ನಿನ್ನ ಬೆರಳು ತಾಕಿ

Author : ಸದಾಶಿವ್ ಸೊರಟೂರು

Pages 118

₹ 150.00
Year of Publication: 2023
Published by: ಸನ್‌ಸ್ಟಾರ್‌ ಪಬ್ಲಿಷರ್‌
Address: #4/1, ಕುಪ್ಪಸ್ವಾಮಿ ಬ್ಯುಲ್ಡಿಂಗ್‌, 19ನೇ ಕ್ರಾಸ್, ಕಬ್ಬನ್‌ಪೇಟೆ, ಬೆಂಗಳೂರು - 02
Phone: 8022224143

Synopsys

‘ನಿನ್ನ ಬೆರಳು ತಾಕಿ’ ಸದಾಶಿವ ಸೊರಟೂರು ಅವರ ರಚನೆಯ ಕವನಸಂಕಲನವಾಗಿದೆ. ಚುಕ್ಕಿಗಳನ್ನು ಕೂಡಿಸಿದಷ್ಟು ಸುಲಭವಲ್ಲ ಎದೆಗಳನ್ನೂ ಕೂಡಿಸುವುದು''ಮಳೆಯಲ್ಲಿ ಅಳುವುದು ಈರುಳ್ಳಿ ಕತ್ತರಿಸುವಾಗ ಅಳುವುದು ಎರಡೂ ಒಂದೇ ಎಂದು ನೀನು ಹೇಳದೆ ತಿಳಿಸಿದೆ”. ಇಡೀ ಸಂಕಲನದ ಉದ್ದಕ್ಕೂ ಇಂತಹ ಮಾಗಿದ ಸಾಲುಗಳಿವೆ. ಎಲ್ಲವೂ ಅನುಭವ, ಭಾಷೆಯ ಹದವಾದ ಬಳಕೆ, ಅಭಿವ್ಯಕ್ತಿಯಲ್ಲಿನ ಅಪ್ಪಟ ಪ್ರಾಮಾಣಿಕತೆ ನದಿಯ ಸಹಜ ಹರಿವಿನ ಹಾಗೆ ಬಾಗಿ ತೂಗಿಕೊಂಡು ಸ್ವಚ್ಛಂದವಾಗಿ ಒಂದು ಓದಿನ ಸುಖ ನೀಡುತ್ತವೆ.

About the Author

ಸದಾಶಿವ್ ಸೊರಟೂರು
(18 June 1983)

ಸದಾಶಿವ ಸೊರಟೂರು ಇವರು ಮೂಲತಃ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸೊರಟೂರಿನವರು. ಸದ್ಯ ಹೊನ್ನಾಳಿ ನಗರದಲ್ಲಿ ವಾಸ. ಪ್ರೌಢಶಾಲಾ ಶಿಕ್ಷಕರಾಗಿರುವ ಇವರು ಹರಿಹರ ತಾಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಇಲ್ಲಿ ಕರ್ತವ್ಯದಲ್ಲಿದ್ದಾರೆ.  ಸುಮಾರು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವ ಇವರು ಪರಿಸರ ಪ್ರಜ್ಞೆ, ಸಾಮಾಜಿಕ ಕಾಳಜಿ ಮತ್ತು ಮನುಷ್ಯ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲುವ ವಿಷಯಗಳ ಕಡೆ ಲೇಖನಿ ಓಡಿಸಿದ್ದಾರೆ.‌ ಬರೆದ ಯಾವುದೊ‌ ಒಂದು ಸಾಲು ಓದುವ ಯಾರದೊ ಎದೆಯೊಳಗೆ ‌ಅರಿವಿನ ಒಂದಾದರೂ ಕಿಡಿ ಹೊತ್ತಿಸಲಿ ಎಂದು ಕಾದಿದ್ದಾರೆ.‌ ಕಥೆ ಇವರ ಇಷ್ಟದ ...

READ MORE

Related Books