ನನ್ನ ಶಬ್ದ ನಿನ್ನಲಿ ಬಂದು

Author : ಕೆ.ಪಿ. ಮೃತ್ಯುಂಜಯ

Pages 120

₹ 100.00




Published by: ಲಡಾಯಿ ಪ್ರಕಾಶನ
Address: 21, ಪ್ರಸಾದ ಹೋಟೆಲ್, ಗದಗ- 582101
Phone: 9480286844

Synopsys

ಕವಿ ಮೃತ್ಯುಂಜಯ ಅವರ ರಚನೆಯಲ್ಲಿ ಮೂಡಿಬಂದ ’ನನ್ನ ಶಬ್ದ ನಿನ್ನಲ್ಲಿ ಬಂದು’ ಕವಿತೆಗಳ ಸಂಕಲನ ರೂಪ ಕನ್ನಡ ಕಾವ್ಯ ಲೋಕದ ಅಪರೂಪದ ಕೃತಿ ಎಂದು ಹೇಳಬಹುದು. 

ಎಲ್ಲೆಡೆಯೂ ಧಾವಂತ, ಆತಂಕ, ಅಪಾರವಾದುದನ್ನು ಪಡೆಯುವ ಕಾತರ, ದೊರಕದಿದ್ದರೆ ಎಂಬ ಹತಾಶೆ, ಗದ್ದಲ, ವಾಚಾಳಿತನ ಮತ್ತು ಆಡಂಬರಗಳನ್ನೇ ಮುಖ್ಯ ಲಕ್ಷಣವಾಗಿಸಿಕೊಂಡಿರುವ ಈ ಬಗೆಯ ಹೊರಲೋಕಕ್ಕೆ ಬೆದರದೆ, ತನ್ನ ಧ್ವನಿಯನ್ನು ಕಳೆದುಕೊಳ್ಳದೆ ಮಾತು ಕಟ್ಟುವ ಕಾಯಕ ಬಲು ಸವಾಲಿನದ್ದು.ಅಂತಹ ಕಾವ್ಯ ಸೃಷ್ಟಿ ಈ ಕೃತಿಯಲ್ಲಿದೆ. 

ಕೆ.ಪಿ. ಮೃತ್ಯುಂಜಯ ಈ ಬಗೆಯ ವಿರಳ ಕವಿಗಳಲ್ಲೊಬ್ಬರು. ಭಾವಗಳು ವಿಶಿಷ್ಟ ಶಬ್ದಾರ್ಥಗಳಾಗುವ ಕೌತುಕ ಹಿಂದಿನ ಸಂಕಲನಗಳಂತೆಯೇ ಅವರ ’ನನ್ನ ಶಬ್ದ  ನಿನ್ನಲಿ ಬಂದು’ ಕೃತಿಯಲ್ಲೂ ಆವರಿಸಿದೆ.

ಕವಿಯ ಸ್ಟತಿಯಿಂದ ಹೆಕ್ಕಿದ ಈ ಶಬ್ದಗಳಿಗೆ ಕಸುವು ಬರುತ್ತಿರುವುದೇ ಅವುಗಳಿಗೆ ಪ್ರಾಪ್ತವಾಗಿರುವ ರಸ, ರುಚಿ, ಸಂವೇದನೆಗಳ ಸ್ಪರ್ಶದಿಂದ, ಬುದ್ಧಿಗಿಂತ ಭಾವುಕತೆಗೇ ಹೆಚ್ಚಾಗಿ ಒಲಿದಿರುವ ಅವರ ಸಂವೇದನೆ ಸೃಷ್ಟಿಸುವ ರೂಪಕಗಳು, ನುಡಿಗಟ್ಟುಗಳು ಅತ್ಯಂತ ಸಹಜವಾಗಿವೆ; ಚೆಲುವನ್ನು ತುಂಬಿಕೊಂಡಿವೆ. ಸಂವಾದಿರೂಪದಲ್ಲಿರುವ ಇಲ್ಲಿನ ಕವಿತೆಗಳು ಆ ಕಾರಣದಿಂದಾಗಿಯೇ ಮುಖ್ಯವಾಗಿವೆ. ಮಾತ್ರವಲ್ಲ, ಇಂದಿನ ಕಾವ್ಯ ಸನ್ನಿವೇಶದಲ್ಲಿ ಇಂಥ ಅಪರೂಪದ ಧ್ವನಿಗಳನ್ನು ಕಾಯ್ದುಕೊಂಡು ಬರುತ್ತಿರುವ ಕವಿಗಳು ಇನ್ನೂ ಇದ್ದಾರೆ ಎಂಬುದು ಅಂಥ ಪರಂಪರೆಯ ನಂಬಿಕೆಯನ್ನು ಗಟ್ಟಿಗೊಳಿಸುವುದರಿಂದಲೂ ಇವು ಮುಖ್ಯವಾಗಿವೆ.

About the Author

ಕೆ.ಪಿ. ಮೃತ್ಯುಂಜಯ

ಕೆ.ಪಿ. ಮೃತ್ಯುಂಜಯ ಅವರು ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಡಿ.ಕಲ್ಕೆರೆಯವರು. ತಂದೆ - ಪುಟ್ಟಬಸವಾಚಾರ್ ಕೆ. ತಾಯಿ- ಗಂಗಮ್ಮ. ಕನ್ನಡ ಉಪನ್ಯಾಸಕರಾಗಿದ್ದಾರೆ. ಒಂದು ಅನುರಾಗಕ್ಕಾಗಿ ಎಷ್ಟೆಲ್ಲಾ, ಮರ್ತ್ಯ ಮೀರದ ಮಾತು, ಎಲೆ ಎಸೆದ ಮರ, ಅವರವರ ಸಾವು, ದೊಡ್ಡಮ್ಮ ದೇವತೆಗೆ ಕಣ್ಣು ಧರಿಸಿದ ಹೊತ್ತು, ನನ್ನ ಶಬ್ದ ನಿನ್ನಲಿ ಒಂದು ಅವರ ಪ್ರಕಟಿತ ಕವನಸಂಕಲನಗಳು. ಇವರ ಮೊದಲ ಕವನಸಂಕಲನಕ್ಕೆ 1994ರಲ್ಲಿ ಕಾಂತಾವರ ಕನ್ನಡ ಸಂಘದ ಮುದ್ದಣ್ಣ ಕಾವ್ಯ ಪುರಸ್ಕಾರ, ಎರಡನೇ ಕವನಸಂಕಲನಕ್ಕೆ ಡಾ. ದಿನಕರ ದೇಸಾಯಿ ಕಾವ್ಯ ಪುರಸ್ಕಾರ, ಮೂರನೇ ಕೃತಿಗೆ ವೀಚಿ ಸಾಹಿತ್ಯ ಪ್ರಶಸ್ತಿ, ನಾಲ್ಕನೇ  ...

READ MORE

Related Books