ಕೃಷ್ಣ ಕಣ್ಣಿನ ನೋಟ

Author : ಸತ್ಯನಾರಾಯಣರಾವ್ ಅಣತಿ

Pages 60

₹ 22.00
Year of Publication: 1995
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು ಸಾಗರ, ಕರ್ನಾಟಕ - 577 417

Synopsys

ಲೇಖಕ ಸತ್ಯನಾರಾಯಣರಾವ್ ಅಣತಿ ಅವರ ಕವನ ಸಂಕಲನ ‘ಕೃಷ್ಣ ಕಣ್ಣಿನ ನೋಟ’. ಕೃತಿಗೆ ಮುನ್ನುಡಿ ಬರೆದ ಎಸ್. ಮಂಜುನಾಥ, ‘ಒಳಿತು ಮತ್ತು ಪ್ರೀತಿಗಳೇ ಧರ್ಮವಾದ ಮನಸೊಂದು ಈ ಕವಿತೆಗಳಲ್ಲಿದೆ. ಬದುಕಿನ ಸೌಂದರ್ಯಕ್ಕಾಗಿ ಹಾತೊರೆಯುತ್ತ ಅದು ಮಾನವೀಯ, ಪ್ರಗತಿಪರ ಮತ್ತು ಅನುಭಾವೀ ಆಶಯಗಳಾಗಿ ಮೈದಾಳಿದೆ. ಜೀವನಶ್ರದ್ಧೆ ಮತ್ತು ಕಾವ್ಯಶ್ರದ್ದೆ ಎರಡನ್ನೂ ಒಂದಾಗಿ ಬೆಸೆದುಕೊಂಡು ಕಾವ್ಯ ನಿರ್ಮಿತಿಯಲ್ಲಿ ತೊಡಗಿರುವ ಅಣತಿಯವರು, ಕನ್ನಡ ಕಾವ್ಯದ ಅವಸ್ಥಾಂತರಗಳಿಗೆ ಸ್ಪಂದಿಸುತ್ತ ತಮ್ಮ ನೋಟ ಮತ್ತು ಶೈಲಿಗಳನ್ನು ಹದಗೊಳಿಸುತ್ತಲೇ ಬಂದಿದ್ದಾರೆ. ಈ ಹಂತದಲ್ಲಿ ವೈಚಾರಿಕ ಜಟಿಲತೆಯನ್ನು ಜಗುಳಿಕೊಳ್ಳುತ್ತ ಇವರ ಭಾವುಕ ಮನಸ್ಸು ಸರಳ ಅನುಕಂಪೆಯ ಉಲ್ಲಾಸಕರ ಕಾವ್ಯ ಸ್ವಾತಂತ್ರದಲ್ಲಿ ವಿಹರಿಸುವುದು ಇಲ್ಲಿ ಕಂಡುಬರುತ್ತದೆ. ಹಾಗೆಂದೇ , ಈ ಕವನ ಸರಣಿಯಲ್ಲಿ 'ಬೆಳಕು' ಪ್ರಧಾನ ರೂಪಕವಾಗಿದೆ. ವ್ಯಕ್ತಿತ್ವದ ಗಾಢ ತೊಡಗುವಿಕೆಯಿಂದಾಗಿ ಸಮರ್ಥ ವಾದ 'ಸರಯೂ ಗಾನ’ ಅರಿವು ಎಂಬುದನ್ನು ತಮ್ಮ ಕಾಲದ ಮನಸ್ಸು, ಭಾಷೆಗಳಲ್ಲಿ ಪಡೆಯಲೆಳೆಸುವ ‘ಬೆಳಕನರಸುವ ಬನ್ನಿ' ಯಂಥ ಕವಿತೆಗಳಿಂದ ಈ ಸಂಕಲನ ಮೌಲಿಕವಾಗಿದೆ.’ ಎಂದು ಪ್ರಶಂಸಿದ್ದಾರೆ.

About the Author

ಸತ್ಯನಾರಾಯಣರಾವ್ ಅಣತಿ
(12 December 1935)

ಕವಿ, ನಾಟಕಕಾರ ಕೆ. ಸತ್ಯನಾರಾಯಣರಾವ್ ಅಣತಿ ಅವರು ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಅಣತಿ ಗ್ರಾಮದವರು. ತಂದೆ-ಎ.ಎನ್. ಮೂರ್ತಿರಾವ್, ತಾಯಿ-ಶ್ರೀಮತಿ ರತ್ನಮ್ಮ . 1935 ಡಿಸೆಂಬರ್ 12, ರಂದು ಜನಿಸಿದ ಅವರು ಹುಟ್ಟಿದ ಊರಾದ ಅಣತಿ, ತಿಪಟೂರು, ಹಾಸನ, ಬೆಂಗಳೂರು, ಧಾರವಾಡಗಳಲ್ಲಿ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ ಸತ್ಯನಾರಾಯಣರಾವ್ ಸಾಹಿತ್ಯಿಕವಾಗಿಯೂ ತಮ್ಮನ್ನು ತೊಡಗಿಸಿಕೊಂಡು ಸಾಹಿತ್ಯ ಕ್ಷೇತ್ರದ ಹಲವು ವಿಭಾಗಳಲ್ಲಿ ಕೃಷಿಮಾಡಿದ್ದಾರೆ.  ಕೃತಿಗಳು: ನೀಲಕುರುಂಜಿ (ಆಯ್ದ ಕವಿತೆಗಳ ಸಂಕಲನ), ಪಾತ್ರಗಳು ಇರಲಿ ಗೆಳೆಯ, ತೆರಕೊಂಡ ಆಕಾಶ, ಕೃಷ್ಣ ಕಣ್ಣಿನ ನೋಟ, ಭೂಮಿ ಬದುಕಿನ ಗಂಧ, ...

READ MORE

Related Books