ಹಾಡಿನ ಜಾಡು

Author : ಬಿ.ಆರ್. ಲಕ್ಷ್ಮಣರಾವ್

Pages 112

₹ 95.00
Year of Publication: 2018
Published by: ಹಾಸನ ಪ್ರಕಾಶನ

Synopsys

ಕನ್ನಡ ಭಾವಗೀತ ಪ್ರಪಂಚದಲ್ಲಿ ಛಾಪು ಮೂಡಿಸಿದವರು ಬಿ.ಆರ್‌. ಲಕ್ಷ್ಮಣರಾವ್‌. ಈ ಪುಸ್ತಕದಲ್ಲಿ ಒಟ್ಟು  20 ಹಾಡುಗಳಿವೆ. ಹಲವು ಗಾಯಕರ ಕಂಠಸಿರಿಯಲ್ಲಿ ಕನ್ನಡ ಭಾಗಜಗತ್ತಿನೊಳಗೆ ಗಟ್ಟಿಯಾದ ಸ್ಥಾನ ಗಿಟ್ಟಿಸಿದ  ಹಾಡುಗಳಾಗಿವೆ ಇವುಗಳು. ಆ ಹಾಡುಗಳನ್ನು ಹುಟ್ಟಿದ ಸಂದರ್ಭವನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ. ಇಷ್ಟು ಸುಂದರವಾಗಿ ಪದ್ಯ ಬರೆಯಲು ಕವಿಗೆ ಏನು ಪ್ರೇರಣೆ ಇರಬಹುದು?’ ಎಂಬ ಕುತೂಹಲತೆಯನ್ನು ಈ ಪುಸ್ತಕವು ಮೂಡಿಸುತ್ತದೆ.

About the Author

ಬಿ.ಆರ್. ಲಕ್ಷ್ಮಣರಾವ್
(09 September 1946)

ಕವಿ, ಕತೆಗಾರ, ವಿಮರ್ಶಕ ಹಾಗೂ ಚಲನಚಿತ್ರಕಾರ ಬಿ.ಆರ್‌. ಲಕ್ಷ್ಮಣರಾವ್‌ ಅವರು 1946 ಸೆಪ್ಟೆಂಬರ್ 9ರಂದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಗಟ್ಟ ತಾಲ್ಲೂಕಿನ ಚೀಮಂಗಲದಲ್ಲಿ ಜನಿಸಿದರು. ತಂದೆ ರಾಜಾರಾವ್. ತಾಯಿ ವೆಂಕಟಲಕ್ಷ್ಮಮ್ಮ. ಚಿಂತಾಮಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಚಿಂತಾಮಣಿಯ ಪ್ರೌಢಶಾಲೆ ಉಪಾಧ್ಯಾಯರಾಗಿ ವೃತ್ತಿ ಆರಂಭಿಸಿದ ಇವರು ವಿನಾಯಕ ಟುಟೋರಿಯಲ್ಸ್‌ನ ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಸಂಪೂರ್ಣವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.  ಇವರು ಬರೆದ ಪ್ರಮುಖ ಕೃತಿಗಳೆಂದರೆ ಲಿಲ್ಲಿ ಪುಟ್ಟಿಯ ಹಂಬಲ, ಶಾಂಗ್ರಿ-ಲಾ, ಅಪರಾಧಂಗಳ ಮನ್ನಿಸೊ, ಗೋಪಿ ಮತ್ತು ...

READ MORE

Related Books