ಒಡಲ ಮಾತು

Author : ಸಿ.ಎಸ್. ಆನಂದ

Pages 122

₹ 130.00
Year of Publication: 2022
Published by: ಬೆರಗು ಪ್ರಕಾಶನ
Address: ವಿನಾಯಕ ನಗರ, ಆಲಮೇಲ 586202, ವಿಜಯಪುರ ಜಿಲ್ಲೆ.
Phone: 7795341335

Synopsys

‘ಒಡಲ ಮಾತು’ ಸಿ.ಎಸ್. ಆನಂದ ಅವರ ಕವನಸಂಕಲನವಾಗಿದೆ. ಕೃತಿಯಲ್ಲಿ ಸುಮಾರು ಎಂಟು ನೂರಕ್ಕೂ ಅಧಿಕ ದ್ವಿಪದಿಗಳಿವೆ. ಇಲ್ಲಿಯ ಸಾಲುಗಳಲ್ಲೆಲ್ಲ ಮಾಣಿಕ್ಯದ ದೀಪ್ತಿ, ಮುತ್ತಿನ ಹೊಳಪು ಹರಳುಗಟ್ಟಿದೆ. ಪುಟ್ಟ ಪುಟ್ಟ ವಾಕ್ಯಗಳು, ಒಳಗೆಲ್ಲ ಮನುಷ್ಯ ಬದುಕಿನ ಅನುಭಾವದಮೃತ, ಅಮೂಲ್ಯವಾದ ಅರ್ಥವಂತಿಕೆಯಿಂದ ಬೆರಗನ್ನುಂಟು ಮಾಡುತ್ತವೆ. ಈ ದ್ವಿಪದಿಗಳಲ್ಲಿ ಎರಡು ವಿನ್ಯಾಸಗಳಿವೆ. ಒಂದು ತನಗೆ ತಾನೇ ಮಾತನಾಡಿಕೊಳ್ಳುವ ಸ್ವಗತ ರೂಪ; ಎರಡನೆಯದು ಪ್ರಿಯವಾದ ಜೀವವೊಂದರ ಜೊತೆಗೆ ನಡೆಸುವ ಮಾತುಕತೆ, ಕವಿಯ ಭಾವಭರಿತ ನೆನಪುಗಳೇ ಈ ಒಡಲ ಮಾತಿನ ವಸ್ತು. ಬಹುಮುಖ್ಯವಾಗಿ ಪ್ರೀತಿ ಮತ್ತು ವಿಷಾದ ಭಾವಗಳಿಂದ ಕೂಡಿದ ಈ ದ್ವಿಪದಿಗಳು ಸಾಮಾಜಿಕ ಜವಾಬ್ದಾರಿ, ನೀತಿ ನಿರೂಪಣೆ, ಲೋಕದ ಚಿಂತನೆಗಳಾದ ನೆಲ, ಜಲ, ಪ್ರಕೃತಿ, ಭಾಷೆ, ಸಂಸ್ಕೃತಿ ಮತ್ತು ಜನತೆಯ ಬದುಕಿನ ಕಾಳಜಿ, ಕಲ್ಯಾಣದಂತಹ ವಿಷಯಗಳ ಮೇಲೂ ಬೆಳಕು ಚೆಲ್ಲುತ್ತವೆ. ಇಲ್ಲಿನ ದ್ವಿಪದಿಗಳು ಕೆಲವೊಮ್ಮೆ ಗಜಲ್ ಗಳನ್ನು ನೆನಪಿಸುತ್ತವೆ. ಅಲ್ಲಿನಂತೆ ಇಲ್ಲೂ ಪ್ರೀತಿ, ಪ್ರೇಮ, ವಿರಹ, ಮುನಿಸು, ಶರಣಾಗತಿ, ಕ್ಷಮೆಯ ತರಹದ ಭಾವಗಳಿವೆ. ಮೊದಲ ಓದಿಗೆ ಇವು ಸರಳ ಉಪದೇಶದ ಸುಭಾಷಿತಗಳಂತೆ ಕಂಡರೂ ಲೋಕದ ವ್ಯವಹಾರವನ್ನು ಚಿತ್ರಿಸುವ ಬಗ್ಗೆ ಸಂಕೀರ್ಣವಾಗಿವೆ. ಈ ದ್ವಿಪದಿಗಳು ಯಾವುದೇ ಸಿದ್ಧಾಂತಕ್ಕೆ ಒಳಪಡದೆ, ಎಲ್ಲ ಸಿದ್ಧಾಂತಗಳನ್ನು ಮೀರಿಯೂ ಓದುಗ ವಲಯಕ್ಕೆ ಆಪ್ತವಾಗುತ್ತವೆ; ಇದೇ ಈ ಸಂಕಲನದ ಯಶಸ್ವಿಗೆ ಕಾರಣ. ಒಡಲ ಮಾತಿನ ಈ ಭಾವಗಳು ಎದೆಗೆ ತಟ್ಟುವಂತೆ, ಮನಕ್ಕೆ ಮುಟ್ಟುವಂತೆ ನೈಜತೆಯಿಂದ, ಸಹಜತೆಯಿಂದ ಮತ್ತು ತಾಜಾತನದಿಂದ ಸುಂದರವಾಗಿ ಮೂಡಿಬಂದಿವೆ.

