ಹನಿ ಹನಿ ಭಾವ ದನಿ

Author : ಮರುಳಸಿದ್ದಪ್ಪ ದೊಡ್ಡಮನಿ

Pages 64

₹ 60.00
Year of Publication: 2018
Published by: ಪ್ರಜ್ವಲ್ ಪ್ರಕಾಶನ
Address: ಕನಕಶ್ರೀ , ಗಣೇಶ್ ನಗರ, ಹುಲಕೋಟಿ- 582205
Phone: 9448231856

Synopsys

ಕವಿ ಮರುಳಸಿದ್ದಪ್ಪ ದೊಡ್ಡಮನಿ ಅವರ ’ ಹನಿ ಹನಿ ಭಾವ ದನಿ’ ಯು ಹನಿಗನವನಗಳ ಸಂಕಲನವಾಗಿದೆ. 

ಹನಿಗವನಗಳು ಕಾವ್ಯ ಚುಟುಕುಗಳಾಗಿ ಕವಿಯ ಭಾವದಲಿ ಸುಳಿಯುವ ಕೋಲ್ಮಿಂಚಿನಂತೆ ಈ ಕವನ ಸಂಕಲನದಲ್ಲಿ ಕಂಡು ಬಂದಿದೆ. ದಾಹ, ಹಣ್ಣಾದವಳು, ಅವ್ವ, ಅಪ್ಪ, ವಿಪತ್ತು, ಮಾರಿಮ್ಯಾಗ ಮುಂತಾದ ಹನಿಗವನಗಳು ಕವಿಯ ಪಟ್ಟ ಪಾಡನ್ನು ಹಾಡಾಗಿಸುತ್ತ ನಿತ್ಯ ಬದುಕಿನ ಶೋಧ ನಡೆಸುವಲ್ಲಿ ’ಹನಿ ಹನಿ ಭಾವ ದನಿ’ಯಾಗಿ ಮೂಡಿ ಬಂದಿದೆ. 

About the Author

ಮರುಳಸಿದ್ದಪ್ಪ ದೊಡ್ಡಮನಿ
(01 January 1976)

ಕವಿ ಮರುಳಸಿದ್ದಪ್ಪ ದೊಡ್ಡಮನಿಯವರು ಹುಟ್ಟಿದ್ದು ದಿನಾಂಕ 1976ರ ಜನವರಿ 1 ರಂದು ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಗಾವರಾಳದಲ್ಲಿ.  ಗದಗ ಜಿಲ್ಲೆಯ ಹುಲಕೋಟೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪೂರೈಸಿ, ಪದವಿ- ಪೂರ್ವ, ಶಿಕ್ಷಣವನ್ನು ಮುಗಿಸಿದರು.  ತಾಂತ್ರಿಕ ಶಿಕ್ಷಣ, ಮತ್ತು ಸಿ.ವಾಯ್ ಎಸ್ ಕೋರ್ಸ್ ನ್ನು ಪೂರೈಸಿಕೊಂಡು ನಂತರ ಗದಗ ಶಾಖೆಯಲ್ಲಿ ವಿಮಾ ಸಲಹೆಗಾರನಾಗಿ ಬದುಕು ರೂಪಿಸಿಕೊಳ್ಳುತ್ತಾ, ಕವನ, ಲೇಖನ, ಕಥೆಗಳನ್ನು ಬರೆಯುವ ಸಾಹಿತ್ಯ ಕೃಷಿಯನ್ನು ಪ್ರಾರಂಭಿಸಿದರು.  ನಾಡಿನ ಹಲವಾರು ಪ್ರಸಿದ್ದ ಪತ್ರಿಕೆಗಳಲ್ಲಿ ಇವರ ಕವಿತೆ, ಲೇಖನ, ಕಥೆಗಳು ಪ್ರಕಟಗೊಂಡಿವೆ. 2010ರಲ್ಲಿ ’ಮುತ್ತಿನ ಹನಿ’ (ಹನಿಗವನ ಸಂಕಲನ) ಕೃತಿ, ...

READ MORE

Related Books