ಪಂಪನ ಹಾದಿಯಲ್ಲಿ

Author : ಶಫಿ ಸಾದುದ್ದೀನ್

Pages 100

₹ 80.00




Published by: ಕನ್ನಡ ಮತ್ತು ಸಂಸ್ಕೃತಿ ಇಲಾಖೆ

Synopsys

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡ ಉತ್ತರ ಕನ್ನಡದ ಜಿಲ್ಲಾಮಟ್ಟದ ಕವಿಗೋಷ್ಠಿಯೊಂದರಲ್ಲಿ ಹಿರಿಯ ಕವಿಗಳ ಜೊತೆಗೆ ಹೊಸ ತಲೆಮಾರಿನ ಯುವ ಕವಿಗಳೂ ಮಾಡಿರುವ ಕವಿತೆ ವಾಚನ ನಡೆಸಿದರು. ಅದರ ಸಂಗ್ರಹವೇ ಪಂಪನ ಹಾದಿಯಲ್ಲಿ ಎಂಬ ಕೃತಿ.  ಇಲಾಖೆಯ ಸಹಾಯಕ ನಿರ್ದೇಶಕರಾದ ಶಫಿ ಸಾದುದ್ದೀನ್ ಮತ್ತು ನಾಗರಾಜ ಹರಪನ ಹಳ್ಳಿ ಈ ಕಿರು ಸಂಕಲನವನ್ನು ಸಂಗ್ರಹಿಸಿದ್ದಾರೆ. ಕವಿಗೋಷ್ಠಿಯ ಮೊದಲು ಪಂಪ ಪ್ರಶಸ್ತಿ ವಿಜೇತ ಕವಿ ಬಿ. ಎ. ಸನದಿಯೊಂದಿಗೆ ಸಂವಾದ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು. ಆ ಸಂವಾದದ ಸಂಗ್ರಹ ರೂಪವೂ ಈ ಕೃತಿಯಲ್ಲಿದೆ. ಹಾಗೆಯೇ ಬಿ. ಎ. ಸನದಿಯವರ ಕುರಿತ ಪರಿಚಯ ಲೇಖನವನ್ನೂ ನೀಡಲಾಗಿದೆ. ಕಾರವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗರಾಜ ಹರಪನಹಳ್ಳಿಯವರು ಕವಿಯ ಪರಿಚಯದ ಜೊತೆಗೆ ಸಂವಾದದ ಸಾರವನ್ನು ಇಲ್ಲಿ ನಿರೂಪಿಸಿದ್ದಾರೆ.  ಮರಾಠಿ ಭಾಷೆ ತನ್ನೊಳಗಿನ ಅಂತಃಸತ್ವವನ್ನು ಕಡಿಮೆ ಮಾಡದೆ ಹಿಗ್ಗಿಸಿತು ಎಂದು ನೆನೆದುಕೊಳ್ಳುತ್ತಾರೆ. ತನ್ನ ತುಳಸಿ ಕಟ್ಟೆ ಕವಿಯ ಹಿನ್ನೆಲೆಯನ್ನು ಹೇಳುತ್ತಾ ಸೌಹಾರ್ದದ ಅಗತ್ಯವನ್ನು ಕವಿ ಮಂಡಿಸುತ್ತಾರೆ. ಸುಮಾರು 26 ಕವಿತೆಗಳು ಈ ಕೃತಿಯಲ್ಲಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಕೃತಿಯನ್ನು ಹೊರ ತಂದಿದೆ.

Related Books