ಕೇಳದೆ ನಿಮಗೀಗ

Author : ಸಂತೆಬೆನ್ನೂರು ಫೈಜ್ನಟ್ರಾಜ್

Pages 86

₹ 80.00




Year of Publication: 2020
Published by: ಸಚಿನ್ ಪ್ರಕಾಶನ
Address: #624, 2ನೇ ಮಹಡಿ, 9ನೇ ಡಿ ಮುಖ್ಯ ರಸ್ತೆ, ವಿಜಯನಗರ 2ನೇ ಹಂತ, ಬೆಂಗಳೂರು - 560104
Phone: 9986167684

Synopsys

ಕವಿ ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ‘ಕೇಳದೆ ನಿಮಗೀಗ’ ಸಂಕಲನವು 150 ಮಿನಿಗವಿತೆ, ನೀಳ್ಗವಿತೆಯನ್ನುಒಳಗೊಂಡಿದೆ. ಕೃತಿಗೆ ಮುನ್ನುಡಿ ಬರೆದಿರುವ ಕವಿ ನಾಗೇಶ್ ಜೆ. ನಾಯಕ ಅವರು ‘ಪ್ರೀತಿಯಲದ್ದಿ ಬರೆದಂಥಹ, ಎಂತಹ ಕಲ್ಲೆದೆಯವನನ್ನು ಕರಗಿಸಿ ತನ್ನೊಳಗೆ ಆವಾಹಿಸಿಕೊಳ್ಳುವಂತ ತಾಜಾ ಪ್ರೀತಿ, ಕಾಡುವ ವಿರಹ, ನಲ್ಲೆ ಬಿಟ್ಟೆದ್ದು ನಡೆದ ನೋವು, ಒಲವಿಗೆ ಬರೆದ ಭಾಷ್ಯ, ತುಂಬ ಖುಷಿ ನೀಡುವಂಥ, ಇಟಗಿ ಈರಣ್ಣನವರ ಶಾಯರಿಗಳನ್ನು ನೆನಪಿಸುವಂಥ ಕವಿತೆಗಳು ಮೈ ಜುಮ್ಮೆನ್ನುವಂತೆ ಮಾಡುತ್ತವೆ. ಪ್ರೀತಿಯಲಿ ಒಮ್ಮೊಮ್ಮೆ ಯಾರೋ ಬೀಸಿದ ಅಂಗೈಗೆ ಕೆನ್ನೆಯಾಗುವ ವಿಪರ್ಯಾಸ ಇದಿರಾಗುವುದು ಸಹಜ. ಯಾರೋ ಮಾಡಿದ ತಪ್ಪಿಗೆ ಯಾರನ್ನೋ ಹೊಣೆಗಾರನನ್ನಾಗಿಸುವ ಸ್ಥಿತಿ ನೆನಪಿಸುವ ಕವಿತೆಯ ಸಾಲುಗಳು ಹೀಗೀವೆ.... ‘ಒಲವೇ... ಗೀರಿದ್ದು ಕೈಯೇ ಆದರೂ ಆರೋಪ ಕಡ್ಡಿ ಮೇಲೆ, ನೋಡಿದ್ದು ಕಣ್ಣಾದರೂ ಬಿದ್ದಿದ್ದು ದಿಲ್ಲೇ! ‘ಕುಡಿ’ಯದ ಹನಿಗಳು ಅಪಾರ ಅವರು ಹೊರತಂದ ‘ಮದ್ಯಸಾರ’ ಸಂಕಲನವನ್ನು ನೆನಪಿಸುತ್ತವೆ. ಪ್ರೀತಿಯಲ್ಲಿ ಸುಟ್ಟುಕೊಂಡವನ ಹೃದಯ ಜಾಮಿಗೆ ಶರಣಾದರೆ ಅಷ್ಟು ಸುಲಭಕ್ಕೆ ಅವಳ ಸುಡು ಸುಡುವ ನೆನಪಿನಿಂದ ತಪ್ಪಿಸಿಕೊಳ್ಳಲಾದೀತೆ? ಎಂದು ವಿಶ್ಲೇಷಿಸಿದ್ದಾರೆ.

About the Author

ಸಂತೆಬೆನ್ನೂರು ಫೈಜ್ನಟ್ರಾಜ್

ಗೆಳೆಯ ನಟರಾಜ್ ಅವರ ಅಕಾಲಿಕ ಮರಣ ಸೈಯದ್‌ ಫೈಜುಲ್ಲಾ ಅವರಿಗೆ ಅರಗಿಸಿಕೊಳ್ಳಲಾಗಲೇ ಇಲ್ಲ. ಮಿತ್ರ ತನ್ನೊಂದಿಗೆ ಸದಾ ಇರಬೇಕೆಂಬ ಹಂಬಲ. ಪರಿಣಾಮ ತನ್ನ ಹೆಸರಿಗೆ ಗೆಳೆಯನ ಹೆಸರನ್ನು ಸೇರಿಸಿಕೊಂಡರು. ಸಂತೆಬೆನ್ನೂರು ಫೈಜ್ನಟ್ರಾಜ್ ಎಂದು ಬದಲಾದರು.  ಬಹುಶಃ ನಾಡಿನ ಪತ್ರಿಕೆಗಳನ್ನು ನಿಯತಕಾಲಿಕಗಳನ್ನು ನಿರಂತರ ಓದುವವರಿಗೆ ಫೈಜ್ನಟ್ರಾಜ್‌ ಹೆಸರು ಚಿರಪರಿಚಿತ. ಅವರ ಹೆಸರು ನಾಡಿನ ಯಾವುದಾದರೂ ಪತ್ರಿಕೆಯಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಹಾಗೆ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಲೇ ಇರುವ ನಿರಂತರತೆ ಯನ್ನು ಅವರು ಕಾಯ್ದುಕೊಂಡಿದ್ದಾರೆ.  ದಾವಣಗೆರೆ ಜಿಲ್ಲೆ ಚನ್ನಗಿರಿಯ ಸಂತೆಬೆನ್ನೂರು ಗ್ರಾಮದಲ್ಲಿ ಜನನ. ವೃತ್ತಿಯಿಂದ ಪ್ರೌಢಶಾಲಾ ಶಿಕ್ಷಕರು. ’ಎದೆಯೊಳಗಣ ತಲ್ಲಣ’, ...

READ MORE

Related Books