ಬೆವರಬಣ್ಣ

Author : ವಿಜಯಕಾಂತ ಪಾಟೀಲ

Pages 104

₹ 75.00
Year of Publication: 2018
Published by: ನ್ಯೂಸ್‌ ಪ್ಲಸ್‌ ಕಮ್ಯುನಿಕೇಷನ್ಸ್‌
Address: #106, 4ನೇ ಅಡ್ಡರಸ್ತೆ, ಗವಿಪುರಂ ಬಡಾವಣೆ, ಬೆಂಗಳೂರು.
Phone: 9845350317

Synopsys

ಬೆವರಿನ ಬಣ್ಣ -ವಿಜಯಕಾಂತ ಪಾಟೀಲರ ಕವನ ಸಂಕಲನ. ಕೃತಿಯ  ಮುನ್ನುಡಿಯಲ್ಲಿ ಬರೆಯುತ್ತಾ ಲೇಖಕ ಜಿ.ಕೆ. ರವೀಂದ್ರಕುಮಾರ್, ‘ಬೆವರು ಹಾಗೂ ಬಣ್ಣದ ವಿವಿಧ ಆಯಾಮಗಳತ್ತ ಕುತೂಹಲವಿಲ್ಲವಾದರೂ ಅದರ ಗುರುತಿಸುವಿಕೆಯಲ್ಲಿ ತಮ್ಮ ಕವಿತೆಯ ಸಾಂದ್ರತೆ ಕಂಡುಕೊಳ್ಳಲು ಹವಣಿಸಿದ್ದಾರೆ. ‘ಕಣ್ಣೀರಿನ ಹಾದಿ ಬದಲಾದರೂ ಏನೂ ಅನಿಸದ’ ಜಡತ್ವವನ್ನು ಆರೋಪಿಸಿಕೊಂಡಿರುವ ಜನರ ಬಗ್ಗೆ ಅವರ ವಿಷಾದವಿದೆ. ಬೆವರಿಂದಲಾದರೂ ತುಂಬುವುದೇ ಕೆರೆಯ ಒಡಲು’ ಎಂದು ಕಲ್ಪಿಸಿಕೊಂಡಿರುವ ವಿಪರ್ಯಾಸದ ಸ್ಥಿತಿಯ ಬಗ್ಗೆ ಕವಿಗೇ ಬೇಸರವಿದೆ ಎಂದಿದ್ದಾರೆ.

ವರ್ತಮಾನದ ವ್ಯಂಗ್ಯವನ್ನು ಕವಿತೆಯಲ್ಲಿ ಸಮಕಾಲೀನಗೊಳಿಸುವ ಲೇಖಕರ ಆಪೇಕ್ಷೆಗೆ ಈ ಸಂಕಲನದ ಹಲವು ಕವಿತೆಗಳು ಸಾಕ್ಷಿಯಾಗಿವೆ. ಈ ಸಂಕಲನದ ಒಂದು ಕವಿತೆ ಓದಿಗಾಗಿ: `ಅಪರಾಧಿಯಾಗಿ ನಾ ಆಡಿದ ಮಾತುಗಳೆಲ್ಲವನ್ನೂ ಆರೋಪಗಳೇ ಎಂದು ನೀ ಎಣಿಸುವೆಯಾದರೆ, ಅಪವಾದ ರಹಿತ ಮನುಷ್ಯನಾಗಿ ನಾನಿರಲು ಇಷ್ಟ ಪಡುವುದಿಲ್ಲ; ಅಪರಾಧಿಯಾಗಿಯೇ ಇದ್ದುಬಿಡುತ್ತೇನೆ’ ಅದು ಸುಖವೋ ಸಖ್ಯವೋ ದುಃಖವೋ ಎಲ್ಲ ಬಲ್ಲ ಈ ನೆಲವೇ ನಿರ್ಧರಿಸಲಿ..!

About the Author

ವಿಜಯಕಾಂತ ಪಾಟೀಲ
(09 August 1969)

ವಿಜಯಕಾಂತ ಪಾಟೀಲ- ಹಾನಗಲ್ಲ ತಾಲೂಕಿನ ಕ್ಯಾಸನೂರಿನಲ್ಲಿ 1969 ರ ಅಗಸ್ಟ್ 9ರಂದು ಹುಟ್ಟಿದ್ದು; ಪ್ರಾಥಮಿಕ, ಪ್ರೌಢಶಿಕ್ಷಣ: ಕ್ಯಾಸನೂರು, ಶಕುನವಳ್ಳಿ (ಸೊರಬ); ಪಿಯುಸಿಯಿಂದ ಎಂ.ಎ (ಅರ್ಥಶಾಸ್ತ್ರ), ಎಲ್‌ಎಲ್‌ಬಿ ಧಾರವಾಡ; ಮೈಸೂರು ವಿವಿಯಲ್ಲಿ ಪತ್ರಿಕೋದ್ಯಮ ಡಿಪ್ಲೋಮಾ; ಸದ್ಯ ಹಾನಗಲ್ಲಿನಲ್ಲಿ ನ್ಯಾಯವಾದಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ, ಹಾನಗಲ್ಲಿನ ಕನ್ನಡ ಯುವಜನ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕ. ಪ್ರಕಟಿತ ಕೃತಿಗಳು: ಮಾಸದ ಕಲೆಗಳು (1994), ಸಲಸಲದ ಪಾಡು : (2003), ನೂರು ಬಣ್ಣದ ಕಣ್ಣು (2012), ಹೌದು ನಾನು ಕೌದಿ (2013), ಇಂತಿ ನದಿ (20050)ಕವನ ಸಂಕಲನ. ಪ್ರಬಂಧ: ವಜನುಕಟ್ಟು (2005), ಮಕ್ಕಳ ಸಾಹಿತ್ಯ: ...

READ MORE

Related Books