About the Author

ಸಿ.ಎಸ್. ಆನಂದ

ಯುವ ಸಾಹಿತಿ ಸಿ.ಎಸ್. ಆನಂದ: ಮೂಲತಃ ಕಲಬುರಗಿಯವರು. ವೃತ್ತಿಯಿಂದ ಇಂಗ್ಲಿಷ್ ಉಪನ್ಯಾಸಕರು. ಇವರ ಕಥೆ, ಕವನ, ಪ್ರಬಂಧ, ವಿಮರ್ಶಾತ್ಮಕ ಲೇಖನಗಳು ನಾಡಿನ ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವಾಸ್ತವದ ಮತ್ತು ಸಂಕೇತವಾದದ ಪದರುಗಳ ಪರಿಮಿತಿಯನ್ನು ತಮ್ಮ ಕಥೆ-ಕಾವ್ಯದಲ್ಲಿ ಬಹಳ ಸುಲಭವಾಗಿ ಮೀರಲೆತ್ನಿಸುತ್ತ ಮುನ್ನಡೆಸಿದ್ದಾರೆ. ಕಲಬುರಗಿ ಆಕಾಶವಾಣಿ ಕೇಂದ್ರದಿಂದ ಸುಮಾರು ಮೂವತ್ತೂ ಹೆಚ್ಚು ಭಾಷಣಗಳು, ಕಲಬುರಗಿ ದೂರದರ್ಶನ ಕೇಂದ್ರ ಮತ್ತು ಬೆಂಗಳೂರು ದೂರದರ್ಶನ ಚಂದನ ವಾಹಿನಿಯಲ್ಲಿ ಇವರ ಸಂದರ್ಶನಗಳು ಪ್ರಸಾರಗೊಂಡಿವೆ. ಕೃತಿಗಳು:  ಹಡೆದವ್ವ, ಜೀವನದಿ ( ಕಥಾಸಂಕಲನಗಳು), ಒಡಲಹಾಡು, ಮಧುರ ಹನಿಗಳು (ಕವನ ಸಂಕಲನಗಳು) ತಲ್ಲಣಿಸದಿರು ಮನವೆ (ವಚನಗಳ ಸಂಕಲನ), ಬಸವನಾಡಿನ ಬೆಳಕು (ಜಾನಪದ ತ್ರಿಪದಿಗಳ ಸಂಕಲನ), ಸಂಪ್ರೀತಿ (ಮುಕ್ತಕಗಳ ...

READ MORE

Related Books