ಗೋಧೂಳಿ (ಗಝಲ್ ಸಂಕಲನ)

Author : ಮಧುರಾ ಎನ್. ಭಟ್ (ಮಧುರಾ ಮೂರ್ತಿ)

Pages 110

₹ 150.00
Year of Publication: 2021
Published by: ಸಮರ್ಥ ಪ್ರಕಾಶನ
Address: # 64, ಧನ್ಯತ ಬಿಲ್ಡಿಂಗ್, 1ನೇ ಮಹಡಿ, 1ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ರಾಮಯ್ಯ ಎನ್ ಕ್ಲೇವ್, ರಾಜಾರೆಡ್ಡಿ ಬಡಾವಣೆ, ನಾಗಸಂದ್ರ ಅಂಚೆ, ಬೆಂಗಳೂರು-560073
Phone: 7892090956

Synopsys

ಗೋಧೂಳಿ ಎಂಬುದು ಕವಯತ್ರಿ ಮಧುರಾ ಎನ್ ಭಟ್ ಅವರ ಗಜಲ್ ಸಂಕಲನ. ಶಿರಸಿಯ ಸಾಹಿತಿ ದಿನೇಶ್ ಎನ್ ಅಮ್ಮಿನಳ್ಳಿ ಅವರು ಕೃತಿಯ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ‘ಮಧುರಾ ಎನ್. ಭಟ್ ಅವರು ಕವನ, ಭಾವಗೀತೆ, ಭಕ್ತಿಗೀತೆ, ಶಿಶುಗೀತೆ, ದೇಶಭಕ್ತಿ ಗೀತೆ, ಗಝಲ್, ರುಬಾಯಿ, ಚುಟುಕು, ಹನಿಗವನ, ಹಾಯ್ಕುಗಳು, ಮುಕ್ತಕಗಳು ಹೀಗೆ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ನೈಪುಣ್ಯತೆ ಹೊಂದಿದವರು ಚುಟುಕಿನಿಂದ ತಮ್ಮ ಬರಹವನ್ನು ಆರಂಭಿಸಿದ ಇವರು ಈಗ ಎಲ್ಲ ಪ್ರಕಾರಗಳಲ್ಲೂ ಸೈ ಎನಿಸಿಕೊಂಡಿದ್ದಾರೆ. ಇದೀಗ ಎರಡು ಗಝಲ್ ಸಂಕಲನಗಳು ಸಹ ಬಿಡುಗಡೆಗೊಂಡಿವೆ. ಇವರ ಗಝಲ್ ಗಳಂತೂ ಒಂದಕ್ಕಿಂತ ಒಂದು ಚೆಂದವಿರುತ್ತವೆ. ಅರಿವಿನ ಸಂದೇಶ, ಭಕ್ತಿ ಭಾವ ಹಾಗೂ ನೋವು, ನಲಿವಿನ ಎಳೆ ಎಳೆಯನ್ನು ಇವರ ಎಲ್ಲ ಗಝಲ್ ಗಳಲ್ಲಿಯೂ ಕಾಣಬಹುದು. ಸತ್ವ ಪೂರ್ಣವಾದ ಸಾಹಿತ್ಯ ಸಿರಿ ಇವರದು. ಓದುಗರನ್ನು ಆಕರ್ಷಿಸಿ ಹಿಡಿದಿಡುವ ಶಕ್ತಿ ಇವರ ಎಲ್ಲ ರಚನೆಗಳಿಗೂ ಇದೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಮಧುರಾ ಎನ್. ಭಟ್ (ಮಧುರಾ ಮೂರ್ತಿ)
(27 May 1985)

ಕವಯತ್ರಿ ಮಧುರಾ ಎನ್. ಭಟ್ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಗೋಡು ಗ್ರಾಮದವರು. ಹೊನ್ನಾವರದಲ್ಲಿ ವ್ಯಾಸಂಗ ಮಾಡಿದ್ದು, ಸದ್ಯ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದಾರೆ. ತಮ್ಮದೇ ಸಿ ಎನ್ ಸಿ ಮ್ಯಾನ್ಯುಫ್ಯಾಕ್ಚರಿಂಗ್ ಕಂಪನಿ ಹೊಂದಿದ್ದಾರೆ. ಗಝಲ್, ಕವಿತೆ, ಛಂದೋಬದ್ಧ ಕಾವ್ಯ ಹೀಗೆ ಸಾಹಿತ್ಯದ ಹಲವಾರು ಪ್ರಕಾರಗಳ ರಚನೆಯಲ್ಲಿ ಆಸಕ್ತಿ ಹೊಂದಿದ್ದಾರೆ.  ಕೃತಿಗಳು: ಮಧುರ, ಗೋಧೂಳಿ (ಗಜಲ್ ಸಂಕಲನಗಳು) ...

READ MORE

Related Books