ಒಡಲ ನೋವಿನ ದನಿ

Author : ಶರಣು ಆತನೂರ

Pages 58

₹ 70.00
Year of Publication: 2015
Published by: ಜನದನಿ ಸಾಂಸ್ಕೃತಿಕ ಟ್ರಸ್ಟ್
Address: ಮಂಡ್ಯ

Synopsys

ಲೇಖಕ ಶರಣು ಅತನೂರ ಅವರ ಕವನ ಸಂಕಲನ-ಒಡಲ ನೋವಿನ ದನಿ. ಇಲ್ಲಿಯ ಕವಿತೆಗಳಲ್ಲಿ ಹುಡುಕಾಟವಿದೆ. ತವಕ -ತಲ್ಲಣಗಳಿವೆ. ಅನುಭವಗಳು ತಮ್ಮ ಪಾಲಿಗೆ ಹೊಸತು ಎಂಬ ದೃಢ ನಂಬಿಕೆ ಇದೆ. ಬಂಡಾಯದ ಮನೋಧರ್ಮದ ಜೊತೆಗೆ ವಾಸ್ತವಿಕ ಸತ್ಯವನ್ನು ಹೇಳುವ ಮೂಲಕ ಇಂದಿನ ಅವ್ಯವಸ್ಥೆಗೆ ಕನ್ನಡಿಯಾಗಿದೆ. ಹೂ ಬಾಡದಿರಲಿ, ಬಸವಣ್ಣ ಅಂದು-ಇಂದು,ಸೋತು ಗೆದ್ದವರು, ಭಾವಪೂರ್ಣ ಶ್ರದ್ಧಾಂಜಲಿ, ಮಾನವಂತರು, ಬಡವರ ಸರಕಾರ,ಕರುಳಿನ ಮೇಲೆ ಕತ್ತಿ, ಸುದ್ದಿಬುದ್ದಿ,ಗುಡಿ ಕಟ್ಟಿದವರು ನಾವು, ಸ್ವಚ್ಛ ಭಾರತ, ನನ್ನಕ್ಕನ ಕನಸು,ಹೀಗೆ 44 ಕವಿತೆಗಳು ಇದ್ದು, ಎಲ್ಲವೂ ಸತ್ಯದರ್ಶನದ ಕವಿತೆಗಳಿವೆ. ಇತರರು ನಡೆದ ದಾರಿಯಲ್ಲಿ ತಾನೇಕೆ ನಡೆಯಬೇಕು ಎಂಬ ನಿಲುವು ಇದೆ.

ಮಂಢ್ಯದ ಕರ್ನಾಟಕ ಸಂಘದ ಅಧ್ಯಕ್ಷ  ಪ್ರೊ. ಜಯಪ್ರಕಾಶ ಗೌಡ ಅವರು ಕೃತಿಗೆ ಬೆನ್ನುಡಿ ಬರೆದು ‘ಕವಿತೆಗಳು ಮುಗ್ಧ ಮನಸ್ಸಿನ ಪ್ರಾಮಾಣಿಕ ಅಭಿವ್ಯಕ್ತಿಗಳಾಗಿವೆ. ಪ್ರಾಮಾಣಿಕ ವ್ಯಕ್ತಿತ್ವಗಳಿಗಾಗಿ, ಮುಗ್ಧ ಸಮಾಜಕ್ಕಾಗಿ ಹಂಬಲಿಸುತ್ತವೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಶರಣು ಆತನೂರ

ಲೇಖಕ ಶರಣು ಆತನೂರ ಅವರು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಜೇವರ್ಗಿ (ಬಿ) ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಅಫಜಲಪುರದಲ್ಲಿ ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದರು. ಅಫಜಲಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾಗಿ, ಉದಯೋನ್ಮುಖ ಬರಹಗಾರ ಬಳಗದ ಕಾರ್ಯದರ್ಶಿಯಾಗಿ, ಸಾಕ್ಷರತಾ ಗ್ರಾಮ ಸೇನಾನಿಯಾಗಿಯೂ ಸೇವೆ ಸಲ್ಲಿಸಿದ್ದು, ಸದ್ಯ, ಕಲಬುರಗಿ ಮಹಾನಗರ ಪಾಲಿಕೆಯ ತಾತ್ಕಾಲಿಕ ಕರ್ಮಚಾರಿಗಳ ಮೇಲ್ವೀಚಾರಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಕರ್ನಾಟಕ ಪೌರ ಕಾರ್ಮಿಕರ ಮಹಾಸಂಘದ ಜಿಲ್ಲಾ ಅಧ್ಯಕ್ಷರಾಗಿದ್ದಾರೆ. ಇವರು ಬರೆದ ಕವಿತೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕೃತಿಗಳು: ಒಡಲ ನೋವಿನ ದನಿ (ಕವನ ಸಂಕಲನ) ಪ್ರಶಸ್ತಿ-ಪುರಸ್ಕಾರಗಳು: ಸುವರ್ಣಸಿರಿ ಪ್ರಶಸ್ತಿ, ಬುದ್ಧ ...

READ MORE

Related Books