ಕನಸ ಬೆನ್ನತ್ತಿ ನಡಿಗೆ

Author : ಸಿದ್ದು ಸತ್ಯಣ್ಣವರ

Pages 104

₹ 100.00
Year of Publication: 2017
Published by: ಅಭಿನವ ಪ್ರಕಾಶನ
Address: 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಕವಿ, ಪತ್ರಕರ್ತ ಸಿದ್ದು ಸತ್ಯಣ್ಣವರ ಬರೆದ ’ಕನಸ ಬೆನ್ನತ್ತಿ ನಡಿಗೆ’ ಸೂಕ್ಷ್ಮ ಮನಸ್ಸಿನವನೊಬ್ಬ ಸುತ್ತಲಿನ ಜಗತ್ತನ್ನು ಭಟ್ಟಿ ಇಳಿಸಿಕೊಂಡುದರ ಫಲ.

ಸಿದ್ದು ಸತ್ಯಣ್ಣವರ ಅವರ ಮೊದಲ ಕವನ ಸಂಕನನ ’ಕನಸ ಬೆನ್ನತ್ತಿ ನಡಿಗೆ’. ತಮ್ಮ ವೈಯಕ್ತಿಕ ಸಂಗತಿಗಳು, ಬದುಕು, ವ್ಯಕ್ತಿತ್ವ ಮತ್ತು ತಾನು ಬದುಕುತ್ತಿರುವ ಕಾಲದ ಪ್ರಶ್ನೆಗಳು ಇವೆಲ್ಲವೂ ಕವಿಯ ಕವಿತೆಯೊಳಗಿರುವ ವಸ್ತುಗಳು. ವ್ಯಕ್ತಿಗತ ಎನ್ನಬಹುದಾದ ಗಂಡು ಹೆಣ್ಣಿನ ಸಂದರ್ಭಗಳನ್ನು ಉದ್ದೇಶಿಸುವಷ್ಟೇ ಗಂಭೀರವಾಗಿ ಈ ಕವಿ ಸಮಕಾಲೀನ ಸಮಾಜ ಎದುರಿಸುತ್ತಿರುವ ತಲ್ಲಣಗಳನ್ನು ತಮ್ಮ ಕಾವ್ಯ ರಚನೆಯ ಅಬಿವ್ಯಕ್ತಿಯ ಮೂಲಕ ಹೊರಹಾಕಿದ್ದಾರೆ. ಕೆಲವು ಕವಿತೆಗಳು ಸಾಮಾಜಿಕ ವ್ಯಗ್ರತೆಯನ್ನೂಸೂಚಿಸುತ್ತವೆ. ಏಕಾಂತ ಮತ್ತು ಲೋಕಾಂತಗಳು ಕವಿಗೆ ಸಿದ್ದಿಸುವುದು ಸಾಧ್ಯವಾಗದೇ ಹೋದಾಗ ಕಾವ್ಯದ ಮೊರೆ ಹೋಗುವ ಪರಿಯೂ ಇಲ್ಲಿನ ಕವಿತೆಗಳಲ್ಲಿ ವ್ಯಕ್ತವಾಗಿದೆ. ದಮನಿತ ವರ್ಗದ ಹೋರಾಟಗಳ ಮೂಲ ನಂಬಿಕೆಗಳನ್ನು ಎತ್ತಿಹಿಡಿಯುವ ಕಾವ್ಯ ಧ್ವನಿ ಇಲ್ಲಿ ವ್ಯಕ್ತವಾಗಿದೆ.  ಲೋಕ ವ್ಯಾಪಾರದ ಬಗ್ಗೆ ಅರಿವಿಗಿಂತ ಹೆಚ್ಚು ನಿರೀಕ್ಷೆಗಳು, ಅಪೇಕ್ಷೆಗಳನ್ನು ಹೊತ್ತು ಸಾಗುವ ಕವಿತೆಗಳು ಈ ಸಂಕಲನದಲ್ಲಿದೆ.

ಲೇಖಕಿ ತಾರಣಿ ಶುಭದಾಯನಿ ಆಡಿರುವ ಮಾತುಗಳು ಹೀಗಿವೆ: ’ಈ ಕವಿತಾ ಸಂಗ್ರಹ ಒಂದು ಬಗೆಯ ಡೈರಿಯಂತಿದೆ. ವ್ಯಕ್ತಿಯೊಬ್ಬ ಸಂವೇದನಾಶೀಲನಾದಾಗ ಕಾಣುವ ಸತ್ಯಗಳು ಹಾಗೂ ಅವರಿಗೆ ಅದರಿಂದ ಹುಟ್ಟುವ ಭಾವಗಳು ಕವಿತೆಗಳಾಗುವ ಯತ್ನದಲ್ಲಿ ಅಭಿವ್ಯಕ್ತಗೊಂಡಿವೆ. ಇಲ್ಲಿ ಹರಡಿಕೊಂಡಿರುವ ಕವಿತೆಗಳಲ್ಲಿ ಒಂದು ಸಾಮಾನ್ಯ ಎನಿಸುವಂತಹ ತುಡಿತ ಇಲ್ಲ. ಇಲ್ಲಿನ ಕವಿತೆಗಳನ್ನು ಜಡಿ ಇಡಿಯಾಗಿ ಓದಿದರೆ ಹಲವಾರು ಮಿಂಚುಗಳಿರುವುದನ್ನು ಗುರುತಿಸಬಹುದು. ಈ ಮಿಣುಕುಗಳು ಕವಿಯ ಅಂತರಂಗದ ಪ್ರಾಮಾಣಿಕತೆಯನ್ನು ಮಿನುಗಿಸುತ್ತವೆ.’

About the Author

ಸಿದ್ದು ಸತ್ಯಣ್ಣವರ

ಸದ್ಯ ಧಾರವಾಡದ ನಿವಾಸಿಯಾಗಿರುವ ಕವಿ ಸಿದ್ದು ಸತ್ಯಣ್ಣವರ ಪತ್ರಕರ್ತರೂ ಹೌದು. ಮೂಲತಃ ಗದಗಿನವರಾದ ಸಿದ್ದು ಅವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಹಾನದಿಯ ಹರಿವಿನ ಗುಂಟ’ ಎಂಬ ಪ್ರವಾಸ ಕಥನ ಪ್ರಕಟವಾಗಿದೆ. ಹಾಗೆಯೇ ಕನಸ ಬೆನ್ನತ್ತಿ ನಡಿಗೆ’ ಕವನ ಸಂಕಲನ ಮತ್ತು ’ಹೊಲ ಅಪ್ಪ ಮತ್ತು ನಾನು’ ಎನ್ನುವ ಕೃತಿಗಳು ಪ್ರಕಟಗೊಂಡಿವೆ. ...

READ MORE

Awards & Recognitions

Related Books