ಆಂತರ್ಯದ ಬೆಳಗು

Author : ಶಿವನಗೌಡ ಪೊಲೀಸ್ ಪಾಟೀಲ್

Pages 80

₹ 100.00
Year of Publication: 2022
Published by: ಅಭಿನವ ಪ್ರಕಾಶನ
Address: ನವಲಹಳ್ಳಿ

Synopsys

ಲೇಖಕ ಶಿವನಗೌಡ ಪೊಲೀಸ್ ಪಾಟೀಲ್ ಅವರ ಕವನ ಸಂಕಲನ ಆಂತರ್ಯದ ಬೆಳಗು. ಭರವಸೆಯೇ ಬದುಕು ಎಂಬ ಉಪಶೀರ್ಷಿಕೆಯನ್ನು ಈ ಕೃತಿ ಹೊಂದಿದೆ. ಜೀವನದ ಅಗಾಧತೆ, ವಿಸ್ತಾರತೆ, ವೈವಿಧ್ಯತೆಗಳ ಹತ್ತು ಹಲವಾರು ವಿಭಿನ್ನ ಅನುಭವಗಳನ್ನು ತಮ್ಮ ವಿವಿಧ ಸಾಹಿತ್ಯದ ಪ್ರಕಾರಗಳಲ್ಲಿ ವ್ಯಕ್ತಪಡಿಸಲು ಪ್ರತಿಯೊಬ್ಬ ಸಾಹಿತಿಯು ಪ್ರಯತ್ನಿಸುತ್ತಲೇ ಇರುತ್ತಾರೆ.ಇಂತಹದೇ ಪ್ರಯತ್ನವನ್ನು ಪಾಟೀಲ ಜೀವನದಲ್ಲಾದ ವೈವಿಧ್ಯಮಯ ಅನುಭವಗಳನ್ನು ಒಂದೆಡೆ ಸೇರಿಸಿ ಅರ್ಥಪೂರ್ಣವಾದ 'ಆಂತರ್ಯದ ಬೆಳಗು" ಶೀರ್ಷಿಕೆಯಡಿ ಕವನ ಸಂಕಲನವನ್ನು ಪ್ರಕಟಿಸುತ್ತಿದ್ದಾರೆ. ಕವನ ಸಂಕಲನದಲ್ಲಿನ ಕವನಗಳು ಜೀವನದ ಆಯಾಮಗಳಾದ,ಸೇವೆ ಸಾಧನೆ, ಹೋರಾಟ, ಪರದಾಟಗಳಲ್ಲದೆ, ತಾಯಿ, ಸಿದ್ದಗಂಗಾಶ್ರೀ,ಶ್ರೀಮತಿ ಸಾವಿತ್ರಿಬಾಯಿ ಪುಲೆ,ಭಗತ್ ಸಿಂಗ್ ರವರಂತಹ ವ್ಯಕ್ತಿಗಳ ಹಾಗೂ ಸಹಬಾಳ್ವೆ,ಸಮಾನತೆ, ಸಮನ್ವಯತೆಯನ್ನು ಚಿತ್ರಿಸುತ್ತಲೇ.ರಕ್ತದಾನ, ದೇಹದಾನ,ನೇತ್ರದಾನಗಳ ಮಹತ್ವ ತಿಳಿಸುವ ಕವನಗಳಿವೆ. ಒಟ್ಟಾರೆ ಕವನಗಳು ಸಂಕ್ಷಿಪ್ತ ಹಾಗೂ ಸರಳವಾಗಿದ್ದು. ವೈವಿಧ್ಯಮಯ ವಿಷಯಗಳ ಆಯ್ಕೆಯೊಂದಿಗೆ ಸಮರ್ಥವಾಗಿ ಅಭಿವ್ಯಕ್ತಿಸಲು ಪ್ರಯತ್ನಿಸಿದ್ದಾರೆ.

About the Author

ಶಿವನಗೌಡ ಪೊಲೀಸ್ ಪಾಟೀಲ್

ಲೇಖಕ ಶಿವನಗೌಡ ಪೊಲೀಸ್ ಪಾಟೀಲ್ ಕೊಪ್ಪಳ ಜಿಲ್ಲೆಯವರು. ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಇವರು, ರಾಜ್ಯಮಟ್ಟದ ಅನೇಕ ಪತ್ರಿಕೆಗಳಲ್ಲಿ ಸಾಮಾಜಿಕ ಕಳಕಳಿಯ ಲೇಖನಗಳನ್ನು ಬರೆದಿದ್ದಾರೆ. ಸಾಮಾಜಿಕ ಕಾರ್ಯಕರ್ತನಾಗಿ, ಲೇಖಕನಾಗಿಯೂ ಗುರುತಿಸಿಕೊಂಡಿದ್ದಾರೆ. ಕೃತಿ: ಆಂತರ್ಯದ ಬೆಳಗು ...

READ MORE

Related Books