಿಸಿರುವುದು ಗಮನಾರ್ಹವಾದ ಸಂಗತಿಯಾಗಿದೆ ಎಂದಿದ್ದಾರೆ ಡಾ.ಎಚ್.ಎಲ್. ಪುಷ್ಪ.

About the Author

ವಿಜಯಶ್ರೀ ಸಬರದ
(01 February 1957)

ಮಹಿಳೆಯರ ಶೋಷಣೆ ಮತ್ತು ಸ್ತ್ರೀಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ತಮ್ಮ ಖಚಿತ ಅಭಿಪ್ರಾಯ ಮಂಡಿಸುವ ಲೇಖಕಿ ವಿಜಯಶ್ರೀ ಸಬರದ. ಅವರು ಜನಿಸಿದ್ದು 1957ರ ಫೆಬ್ರುವಿರ 1ರಂದು. ತಂದೆ ಗುಣವಂತರಾವ ಪಾಟೀಲ. ತಾಯಿ ಸಂಗಮ್ಮ. ಪ್ರಾರಂಭಿಕ ಶಿಕ್ಷಣ ಹಾಗೂ ಕಾಲೇಜು ಪದವಿ ಶಿಕ್ಷಣವನ್ನು ಬೀದರ್‌ನಲ್ಲಿ ಪಡೆದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ’ಅನುಪಮಾ ನಿರಂಜನರ ಕಾದಂಬರಿಗಳು; ಒಂದು ಅಧ್ಯಯನ” ಎಂಬ ಪ್ರಬಂಧ ಮಂಡಿಸಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್‌.ಡಿ. ಪದವಿ ಪಡೆದರು. ಬೀದರ್‌ನ ಅಕ್ಕ ಮಹಾದೇವಿ ಮಹಿಳಾ ವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ...

READ MORE

Related Books