ಪ್ರತಿಬಿಂಬಗಳು

Author : ದ.ರಾ. ಬೇಂದ್ರೆ (ಅಂಬಿಕಾತನಯದತ್ತ)

Pages 64

₹ 50.00




Year of Publication: 2007
Published by: ಶ್ರೀಮಾತಾ ಪ್ರಕಾಶನ
Address: ವಿಶ್ವಶ್ರಮ ಚೇತನ, ಹುಬ್ಬಳ್ಳಿ-580 003

Synopsys

ಪ್ರತಿಬಿಂಬಗಳು ಬೇಂದ್ರೆಯವರ ಮತ್ತೊಂದು ಅಪ್ರಕಟಿತ ಕವಿತೆಗಳ ಸಂಗ್ರಹ. ಮರಣೋತ್ತರ ಪ್ರಕಟವಾದ ಸಂಗ್ರಹಗಳ ಪೈಕಿ ಇದು 5ನೆಯದು. ಈ ಸಂಕಲನದಲ್ಲಿ 50 ಕವಿತೆಗಳಿವೆ. ಈ ಸಂಕಲನದ ಸಂಪಾದಕರಾದ ವಾಮನ ಬೇಂದ್ರೆಯವರು ’ನನಗೆ ಇವು ಒಂದೇ ಕಡೆಗೆ ದೊರಕಲಿಲ್ಲ.’ ಬೇಂದ್ರೆಯವರು ಓದಿದ ಪುಸ್ತಕಗಳ ಪ್ರತಿ ಪುಟಗಳನ್ನು ತಿರುವುತ್ತ ಹೋದಾಗ , ಸದ್ಯಕ್ಕೆ ದೊರಕಿದವುಗಳನ್ನು ಮಾತ್ರ ಪ್ರಕಟಣೆಗೆ ಅಣಿಗೊಳಿಸಿದೆ.ಕವನಗಳ ಆಕರಗಳ ಪುಸ್ತಕ ಪಟ್ಟಿ ಕೊನೆಗೆ ಅನುಬಂಧವಾಗಿ ಕೊಟ್ಟಿರುವೆ. ಕವನಗಳಿಗೂ ಮತ್ತು ಅವರು ಓದುತ್ತಿರುವ ಪುಸ್ತಕಗಳಿಗೂ ಬಿಂಬ ಪ್ರತಿಬಿಂಬ ಎಂಬ ವಿಚಾರಗಳ ತಾಕಲಾಟ ಇದೆ. ಆದುದರಿಂದಲೂ ನಾನು ಈ ಕವನ ಸಂಗ್ರಹಕ್ಕೆ ‘ಪ್ರತಿಬಿಂಬಗಳು’ ಎಂದು ನಾಮಕರಣ ಮಾಡಿದೆ. ಎಷ್ಟೋ ಕವನಗಳಿಗೆ ತಲೆಬರಹಗಳೇ ಇಲ್ಲ. ಸೂಕ್ತವೆನಿಸುವ ತಲೆಬರಹಗಳ ರಚನೆ ಮಾಡಿದೆ. ಕೆಲವು ಪದ್ಯಗಳು ಅಪೂರ್ಣ ಸ್ಥಿತಿಯಲ್ಲಿದ್ದವು.ಅವುಗಳಿಗೆ ಕೆಲವು ಶಬ್ದ ಸಾಲು ಸೇರಿಸಿ ಪೂರ್ಣ ಮಾಡಿದೆ. ಇಂತವುಗಳನ್ನು ಕಂಸಿನಲ್ಲಿ ಸೂಚಿಸಿರುವೆ’ ಎಂದು ವಿವರಿಸಿದ್ದಾರೆ. ಬೇಂದ್ರೆಯವರಿಗೆ ಎಲ್ಲ ಮತಕ್ಕಿಂತ ಕಾವ್ಯ ಶ್ರೇಷ್ಠ. ಬೇಂದ್ರೆಯವರ ಅಭಿಪ್ರಾಯದಲ್ಲಿ ವ್ಯವಹಾರದ ಕನ್ನಡಿಯಲ್ಲಿ ಪರಮಾರ್ಥದ ಪ್ರತಿಬಿಂಬವೇ ಕಾವ್ಯ. ಕೊನೆಯಲ್ಲಿ ಬೇಂದ್ರೆಯವರ ಕಾವ್ಯಸೃಷ್ಟಿಯ 6ನಿಲುವುಗಳನ್ನು ಕುರಿತು ವಾಮನ ಬೇಂದ್ರೆಯವರು ಬರೆದಿದ್ದಾರೆ.

About the Author

ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
(31 January 1896 - 26 October 1981)

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ (1913) ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (1918) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (1935) ಪದವಿ ಪೂರ್ಣಗೊಳಿಸಿದರು. ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಹುಬ್ಬಳ್ಳಿಯ ನ್ಯೂ ...

READ MORE

Related Books